ಗ್ರಾಮೀಣ ಯುವ ಕ್ರೀಡಾಸ್ಪರ್ಧೆ ಶ್ಲಾಘನೀಯ; ಜವಳಿ ಉದ್ಯಮಿ ಬಿ.ಸಿ ಉಮಾಪತಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ‌.೧೯;: ಕ್ರೀಡಾಕೂಟದಿಂದ ಯುವಕ-ಯುವತಿಯರಲ್ಲಿ ನವ ಚೇತನ್ಯ ತುಂಬುವುದರ ಜೊತೆಗೆ ಆರೋಗ್ಯದ ದೃಢತೆಯನ್ನು ಕಾಪಾಡುವಲ್ಲಿ ಇದು ಸಹಕಾರಿಯಾಗುತ್ತದೆ ಎಂದು ಜವಳಿ ಉದ್ಯಮಿ ಬಿ. ಸಿ. ಉಮಾಪತಿ ಹೇಳಿದರು.ಸಿರಿಗೆರೆಯಲ್ಲಿ ಇದೆ ತಿಂಗಳು 22 ರಿಂದ 24ರ ವರೆಗೆ ಜರುಗಲಿರುವ 76ನೇ ವರ್ಷದ ತಳುಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಯುವ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ಹೊಸ ಹುರುಪು, ಉತ್ಸಾಹ ತುಂಬುತ್ತದೆ. ಬದುಕಿಗೆ ನವೋಲ್ಲಾಸ ಬರುತ್ತದೆ. ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು‌.ಸಮಾಜದ ಮುಖಂಡರು ಆದ ಶಿವನಹಳ್ಳಿ ರಮೇಶ್ ಮಾತನಾಡಿ, ತರಳಬಾಳು ಜಗದ್ಗುರುಗಳು ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಗ್ರಾಮೀಣ ಯುವಕ ಯುವತಿಯರಲ್ಲಿ ನವೋತ್ಸಹ ತುಂಬಿ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಾವಣಗೆರೆ ತಾಲೂಕು ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಮಾಜದ  ಅಧ್ಯಕ್ಷರಾದ ಹೆಚ್.ಡಿ. ಮಹೇಶ್ವರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ  ತಳಬಾಳು ಜಗದ್ಗುರುಗಳವರು ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ ಎಂದರು.ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಸಂಘದ  ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ, ಸಮಾಜ ಮುಖಂಡರಾದ ಶ್ರೀನಿವಾಸ್ ಶಿವಗಂಗಾ, ಪಾಲಿಕೆ ಸದಸ್ಯರಾದ ಗೀತಾ ದಿಳ್ಯೆಪ್ಪ, ಶಿವಸೈನ್ಯದ ಅಧ್ಯಕ್ಷ ಉಮೇಶ್ ಮಾಗನೂರ್, ಕುಮಾರ್ ಮಳ್ಳಿಕಟ್ಟೆ, ಕೊರಟಿಕೆರೆ ಶಿವಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು