ಗ್ರಾಮೀಣ ಭಾಗದ ಜನರ ಜೀವನಕ್ಕೆ ನರೇಗಾ ಕೂಲಿ ಕೆಲಸ ಭದ್ರತೆ

oplus_2

ಕಲಬುರಗಿ:ಮೇ.17:ಗ್ರಾಮೀಣ ಭಾಗದಲ್ಲಿ ಜನರ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದ ಅಫಜಲಪುರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಹೇಳಿದರು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಬಳ್ಳೂರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕೆಲಸಕ್ಕೆ ಬಾರದೆ ಇರುವ ಜನರನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಬಳ್ಳೂರಗಿ ಗ್ರಾಮ ಪಂಚಾಯತಿಯ ಮಾಳಿಂಗ ರಾಯ ದೇವಸ್ಥಾನದಲ್ಲಿ ಗ್ರಾಮ ಸಭೆ ಮಾಡಿ
ಸಂಘದ ಮಹಿಳೆಯರಿಗೆ ಮತ್ತು ಗ್ರಾಮದ ಜನರಿಗೆ ನರೇಗಾ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ನಂತರ ಗ್ರಾಮದ ಜನರಿಂದ ಕೂಲಿ ಬೇಡಿಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ, ಪಿಡಿಓ ಮಹಾಂತೇಷ ಸಾಲಿಮಠ, ಟಿಎಇ ರಾಜಶೇಖರ ಪಾಟೀಲ್, ಕಾರ್ಯದರ್ಶಿ ಸೋಮಶೇಖರ್ ಪೂಜಾರಿ, ಡಿಇಓ ಗೌರಿ ಶಂಕರ, ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ್ ಸೇರಿದಂತೆ ಸಂಘದ ಮಹಿಳೆಯರು, ಗ್ರಾಮದ ಜನರು ಇದ್ದರು.