ಗ್ರಾಮೀಣ ಭಾಗದ ಬಡವರಿಗೆ ಆಶಾಕಿರಣವೇ ನರೇಗಾ

ಗದಗ, ಮಾ 28 : ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಬಡವರಿಗೆ ಆಶಾಕಿರಣವಾಗಿದೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಢ ಪಡಿಸಕೊಳ್ಳಬಹುದು ಈ ಹಿನ್ನೆಲೆ ತಮ್ಮ ಪಾತ್ರ ಬಹಳ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾರಕ್ಕೆ ಅಗಮಿಸಿದ ಹೊಳೆಆಲೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಅಭಿಮತ ವ್ಯಕ್ತ ಪಡಿಸಿದರು.
ತಾಲೂಕಿನ ಗುರು ಭವನದಲ್ಲಿ ನಡೆದ ಮೇಟ-ಮೇಳ (ಕಾಯಕ ಬಂಧು ಕಾರ್ಯಾಗಾರ) ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕಾಯಕ ಬಂಧುಗಳ ಕರ್ತವ್ಯ ಹಾಗೂ ಹಕ್ಕುಗಳ ಪ್ರತಿಯೊಬ್ಬರು ಪಾಲನೆ ಮಾಡಬೇಕು. ಪ್ರತಿ ಒಂದು ಕೂಲಿಕಾರರ ಗುಂಪಿನಲ್ಲಿ ನಿಮ್ಮನ್ನು ಕಾಯಕ ಬಂಧು ಅಂತಾನೇ ಗುರುತಿಸಲಾವದು. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-6 ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು. 15 ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು ಮತ್ತು ಕೆಲಸದ ಸ್ಥಳದಲ್ಲಿ ಮಾರ್ಕಿಂಗ ಮಾಡಿ ಕೂಲಿಕಾರರಿಗೆ ಮಾಹಿತಿ ನೀಡುವದು. ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರು,ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು. ಪ್ರತಿ ಮಾನವ ದಿನಕ್ಕೆ ಪುರುಷ ಕಾಯಕ ಬಂದುವಿಗೆ 4 ರೂ. ಮಹಿಳಾ ಕಾಯಕ ಬಂದುವಿಗೆ 5 ರೂ. ಹೆಚ್ಚುವರಿಯಾಗಿ ಸಂಭಾವನೆ ಪಾವತಿಸಲಾಗುವದು ಎಂದು ಹೇಳಿದರು.