ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಿದಲ್ಲಿ ಪ್ರಜಾ ಪ್ರಭುತ್ವದ ರಕ್ಷಣೆ ಸಾಧ್ಯ : ಟಿ.ಹೆಚ್.ಎಂ ಬಸವರಾಜ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.12: ಗ್ರಾಮೀಣ ಮಕ್ಕಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಶಿಕ್ಷಣ ನೀಡಿದಾಗ ಸಮಾಜದ ಏಳ್ಗೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯನ್ನು ಮಾಡಲು ಸಾಧ್ಯ ಎಂದು  ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ಅಭಿಪ್ರಾಯಪಟ್ಟರು.
ಅವರು, ತಾಲೂಕಿನ ಕೊರ್ಲಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ , ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಗ್ಗಲು ಇವರ ಸಹಾಯದಲ್ಲಿ ಆಯೋಜಿಸಿದ್ದ  ಒಂಬತ್ತು ದಿನಗಳ ಕಾಲ ದಸರಾ ಸಾಂಸ್ಕೃತಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಾಲ್ಯದಲ್ಲೇ ನಾಟಕ, ಸಂಗೀತ. ನೃತ್ಯ ಪ್ರಕಾರಗಳನ್ನು ತರಬೇತಿ ನೀಡಿದರೆ ಅದರ ಮೂಲಕ ಸಮಾಜಮುಖಿಯಾಗಿ ದೇಶ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರು. .
ಸಾಂಸ್ಕೃತಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ರಜೆಯಲ್ಲಿ ಬಹುಮುಖ ಪ್ರತಿಭೆ ಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ  ಸಂಸ್ಕೃತಿಯ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡೋಣ ಎಂದು ಅದ್ಯಕ್ಷತೆ ವಹಿಸಿದ ಮುಖ್ಯ ಗುರುಗಳಾದ ರಮೇಶ್ ಕೊರಲಗುಂದಿ ಅವರು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ರತಿ ಮೇಡಂ ಶಿಕ್ಷಕರು ಕೊರಲಗುಂದಿ, ಆತ್ರೇಯ ಸಂಸ್ಕೃತ ಶಿಕ್ಷಕರು, ನಾಗರಾಜ್ ಶಿಕ್ಷಕರು, ತಿಪ್ಪೇಸ್ವಾಮಿ ಇಂಗ್ಲಿಷ್ ಶಿಕ್ಷಕರು, ಸಂಗೀತ ಸಂಪನ್ಮೂಲ ವ್ಯಕ್ತಿ ಗಳಾದ ಬೀ. ಖಾಸಿಂ ಅಲಿ ನಾಟಕ ಸಂಪನ್ಮೂಲ ವ್ಯಕ್ತಿ ಗಳಾದ ನೇತಿ ರಘು ರಾಮ್ ಕು. ಮೀರಾಬಾಯಿ  ಸಿ ಆರ್ ಪಿ ಗಳಾದ ರವಿಚಂದ್ರ ಹಾಗೂ  ಸಾಹಿತ್ಯ ಪರಿಷತ್: ಅದ್ಯಕ್ಷರು ಗುರುಬಸಯ್ಯ, ರಮೇಶ್, ತಿಪ್ಪಾರೆಡ್ಡಿ,  ತಿಪ್ಪೇಸ್ವಾಮಿ ಶಿಕ್ಷಕರು
 ಅನಿಲ್ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಅದ್ಯಕ್ಷರು ಅಣ್ಣಾಜಿ ಕೃಷ್ಣಾ ರೆಡ್ದಿ ಉಪಸ್ಥಿತರಿದ್ದರು.

One attachment • Scanned by Gmail