
ಕೋಲಾರ,ಜು,೧೧- ಗ್ರಾಮೀಣ ಮಹಿಳೆಯರು ಅರ್ಥಿಕವಾಗಿ ಸಧೃಡವಾಗಲು ಹೈನುಗಾರಿಕೆ ವೃತ್ತಿಯು ಪೂರಕವಾಗಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಕಾಂತಮ್ಮ ಸೋಮಣ್ಣ ಅಭಿಪ್ರಾಯ ಪಟ್ಟರು.
ನಗರದ ಸ್ಕಾಟ್ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ,ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ, ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಆಯೋಜಿಸಿದ್ದ ಒಂದು ದಿನದ ವಿಶೇಷ ತರಭೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಸರ್ಕಾರವು ಸಹಕಾರ ಕ್ಷೇತ್ರಗಳಿಗೆ ನೀಡುವ ಸೌಲಭ್ಯಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕು, ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಮಕ್ಕಳಿಗೆ ನೀಡುವಂತ ಉನ್ನತ ಶಿಕ್ಷಣದ ಸೌಲಭ್ಯಗಳನ್ನು ಸದ್ಬಳಿಸಿ ಕೊಂಡು ಸಮಾಜ ಮುಖಿಗಳಾಗಿ ರೂಪಿಸ ಬೇಕು ಎಂದರು.
ಡಿಸಿಸಿ ಬ್ಯಾಂಕ್ ಹೈನುಗಾರಿಕೆಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ವಿಮೆ ಸೌಲಭ್ಯವನ್ನು ಸದ್ಬಳಿಸಿ ಕೊಳ್ಳ ಬೇಕು, ಗುಣ ಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡುವ ಮೂಲಕ ಉತ್ತಮ ಹೆಸರು ಗಳಿಸುವಂತಾಗ ಬೇಕು, ಮಹಿಳಾ ಸಂಘಟನೆಗಳನ್ನು ಹೈನುಗಾರಿಕೆ ಮೂಲಕ ಬೆಳೆಸುವಂತಾಗ ಬೇಕೆಂದು ಕರೆ ನೀಡಿದರು,
ಕೋಚಿಮುಲ್ ವ್ಯವಸ್ಥಾಪಕರಾದ ಡಾ.ಎ.ಸಿ. ಶ್ರೀನಿವಾಸಗೌಡ ಮಾತನಾಡಿ ಸಹಕಾರ ಒಕ್ಕೂಟದ ವತಿಯಿಂದ ನೀಡಲಾಗುತ್ತಿರುವ ಲೆಕ್ಕಪುಸ್ತಕಗಳ ನಿರ್ವಹಣೆ, ಕಾನೂನುಗಳ ತಿದ್ದುಪಡಿಗಳು ಮತ್ತು ಕಾರ್ಯನಿರ್ವಾಕ ಅಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಮತ್ತು ಒಕ್ಕೂಟದಿಂದ ದೊರೆಯುವಂತ ಸೌಲಭ್ಯಗಳ ಕುರಿತು ನೀಡುವ ತರಭೇತಿಗಳನ್ನು ಸದ್ಬಳಿಸಿ ಕೊಳ್ಳುವ ಜೂತೆಗೆ ನಿಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿ ಕೊಳ್ಳಬೇಕೆಂದು ತಿಳಿಸಿದರು,
ಪ್ರತಿ ವರ್ಷ ಅಡಿಟ್ ಮಾಡಿಸ ಬೇಕಾಗುವುದು, ಪ್ರತಿ ತಿಂಗಳು ಸಂಘದ ಸಭೆಯಲ್ಲಿ ಜಮಾ ಖರ್ಚುಗಳ ವರದಿಯನ್ನು ಆಡಳಿತ ಮಂಡಳಿಯು ಸದಸ್ಯರಿಗೆ ಮಾಹಿತಿ ನೀಡಬೇಕೆಂದು ಜವಾಬ್ದಾರಿಗಳನ್ನು ವಿವರಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಎಸ್.ಸುರೇಶ್ ಮಾತನಾಡಿ ಹಾಲು ಅಮೃತಕ್ಕೆ ಸಮಾನವಾಗಿದೆ. ಹಾಲನ್ನು ಉತ್ಪಾದಿಸುವಂತ ಹೈನುಗಾರಿಕೆ ವೃತ್ತಿಯು ಅತ್ಯಂತ ಪವಿತ್ರವಾದದ್ದು ಹಸುಗಳನ್ನು ಸಾಗಣಿಕೆ ಮಾಡುವಂತವರು ಅತ್ಯಂತ ಶ್ರೇಷ್ಠತೆ ಸಾಲಿಗೆ ಸೇರಿದವರಾಗಿದ್ದಾರೆ ಎಂದು ಶ್ಲಾಘಸಿದರು,