ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆಗೆ ಹೆಚ್ಚಿನ ಪ್ರಚಾರ ಕೊಡಬೇಕು: ತಾ.ಪಂ.ಇಒ

ಬಸವಕಲ್ಯಾಣ: ಸೆ.11:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಕೊಡುವ ಜವಬ್ದಾರಿ ನಿಮ್ಮ ಮೇಲಿದೆ. ಅದನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಕ ಮಿತ್ರರು ಪ್ರಾಮಾಣಿಕವಾಗಿ ಮಾಡುವ ಮೂಲಕ ಯೋಜನೆ ಯಶಶ್ವಿಗೊಳಿಸಬೇಕು ಎಂದು ಇಲ್ಲಿಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಕಾರಿ ಕಿರಣ್ ಪಾಟೀ¯ ಹೇಳಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾಯಕ ಮಿತ್ರರಿಗೆ ಗುರುವಾರ ಹಮ್ಮಿಕೊಂಡ ತರಬೇತಿ ಮತ್ತು ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರು ನಿಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ವಯಕ್ತಿಕ ಮತ್ತು ಸಮುದಾಯದಡಿ ನಡೆದ ಉತ್ತಮ ಕಾಮಗಾರಿಗಳ ಚಿತ್ರಗಳು ಸಂಗ್ರಹ ಮಾಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡುವ ಕೆಲಸ ಮಾಡಬೇಕು. ಅಂದಾಗ ಮಾತ್ರ ನೀವು ಕೆಲಸ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶರಾದ (ನರೇಗಾ) ಮಹಾದೇವ eಮ್ಮು ಅವರು ಮಾತನಾಡಿ, ಕಾಯಕ ಮಿತ್ರರು ನಿಮ್ಮ ಜಾರ್ಬ್ ಚಾರ್ಟ್ ಪ್ರಕಾರ ಕೆಲಸ ಮಾಡಬೇಕು ಮತ್ತು 1 ಟೂ 7 ದಾಖಲಾತಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು. ನಂತರ ಟಿಸಿ ಸುಧಾಕಾರ್ ಪಾಟೀಲ್ ಹಾಗೂ ಐಇಸಿ ಸಂಯೋಜಕ ವೀರಾರೆಡ್ಡಿ ಮಾತನಾಡಿದರು.

ಈ ಸಂದರ್ಭದಲ್ಲಿ ನರೇಗಾ ವಿಷಯ ನಿರ್ವಾಹಕ ರಾಕೇಶ ಐನೋಳ್ಳಿ, ಆಡಳಿತ ಸಹಾಯಕ ತ್ರಿವೇಣಿ, ಮಹಾದೇವ ಮಂಠಾಳೆ ಸೇರಿದಂತೆ ಮತ್ತಿತರರು ಇದ್ದರು. ಐಇಸಿ ಸಂಯೋಜಕ ವೀರಾರೆಡ್ಡಿ ನಿರೂಪಿಸಿ, ವಂದಿಸಿದರು.