ಗ್ರಾಮೀಣ ಭಾಗದ ಮಕ್ಕಳಿಗೆ ರಾಜ್ಯ ಮಟ್ಟದ ಚೆಸ್ ತರಬೇತಿ

ಶಿವಮೊಗ್ಗ.ಜೂ.೧೦; ನಗರದ “ಯಾದವ ಸ್ಕೂಲ್ ಆಪ್ ಚೆಸ್” ರಾಜ್ಯಮಟ್ಟದಲ್ಲಿ Zoom ಆಪ್ ಮೂಲಕ  ಜೂನ್ 14 ರಿಂದ 26 ರವರೆಗೆ ಒಟ್ಟು 12 ದಿನಗಳ ಕಾಲ ಗ್ರಾಮೀಣ ಭಾಗದ ಮಕ್ಕಳಿಗೆ  ಚೆಸ್ ತರಬೇತಿಯನ್ನು ಪ್ರಾರಂಭಿಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆಯಬಹುದು.ಅಂತರಾಷ್ಟ್ರೀಯ ಚೆಸ್ ಮಂಡಳಿಯ ಇತ್ತಿಚೆಗಿನ ಚೆಸ್ ನಿಯಮಾವಳಿಗಳ ಬಗ್ಗೆ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಅರಿವು ಮತ್ತು ತಿಳುವಳಿಕೆಗಳನ್ನು “ಪ್ರಾಥಮಿಕ ಹಂತದ ಚೆಸ್ ತರಬೇತಿಯ ಮೂಲಕ” ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರಾದ ಪ್ರಾಣೇಶ ಯಾದವ್ ಅವರು ತಿಳಿಸಿಕೊಡಲಿದ್ದಾರೆ.

ಪ್ರಾಥಮಿಕ, ಮಾದ್ಯಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ ಪ್ರತ್ಯೇಕವಾಗಿ 3 ತಂಡಗಳಲ್ಲಿ ತರಬೇತಿ ನೀಡಲಾಗುವುದು. ಪ್ರತಿದಿನ ಬೆಳಿಗ್ಗೆ 10 ರಿಂದ ಮದ್ಯಾಹ್ನ 2 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ. ತರಬೇತಿಗೆ ಹೆಸರು ನೊಂದಾಯಿಸಲು ಸಂಪರ್ಕಿಸಿರಿ: ಪ್ರಾಣೇಶ ಯಾದವ್, ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರು, ಯಾದವ ಸ್ಕೂಲ್ ಆಪ್ ಚೆಸ್, ರಾಜೇಂದ್ರನಗರ, ಶಿವಮೊಗ್ಗ. ಮೊಬೈಲ್: 9242401702, 8618108601