ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ವಾಸ್ತವ್ಯ : ಸುರೇಶ ಮುಂಜೆ

ಅಥಣಿ :ನ.21: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಜನರ ಮನೆಗೆ ತಲುಪಿ ಅವರ ಸಮಸ್ಯೆಯನ್ನು ಗ್ರಾಮ ವಾಸ್ಥವ್ಯದ ಮುಖಾಂತರ ಪರಿಹಾರಗೊಳಿಸುವದು ನಮ್ಮ ಕತ್ರ್ಯವ್ಯ ಎಂದು ತಹಶೀಲ್ದಾರ ಸುರೇಶ ಮುಂಜೆ ಅವರು ಹೇಳಿದರು.
ಅವರು ತಾಲೂಕಿನ ಖಿಳೇಗಾಂವ ಗ್ರಾಮದ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ಥವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು ಅವರು ಮುಂದೆ ಮಾತನಾಡುತ್ತಾ ಗ್ರಾಮೀಣ ಜನರಿಗೆ ತಮ್ಮ ಸರ್ಕಾರಿ ಕೆಲಸಕ್ಕಾಗಿ ತಾಲೂಕಾ ಮಟ್ಟದಲ್ಲಿ ಬಂದು ಮಾಡಿಕೊಳ್ಳುವದು ಅಸಾಧ್ಯವಾಗಿದೆ, ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಅವರ ಕೆಲಸವನ್ನು ಮಾಡುವ ಗುರಿ ಹೊಂದಿದೆ. ಜನರ ಸೇವೆ ಜನರ ಕಲ್ಯಾಣಕ್ಕಾಗಿ ಸದಾಸಿದ್ದವಾಗಿದೆ. ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಯ 30 ಅರ್ಜಿಗಳ ಸಮಸ್ಯೆಗಳನ್ನು ಪರಿಹರಿಸಲಾಯಿತು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಬಡ ವಿದ್ಯಾರ್ಥಿಗೆ ಜಿಲ್ಲಾ ಹಾಗೂ ರಾಜ್ಯ ಕೇಂದ್ರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಾಲೆ ಉಚಿತವಾಗಿ ಶಿಕ್ಷಕರ ಮುಖಾಂತರ ಮಕ್ಕಳಿಗೆ ತಲುಪಿಸಲಾಗುವದು. ಮಕ್ಕಳು ನಮ್ಮ ಆಸ್ತಿ ಎಂದು ಹೇಳಿದರು.
ಈ ವೇಳೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ಧರೆಪ್ಪ ಹೊನ್ನಾಗೋಳ, ಗ್ರಾಮ ಪಂಚಾಯತ ಉಪಾಧ್ಯಕ್ಷ ಮಹಾನಂದಾ ದೊಡ್ಡನ್ನವರ, ಸಿದ್ದೇವಾಡಿ ಗ್ರಾಮ ಪಂಚಾಯತ ಅಧ್ಯಕ್ಷ ಗಂಗೂಬಾಯಿ ಕಾಳೇಲಿ, ಖಿಳೇಗಾಂವ ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಸತೀಶ ಹೊನ್ನಾಗೋಳ, ಉಪ ತಹಶೀಲ್ದಾರ ಬಿ.ಬಿ. ಮ್ಯಾಗೇರಿ, ಕಂದಾಯ ನಿರೀಕ್ಷಕರು ವಿನೋದ ಕದಮ, ನಾಗೇಶ ಖಾನಾಪೂರೆ, ಮಂಜುನಾಥಗೌಡ, ಎಂ.ಬಿ. ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದರ, ಕೃಷಿ ಅಧಿಕಾರಿ ಶಿವಪುತ್ರ ಗುಂಜಿಗಾವಿ, ಪಶು ವೈದ್ಯಾಧಿಕಾರಿ ಡಾ|| ಹುಂಡೆಕರ, ಹಿಂದುಳಿದ ವರ್ಗಗಳ ಕಲ್ಯಾಣ ತಾಲೂಕಾ ಅಧಿಕಾರಿ ವೆಂಕಟೇಶ ಕುಲಕರ್ಣಿ, ಮಧ್ಯಾಹ್ನ ಆಹಾರ ಯೋಜನಾಧಿಕಾರಿ ಕೆ.ಟಿ.ಕಾಂಬಳೆ, ತಾಲೂಕಾ ಪಂಚಾಯತ ವ್ಯವಸ್ಥಾಪಕರು ಉದಯಗೌಡ ಪಾಟೀಲ, ಪಿಡಿಓ ಸುರೇಖಾ ಇಂಡಿ, ನಾಗಪ್ಪ ಪಂತೋಜಿ, ಸಂತಿ ಸೇರಿದಂತಹ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಿ. ಈ. ಎಂಬತ್ನಾಳ ಸ್ವಾಗತಿಸಿದರು, ಕೈಲಾಸ ಮಧಬಾವಿ ಕಾರ್ಯಕ್ರಮ ನೀರೂಪಿಸಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಹಲವಾರು ಇಲಾಖೆಯ ಅಧಿಕಾರಿಗಳು ಗೈರಿ ಇದ್ದು ಅವರ ಪರವಾಗಿ ಅವರ ಸಹಾಯಕ ಅಧಿಕರಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಕಬ್ಬಿನ ಬಿಲ್ಲ 3500/- ನಿಗದಿ ಪಡಿಸಬೇಕು, ಹೆಸ್ಕಾಂ ಇಲಾಖೆ ವಿದ್ಯುತ್ ಗಡಿಭಾಗದಲ್ಲಿ ಸರಿಯಾಗಿ ಸರಬರಾಜು ಮಾಡಬೇಕು, ಆಜೂರ ಗ್ರಾಮದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ತಡೆಗಟ್ಟಬೇಕು ಎಂದು ಹಲವಾರು ವಿಷಯಗಳ ಮೇಲೆ ಚರ್ಚೆ ನಡೆಯಿತು. ರೈತ ಸಂಘದಿಂದ ನೀರಾವರಿ ಯೋಜನೆ ಕುರಿತು ಮನವಿ ಸಲ್ಲಿಸಿದರು,