ಗ್ರಾಮೀಣ ಭಾಗ: ಸ್ಪರ್ಧಾತ್ಮಕ ತರಬೇತಿ ಕಾರ್ಯ ಶ್ಲಾಘನೀಯ

ಮಾನ್ವಿ.ನ.09- ಸುಮಾರು 40 ಗ್ರಾಮದ ಕೇಂದ್ರಬಿಂದುವಾಗಿರುವ ಪೋತ್ನಾಳ ಗ್ರಾಮದಲ್ಲಿ ಸ್ಪರ್ಧಾ ಸಂದೇಶ್ ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಆರಂಭದ ಕಾರ್ಯ ಶ್ಲಾಘನೀಯ ಎಂದು ತಾಲ್ಲೂಕ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಎಚ್ ಶರ್ಪುದ್ದಿನ್ ಹೇಳಿದರು.
ತಾಲೂಕಿನ ಪೋತ್ನಾಳ ಗ್ರಾಮದ ಜೆಎಂಎಸ್ ಹಾಗೂ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ರವರ ಸಂಯುಕ್ತಾಶ್ರಯದಲ್ಲಿ ಸ್ಪರ್ಧಾ ಸಂದೇಶ ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ 1ದಿನದ ಉಚಿತ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಪೋತ್ನಾಳ ಗ್ರಾಮದ ಅಕ್ಕ ಪಕ್ಕದಲ್ಲಿರುವ ಸುಮಾರು ನಲವತ್ತು ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಪರ್ಧಾ ಸಂದೇಶ್ ಕರಿಯರ್ ಅಕಾಡೆಮಿ ಪೋತ್ನಾಳ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭ ಮಾಡಿರೋದು ಶ್ಲಾಂಘನೀಯವಾದದ್ದು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಸದುಪಯೋಗ ಪಡೆದುಕೊಂಡು ಸರಕಾರಿ ನೌಕರರಾಗಬೇಕು ಈ ಸ್ಪರ್ಧಾ ಸಂದೇಶ್ ಕರಿಯರ್ ಅಕಾಡೆಮಿ ಪೋತ್ನಾಳ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ನಾವು ಕೂಡ ಅಳಿಲುಸೇವೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಫಾದರ್ ಸತೀಶ್ ಫರ್ನಾಡಿಸ್ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಆರಂಭ ಮಾಡಿರುವುದು ಒಳ್ಳೆಯದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿ ಪಡೆದುಕೊಂಡು ಸರಕಾರಿ ಅಥವಾ ಖಾಸಗಿ ಉದ್ಯೋಗಗಳಲ್ಲಿ ತೊಡಗಿಕೊಂಡು ತಮ್ಮ ತಮ್ಮ ಕುಟುಂಬ ನಿಭಾಯಿಸಿಕೊಂಡು ಹೋಗಬೇಕೆಂದು ಹೇಳಿದರು.
ನಂತರ ಶರಣು ಮಾಗನೂರು ರವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿಚಾರಣೆಯ ಗುರುಗಳಾದ ವಂದನೀಯ ಫಾದರ್ ಥಾಮಸ್,ಹಿರಿಯ ಮುಖಂಡರಾದ ದೇವಪುತ್ರಪ್ಪ ಮುದ್ದನಗುಡಿ, ಮೈಕಲ್ ಕೊಡ್ಲಿ ಉದ್ಬಾಳ,ಹೋರಾಟಗಾರರಾದ ಬಸವರಾಜ ನಕ್ಕುಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ ಬೆಳವಾಟ,ಚಿನ್ನಮ್ಮ ಮುದ್ದನಗುಡ್ಡಿ,ಹನುಮೇಶ್ ನಾಯಕ್ ಜಿನೂರ,ಉಪನ್ಯಾಸಕರಾದ ಶರಣುಕುಮಾರ್ ಮುದ್ದನಗುಡಿ, ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.