ಗ್ರಾಮೀಣ ಭಾಗದ ಜನರ ಸೇವೆ ಮಾಡುವದು ನಮ್ಮೆಲ್ಲರ ಭಾಗ್ಯ: ಡಾ. ವಿಜಯಕುಮಾರ ಅಜೂರ

ಇಂಡಿ:ನ.22: ಗ್ರಾಮೀಣ ಮತ್ತು ಪಂಚಾಯತ ರಾಜ್ಯ ಇಲಾಖೆ ಅತ್ಯಂತ ಕಟ್ಟ ಕಡೆಯ ಭಾಗದ ಜನರ ಸೇವಾ ಮಾಡುವಂತ ಪವಿತ್ರ ಕಾರ್ಯವಾಗಿದ್ದು ಇಂತಹ ಗ್ರಾಮೀಣ ಭಾಗದ ಕೆಲಸ ಮಾಡುವುದೇ ನಮ್ಮ ಭಾಗ್ಯ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನೂತನ ಬಿ.ಡಿ.ಎ ಆಯುಕ್ತರಾಗಿ ಪದನೋತಿ ಹೊಂದಿದ ಡಾ. ವಿಜಯಕುಮಾರ ಅಜೂರ ಹೇಳಿದರು.

ತಾ.ಪಂ ಸಭಾ ಭವನದಲ್ಲಿ ಬಿಡಿಎ ಆಯುಕ್ತರಾಗಿ ಪದೋನ್ನತಿ ಹೊಂದಿ ತಾ.ಪಂ ಅಧಿಕಾರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಹಿನ್ನಲೆಯಲ್ಲಿ ಸನ್ಮಾನಸ್ವೀಕರಿಸಿ ಮಾತನಾಡಿದ ಅವರು ಇಂಡಿ ತಾಲೂಕಿಗೆ ತಾ.ಪಂ ಅಧಿಕಾರಿ ಹುದ್ದೆಗೆ ಬರಲು ಸಾಕಷ್ಟು ಪೈಪೋಟಿ ನಡೇದಿತ್ತು ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲರು ನನಗೆ ಪರೀಚಿತರಿಲ್ಲದಿದ್ದರೂ ಸಹಿತ ತಾಲೂಕಿನ ಹಿತ ಚಿಂತನೆ ಮಾಡುವ ದಕ್ಷ ಅಧಿಕಾರಿ ಬೇಕು ಎಂಬ ಅವರ ಮಹದಾಶೇಯನ್ನು ಹೊತ್ತು ಅವರ ಕೃಪೆಯಿಂದ ನನಗೆ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಪ್ರತಿಯೊಂದು ಹಂತದಲ್ಲಿ ವರನ್ನು ಸ್ಮರಿಸದಿದ್ದರೆ ತಪ್ಪಾಗುತ್ತದೆ. ಇದರ ಜೊತೆ ತಾಲೂಕಿನ ಅನೇಕ ಅಧಿಕಾರಿಗಳು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಇತರೆ ಸಿಬ್ಬಂದ್ದಿಗಳ ಸಹಕಾರದಿಂದ ಆಡಳಿತದಲ್ಲಿ ಯಶಸಸ್ವೀಯನ್ನು ಕಂಡಿರುವೆ. ಇಡೀ ಎಲ್ಲಾ ಇಲಾಖೆಗಳಿಗೆ ಹೋಲಿಕೆ ಮಾಡಿದಾಗ ಸಾಕಷ್ಟು ಜಟೀಲ ಮತ್ತು ಕ್ಲೀಷ್ಠಕರ ಸಮಸ್ಯಗಳ ಸುಳಿಯಲ್ಲಿರುವ ಇಲಾಖೆ ಇದಾಗಿದ್ದು ಇದನ್ನು ನಿಭಾಯಿಸಬೇಕಾದರೆ ಸತತ ಅಧ್ಯಾಯನಶೀಲರಾಗಿ ಮತ್ತು ದಕ್ಷತೆ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸದರೆ ಯಶಸು ಕಟ್ಟಿಟ್ಟ ಬುತ್ತಿ. ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡುವಾಗ ಕೈ ,ಬಾಯಿ ಸ್ವಚ್ಛವಾಗಿರಬೇಕು. ಶಿಸ್ತು ,ಸಯಂ ಹಾಗೂ ಸಾರ್ವಜನಿಕರ ಕೆಲಸ ದೇವರ ಕೆಲಸ ಎಂಬ ಭಾವ ನಮ್ಮಲೀರಬೇಕು. ಭವಿಷ್ಯದ ಮುಂಬರುವ ದಿನಗಳಲ್ಲಿ ಇಂಡಿ ಜಿಲ್ಲೆ ಏನಾದರೂ ಆದರೆ ಮತ್ತೆ ಕಾರ್ಯನಿರ್ವಹಿಸುವ ಭಾಗ್ಯ ಸಿಗಲಿ ಎಂದರು.

ಗ್ರಾಮೀಣ ಹಾಗೂ ಪಂಚಾಯತ ರಾಜ್ಯ ಇಲಾಖೆಯ ಕಾರ್ಯ ವ್ಯಾಪಿ ಬಹುವಿಸ್ತಾರವಾಗಿದ್ದು ಪಂಚಾಯತ ಸಮಗ್ರ ಕಾರ್ಯವನ್ನು ನಿಭಾಯಿಸಿದ ದಕ್ಷ ಅಧಿಕಾರಿ ಡಾ. ವಿಜಯಕುಮಾರ ಅಜೂರ ಸಾಹೇಬರು ಎಂದರೆ ತಪ್ಪಾಗುವುದಿಲ್ಲಾ. ಇವರು ಸತತ ಪಂಚಾಯತ ರಾಜ್ಯ ವ್ಯವಸ್ಥೆಯ ಬಗ್ಗೆ ಪ್ರತಿನಿತ್ಯ ಆಳವಾದ ಅಧ್ಯಾಯನ ಮಾಡಿದ ಅಧಿಕಾರಿ . ಇವರು ಬರುವ ಕ್ಕಿಂತ ಮುಂಚ್ಚೆ ಇದ್ದ ಕಾರ್ಯಾಲಯ ಸಂಪೂರ್ಣ ಬದಲಾವಣೆಯಾಗಿದೆ. ಗಿಡ, ಹೂದಾನಿಗಳು ಸಸ್ಯಗಳು ಕಾರ್ಯಾಲಯದ ಆವರಣದಲ್ಲಿ ಹಚ್ಚಿರುವದರಿಂದ್ದ ಪ್ರಕೃತಿಯೇ ಇವರನ್ನು ಹಾರೈಸುವಂತಾಗಿದೆ ಇಂತಹ ದೂರದೃಷ್ಠಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಿರುವುದು ಸೌಭಾಗ್ಯ ಎಂದರು.
ನೂತನ ಪ್ರಭಾರಿ ತಾ.ಪಂ ಅಧಿಕಾರಿ ಸಂಜಯ ಖಡಗೇಕರ್ .
ತಾ.ಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ನೂತನ ಪ್ರಭಾರಿ ತಾ.ಪಂ ಅಧಿಕಾರಿ ಸಂಜಯ ಖಡೇಗೆಕರ್.ತಾ.ಪಂ ಸದಸ್ಯರಾದ ಗಣಪತಿ ಬಾಣಿಕೋಲ, ರಾಜುಗೌಡ ಝಳಕಿ, ಜೀತಪ್ಪ ಕಲ್ಯಾಣಿ, ಪಂಚಪ್ಪ ಅರವತ್ತು, ಗಂಗಾಧರಗೌಡ ಬಿರಾದಾರ, ಮಹಾದೇವ ಗುಡ್ಡಡಗಿ, ಮಹಾಂತೇಶ ಬಿರಾದಾರ, ಸಿದ್ದಪ್ಪ ತಳವಾರ, ಅಧಿಕಾರಿಗಳಾದ ಬಿಸಿಯೂಟ ಅಧಿಕಾರಿ ಯರಗುದ್ದಿ, ಆಪರೇಟರ್ ಒಂಕಾರ ಮೇಟಿ, ಯೋಜನಾಧಿಕಾರಿ ನಂದೀಪ ರಾಠೋಡ , ನಿವೃತ್ತ ಯೋಜನಾಧಿಕಾರಿ ಅಧಿಕಾರಿ ವಿಠ್ಠಲ ಹಳ್ಳಿಕರ್, ಸೋಮನಗೌಡ ಬಿರಾದಾರ , ಆಯ್.ಎಸ್ ಲಿಂಗದಳ್ಳಿ ,ಅಪ್ಪಶ್ಯಾ ಲಾಳಸೇರಿ,
ಬಿ.ಎಂ ಬಬಲಾದ ಸೇರಿದಂತೆ ಆರ್.ಡಿ.ಪಿ ಆರ್ ,ಬಿಸಿಯೋಟ.ಎನ್.ಆರ್.ಜಿ ಮತ್ತು ಕಂಪ್ಯೋಟ ತಾಂತ್ರಿಕ ಸಿಬ್ಬಂದ್ದಿ ಹಾಗೂ ತಾಲೂಕಿನ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಮತ್ತು ಸಾಮಾಜಿಕ ಪರಿಶೋಧನಾ ಸಿಬ್ಬಂದ್ದಿಗಳು ಕಾರ್ಯಕ್ರಮದಲ್ಲಿದ್ದರು.