ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳ ಸ್ಪಂದನೆ ಅಗತ್ಯ:ಭೀಮರಾವ ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ್:ನ.20: ಗ್ರಾಮೀಣ ಭಾಗದ ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಸ್ಪಂದನೆ ಮಾಡುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಹೇಳಿದರು . ಮದರಗಾಂವ ಗ್ರಾಮದ ಸರಕಾರಿ ಶಾಲೆಯಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು .
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಉದ್ದೇಶವಾಗಿದೆ . ಹೀಗಾಗಿ ಜನರನ್ನು ದಿನನಿತ್ಯ ಕಚೇರಿಗಳಿಗೆ ಅಲೆದಾಡಿಸುವ ಬದಲು ಅಧಿಕಾರಿಗಳು ಜನರ ಸಮಸ್ಯೆ
ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಚ್ಚರಿಕೆ ನೀಡಿದರು . ಮದರಗಾಂವ ಹಾಗೂ ಮಲ್ಕಾಪುರ ಗ್ರಾಮದ ಕೆಲ ಮುಖಂಡರು ಮಾತನಾಡಿ , ಮದರಗಾಂವ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಸೂಕ್ತ ಸಮಯಕ್ಕೆ ವಿದ್ಯುತ್ ಸರಬರಾಜು ಆಗದ ಕಾರಣ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ದಿನನಿತ್ಯ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣಗಿದೆ . ವಿದ್ಯುತ್ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡಾ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು . ‘ ಮದರಗಾಂವ ಗ್ರಾಮದ ವ್ಯಾಪ್ತಿಯ ರೈತರ ಕೃಷಿ ಚಟುವಟಿಗೆ ಸಂಬಂಧಿಸಿದಂತೆ ಕೃಷಿ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೃಷಿ ಹಾಗೂ ಜೆಸ್ಕಾಂ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕೃಷಿ ಚಟುವಟಿಕೆಗೆ ಸಹಕರಿಸಬೇಕು
ಎಂದು ಮನವಿ ಮಾಡಿದರು . ಗ್ರಾಪಂ ಅಧ್ಯಕ್ಷ ಶಿವರಾಜ ಮೊಳಕೇರಾ , ಉಪಾಧ್ಯಕ್ಷೆ ಮಲ್ಲಮ್ಮಾ ಅಲ್ಲೂರ , ತಹಸೀಲ್ದಾರ್ ಡಾ . ಪ್ರದೀಪಕುಮಾರ ಹಿರೇಮಠ , ತಾಪಂ ಇಒ ಮುರಗಪ್ಪ ವಸ್ತ್ರದ್ , ನಾಡ ತಹಸೀಲ್ದಾರ್ ಹಾವಗಿರಾವ ಮುದಾಳೆ ,
ತಾಲೂಕ ವೈದ್ಯಾಧಿಕಾರಿ
ಶಿವಕುಮಾರ ಸಿದ್ದೇಶ್ವರ , ಕೃಷಿ ಸಹಾಯಕ ನಿರ್ದೇಶಕ ಗೌತಮ್ , ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ . ಗೋವಿಂದ , , ಪಶು ಇಲಾಖೆ ವೈದ್ಯಾಧಿಕಾರಿ ಡಾ.ಶಾಂತವೀರ ಸಿದ್ದೇಶ್ವರ ರೇಷ್ಮೆ ಇಲಾಖೆ ಅಧಿಕಾರಿ ರವಿಕುಮಾರ್ ,ಗ್ರಾಮಸ್ಥ ರಾಜಶೇಖರ ಪಾಟೀಲ್ ಮದರಗಾಂವ , ಮಲ್ಲಿಕಾರ್ಜುನ್ ಮಹೇಂದ್ರಕರ್ , ಈಶ್ವರ ಚಿದ್ರಿ ಮಲ್ಕಾಪುರೆ , ತ್ರಿಮುಕ ಮಲ್ಕಾಪೂರ್ ಸೇರಿದಂತೆ ಅನೇಕರಿದ್ದರು .