ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸ್ವಾಸ್ಥ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು :ಉಪ್ಪಿ ನ್

ಬೀದರ:ಮಾ.15:ಗ್ರಾಮೀಣ ಭಾಗದಲ್ಲಿ ಆರೋಗ್ಯದ ಸೌಲಭ್ಯಗಳು ಹೆಚ್ಚಾಗಿ ದೊರೆಯುತ್ತಿರು ವುದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸದೆ ಹೆಚ್ಚಿನ ಕಾಳಜಿಯನ್ನು ವಹಿಸಬೇ ಕೆಂದು ನಿವೃತ್ತ ಅಧಿಕಾರಿ ಗಳಾದ ವೀರಭದ್ರಪ್ಪ ಉಪ್ಪಿ ನ್ ರವರು ಮಹಿಳೆಯರಿಗೆ ಕರೆ ನೀಡಿದರು.ಅವರು ಇಂದು ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ಹಾಗೂ ಐಸಿಟಿಸಿ ಕೇಂದ್ರ ಬ್ರಿಮ್ಸ ವತಿಯಿಂದ ಆಯೋಜಿಸ ಲಾದ ಆರೋಗ್ಯ ತಪಾ ಸಣಾ ಶಿಬಿರ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಇಂದಿನ ಯಾಂತ್ರಿಕ ಜೀವನದಲ್ಲಿ ಪುರುಷರ ಸಮವಾಗಿ ಮಹಿಳೆಯರು ದುಡಿ ಯುತ್ತಲಿದ್ದು, ಜೊತೆಗೆ ಕುಟುಂಬದ ನಿರ್ವಹಣೆ ಮಕ್ಕಳ ಪಾಲನೆ ಪೆÇೀಷಣೆ ಜೊತೆಯಲ್ಲಿ ತಮ್ಮ ಆರೋ ಗ್ಯದ ಕಡೆಗೆ ಹೆಚ್ಚಿನ ಗಮನ ವನ್ನು ಕೊಡದೆ ಇರುವುದು ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದೈನಂದಿನ ಕಾರ್ಯಗಳಲ್ಲಿ ಎಷ್ಟೇ ಒತ್ತಡಗಳಿದ್ದರೂ ಪ್ರತಿ ಮಹಿಳೆಯು ತನ್ನ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸುವ ಜೊತೆಗೆ ಉತ್ತಮವಾದ ಪೌಷ್ಟಿಕ ಆಹಾರ ಸೇವನೆ, ಶಾರೀರಿಕ ವ್ಯಾಯಾಮ ಮುಂತಾದವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಬಿಪಿ ಶುಗರ್, ಹೃದಯ ರೋಗ ಮಾನಸಿಕ ಒತ್ತಡ ಮುಂತಾದ ಕಾಯಿಲೆಗಳನ್ನು ಬರದಂತೆ ದೇಹವನ್ನು ಸಮ ತೋಲನವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಐಸಿಟಿಸಿ ಪ್ರಯೋಗಶಾಲಾ  ತಂತ್ರಜ್ಞರಾದ  ಅರವಿಂದ್ ಕುಲಕರ್ಣಿ ಅವರು ಮಾತನಾಡಿ ಸರ್ಕಾರದ ವತಿಯಿಂದ ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಸೇವೆ ಅದು ಕೂಡ ಎಲ್ಲರ ಮನೆಯ ಬಾಗಿಲಿಗೆ ದೊರೆಯು ವಂತಾಗಿದೆ. ಆದ್ದರಿಂದ ಹೆಚ್ಚಿನ ಜನರು ಇದರ ಸದುಪಯೋಗವನ್ನು   ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಮನೆಮನೆಗೆ ರಕ್ತಪರೀಕ್ಷೆ, ರಕ್ತದೊತ್ತಡದ ಪರೀಕ್ಷೆ, ಮತ್ತು ತಜ್ಞ ವೈದ್ಯರಿಂದ ಉಚಿತ ತಪಾಸಣೆ ಶಿಬಿರವನ್ನೊಳಗೊಂಡಂತೆ,  ಹತ್ತು ಹಲವು  ಯೋಜನೆ ಗಳನ್ನು ರೂಪಿಸಿಕೊಂಡಿ ರುತ್ತದೆ. ಆದ್ದರಿಂದ ರೋಗ ಬರುವ ಮುನ್ನವೇ ಜನರು ಮುನ್ನೆಚ್ಚರಿಕೆ ಕ್ರಮವಾಗಿ, ಸರ್ಕಾರವು ನೀಡುತ್ತಿರುವ ಸೇವಾ ಸೌಲಭ್ಯವನ್ನು  ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಎ???ವಿ ಪರೀಕ್ಷೆ, ಕ್ಷಯ ರೋಗದ ಬಗ್ಗೆ ಜಾಗ್ರತಿ ಮತ್ತು ಬಿಪಿ ಪರೀಕ್ಷೆ, ಶುಗರ್ ಪರೀಕ್ಷೆ ಮಾಡಲಾಯಿತು,

ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಕಾರ್ಯಕ ರ್ತೆಯಾದ ಶ್ರೀಮತಿ ಭಾರತೀಯವರು ಮತ್ತು ಜನವಾಡಾ ಗ್ರಾಮದ ಆರನೇ ಬ್ಲಾಕಿನ ಅಂಗನ ವಾಡಿ ಶಿಕ್ಷಕಿಯರಾದ ಶ್ರೀಮತಿ ರವರು ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಸವಿತಾ ರವರು ಪ್ರಾಸ್ತಾವಿಕವಾಗಿ ಮಾತ ನಾಡಿ, ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ ಸೊಸೈಟಿ ಅಡಿಯಲ್ಲಿ, ಜಿಲ್ಲಾದ್ಯಂತ, ಆರೋಗ್ಯ ತಪಾಸಣಾ/ಜಾಗೃತಿ ಶಿಬಿರ, ಎ???ವಿ ಏಡ್ಸ್ ಅರಿವು ಕಾರ್ಯಕ್ರಮವನ್ನು ನಿರಂತರವಾಗಿ

ಹಮ್ಮಿಕೊಳ್ಳಲಾಗುತ್ತದೆ.

ಬಿರದಲ್ಲಿ 53 ಮಹಿಳೆ ಯರು ಉಪಸ್ಥಿತರಿದ್ದರು, ಅದರಂತೆ ಸುತ್ತಮುತ್ತಲಿನ ಕೂಲಿ ಕಾರ್ಮಿಕರು ಶಿಬಿರದ ಲಾಭವನ್ನು ಪಡೆದರು.