ಗ್ರಾಮೀಣ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಜಾಗೃತಿ

ಆಳಂದ ;ಎ.1: ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಟಿತ ಕಂಡು ಬರುತ್ತಿದ್ದು ಅದನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ತಹಸೀಲ್ದಾರ ಎಲ್ಲಪ್ಪ ಸುಬೆದಾರ ಹೇಳಿದರು. ಆಳಂದ ಪಟ್ಟಣದಲ್ಲಿ ಕೇಂದ್ರ ಸರಕಾರ ಯೋಜನೆಯಾದ ಪೋಷಣಾ ಅಭಿಯಾನ ಪ್ರಯಕ್ತ ಪೋಷಣಾ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಸರಕಾರದ ಯೋಜನೆಯಾದ ಪೋಷನಾ ಅಭಿಯಾನದಲ್ಲಿ ಇಂದು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಉತ್ತಮ ಆಹಾರಗಳನ್ನು ಅಂಗನವಾಡಿ ಮೂಲಕ ನೀಡುತ್ತಿದೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು, ಶಿಶು ಅಭಿವೃದ್ದಿ ಯೋಜನಾಧಿಕಾರ ಶಿವಮೂರ್ತಿ ಕುಂಬಾರ ಮಾತನಾಡಿ ಪೋಷಣ ಅಭಿಯಾನ ಗರ್ಬಿಣಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರಬಾರದು ಎಂದು ಪ್ರತಿ ತಿಂಗಳು ಮೊಟ್ಟೆ ಮೊಳಕೆ ಕಾಳು ಆಹಾರ ಧ್ಯಾನ್ಯಗಳನ್ನು ನೀಡುತ್ತಿದೆ. ಆದರೂ ಕೂಡಾ ಬಹಳಷ್ಟು ಕಡೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಅದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಪೋಷಣಾ ಅಭಿಯಾದ ಅರಿವು ಮೂಡಿಸುವುದು ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಪೋಷಣಾ ರಥಕ್ಕೆದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ತಾ.ಪಂ ಕಾರ್ಯನಿರ್ವಾಹ ಅಧಿಕಾರಿ ನಾಗಮೂರ್ತಿ ಶಿಲವಂತ ರಥಕ್ಕೆ ಹಸಿರು ನಿಶಾನೆ ತೋರಿಸಿದರು. ಹಿರಿಯ ಹಾಗೂ ಕಿರಿಯ ಮೇಲ್ವಿಚಾರಕರು ಇತರರು ಇದ್ದರು.