ಗ್ರಾಮೀಣ ಭಾಗದ ಹಳ್ಳಿ ಯುವಕನಲ್ಲಿ ಅರಳಿದ ಕ್ರೀಡಾ ಪ್ರತಿಭೆ

ಕೋಲಾರ,ಏ.೨೭: ಸಣ್ಣ ಬಡ ಕುಟುಂಬದಲ್ಲಿ ಜನಸಿ, ಕಷ್ಟಗಳೊಂದಿಗೆ ಬೆಳೆದು ಸರ್ಕಾರಿ ಶಾಲಾ ಹಾಗೂ ಕಾಲೇಜಿನಲ್ಲಿ ಶಿಕ್ಷಣ ಪಡೆದು ಖೋಖೋ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಕ್ರೀಡಾ ಅಭಿಮಾನಿಗಳಿಗೆ ಆದರ್ಶವಾಗಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಏಫ್ ತಾಲ್ಲೂಕಿನ ವೆಂಗಸಂದ್ರ ಗ್ರಾಮ ಪಂಚಾಯಿತಿಯ ಗೋಪೇನಹಳ್ಳಿ ಗ್ರಾಮದ ಯುವಕ ಸಂಕೀರ್ಥ ಎಂಬ ಯುವಕನಲ್ಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಪ್ರತಿಭೆಯು ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ.


ಗೋಪೇನಹಳ್ಳಿ ಗ್ರಾಮದಲ್ಲಿ ಜನಿಸಿರುವ ಸಂಕೀರ್ಥನಿಗೆ ೧೦ನೇ ತರಗತಿಯ ವರೆಗೂ ಕ್ರೀಡೆಯ ಗಂಧದ ಬಗ್ಗೆಯೇ ತಿಳಿಯದೆ ಬೆಳೆದು ಬಂದ ಈ ಯುವಕನಿಗೆ ಕಾಲೇಜು ಶಿಕ್ಷಣದ ದಿನಗಳಲ್ಲಿ ಕ್ರೀಡೆಯ ಮನೋಭಾವ ಹೆಚ್ಚಿಸಿತ್ತು.
ಸುಂದರಪಾಳ್ಯ ಕಾಲೇಜಿನಿಂದ ಕ್ರೀಡಾ ಮಾರ್ಗ: ಸುಂದರಪಾಳ್ಯ ಸರ್ಕಾರಿ ಪಧವಿ ಪೂರ್ವ ಕಾಲೇಜಿಗೆ ೨೦೧೧-೧೨ನೇ ಸಾಲಿನಲ್ಲಿ ಪಿಯುಸಿ ವಿದ್ಯಾಭ್ಯಾಸಕ್ಕೆ ದಾಖಲಾದ ಮೇಲೆ ಕಾಲೇಜಿನ ಸ್ನೇಹಿತರ ಹಾಗೂ ಉಪನ್ಯಾಸಕ ಎನ್.ಕುಮಾರ್ ಅವರ ಮಾರ್ಗದರ್ಶನದಲ್ಲಿ ಖೋಖೋ ಆಟದ ಮೂಲಕ ಕ್ರೀಡೆಗೆ ಹೆಜ್ಜೆ ಇಟ್ಟ ಸಂಕೀರ್ಥ ಪಿಯುಸಿ ವಿದ್ಯಾಭ್ಯಾಸದ ದಿನಗಳಲ್ಲಿಯೇ ತಾಲ್ಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದ ವರೆಗೂ ಖೋಖೋ ಆಟದಲ್ಲಿ ಜಯಗಳಿಗೆ ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡು ಕಾಲೇಜಿಗೆ ಹಾಗೂ ತಮ್ಮ ಗ್ರಾಮಕ್ಕೆ ಕೀರ್ತಿ ತಂದುಕೊಂಟ್ಟ ಯುವಕನ್ನಾಗಿ ಬೆಳೆದಿದ್ದಾನೆ.
ಪದವಿ ಕಾಲೇಜಿನಲ್ಲಿಯೂ ಕ್ರೀಡೆಗೆ ಒತ್ತು: ಇಲ್ಲಿನ ಬಂಗಾರು ತಿರುಪತಿ ದೇವಾಲಯದ ಆಸ್ಥನದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾದ ಸಂಕೀರ್ಥ ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನವಾದ ಆಸಕ್ತಿಯನ್ನು ನೀಡಿ, ಖೋಖೋ ಆಟಕ್ಕೆ ತನ್ನದೆ ಆದ ತಂಡವನ್ನು ರಚಿಸಿಕೊಂಡು ೩ ವರ್ಷಗಳಲ್ಲಿಯೂ ತಂಡದೊಂದಿಗೆ ನಿರಂತರವಾಗಿ ದೈಹಿಕ ಶಿಕ್ಷಕ ಸತೀಶ್ ರವರಿಂದ ತರಬೇತಿ ಹಾಗೂ ಮಾರ್ಗದರ್ಶನ ಪಡೆದು ಜಿಲ್ಲಾ, ರಾಜ್ಯ, ಅಂತರ ಕಾಲೇಜು ಹಾಗೂ ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಜಯವನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರವೇಶ್: ಸಂಕೀರ್ಥ ಪದವಿ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರು ನಗರಕ್ಕೆ ಬಂದ ಸಂಕೀರ್ಥನಿಗೆ ಬೆಂಗಳೂರು ವಿಶ್ವ ವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಡೊಳ್ಳು ಕುಣಿತ ಕಲಾವಿದ ಡೊಳ್ ಚಂದ್ರು ಪರಿಚಯ ಬೆಳೆಸಿಕೊಂಡ ಸಂಕೀರ್ಥ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಲೆಯಾದ ಡೊಳ್ಳು ಬಾರಿಸುವುದನ್ನು ಕಳಿತ ಅನೇಕ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯ ಮೂಲಕ ಇತರರನ್ನು ಆಕರ್ಷಿಸಿದ್ದಾರೆ.
ಡೊಳ್ಳು ಕುಣಿತದಲ್ಲಿ ಸಾಧನೆ: ಜಾನಪದ ಜಾತ್ರೆಯಲ್ಲಿ ಭಾಗಿ, ಸ್ಟಾರ್ ಸುವರ್ಣದಲ್ಲಿ ಹೊಸ ಬೆಳಕು ಕಾರ್ಯಕ್ರಮ, ಸಿನಿಮಾಗಳಾದ ಭಜರಂಗಿ, ದೊಡ್ಮನೆ ಹುಡ್ಗ, ಧಾರವಾಹಿಗಳಲ್ಲಿ ಪ್ರದರ್ಶನ, ೨೦೧೯ರಲ್ಲಿ ನವದೆಹಲಿಯ ಗಣರಾಜ್ಯೋತ್ಸಾವ ಪರೇಡನಲ್ಲಿ ಪ್ರದರ್ಶನ, ಜನಪದ ಉತ್ಸವ ಸುಗ್ಗಿ,ಹುಗ್ಗಿ ಸೇರಿದಂತೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆಯ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಅಭಿಮಾನಿಗಳಿಗೆ ಸ್ವೂರ್ತಿಯಾಗಿ ಸಂಕೀರ್ಥ ಅವರು ಆದರ್ಶವಾಗಿದ್ದಾರೆ.
ನನ್ನಲ್ಲಿರುವ ಪ್ರತಿಭೆಯನ್ನು ಸಮಾಜಕ್ಕೆ ತೋರಿಸಲು ನನ್ನ ಗುರುಗಳು ಮತ್ತು ತರಬೇತಿ ದಾರರು ಸಹಕಾರ ಮತ್ತು ಬೆಂಬಲ ನೀಡಿ ಪ್ರೋತ್ಸಾಹಿಸಿದ ಹಿನ್ನಲೆಯಲ್ಲಿ ನಾನು ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಂಕೀರ್ಥ ಅಭಿಪ್ರಾಯ ಪಟ್ಟಿದ್ದಾರೆ.