ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆ

ಬಂಗಾರಪೇಟೆ.ಫೆ೧೪:ಗ್ರಾಮೀಣ ಭಾಗದ ಯುವಕನೋರ್ವ ಗ್ರಾಮಾಂತರ ಭಾಗದಲ್ಲಿ ಖಾಸಗಿ ಶಾಲೆ ತೆರೆದು ನಿಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಿರುವ ಈ ಯುವಕ ಇತರೆ ಯುವಕರಿಗೆ ಮಾದರಿಯಾಗಬೇಕು, ಮುಂದಿನ ದಿನಗಳಲ್ಲಿ ಸದಾ ನಾನು ಇವರ ಜೊತೆಗಿರುತ್ತೇನೆಂದು ಶಾಸಕ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಅದ್ಯಕ್ಷರಾದ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಕಾಮಸಮುದ್ರ ಮುಖ್ಯರಸ್ತೆಯ ದೇಶಿಹಳ್ಳಿ ಸಮೀಪವಿರುವ ಮಾರ್ಸ್ ಡಿಜಿಟಲ್ ಗ್ಲೋಬಲ್ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಫ್ಯೂಷನ್ ಕಾರ್ನಿವಾಲ್ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯನ್ನು ಉದ್ಘಾಟನೆ ಮಾಡಿದ ಸಂಧರ್ಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಕೇವಲ ೫ ಮಕ್ಕಳೊಂದಿಗೆ ಪ್ರಾರಂಬಿಸಿದ ಈ ವಿದ್ಯಾ ಸಂಸ್ಥೆ ಕೇವಲ ಎರಡೇ ವರ್ಷದಲ್ಲಿ ೨೫೦ ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದನ್ನು ಕಂಡು ನನಗೆ ತುಂಭಾ ಸಂತೋಷವಾಗಿದೆ. ಈ ಶಾಲೆಯಲ್ಲಿ ಮಕ್ಕಳ ಕಲಿಗೆ ಪೂರಕವಾದ ಕರಾಟೆ , ಕಂಪ್ಯೂಟರ್, ನೃತ್ಯ, ಮೊಬೈಲ್ ಆಯಪ್, ಸಂಗೀತ ತರಗತಿಗಳು, ಅಬ್ಯಾಕಸ್, ರಾಷ್ಟ್ರಮಟ್ಟದ ಪಠ್ಯಚಟುವಟಿಕೆಗಳನ್ನು ಒಳಗೊಂಡಂತೆ ಅನೇಕ ವಿಧವಿಧವಾದ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಪಟ್ಟಣದಲ್ಲಿರುವ ಶಾಲೆಗಳಿಗಿಂತಲೂ ಈ ಶಾಲೆ ವಿಶಾಲವಾದ ವಾತಾವರಣವನ್ನು ಹೊಂದಿದ್ದು, ಯಾವುದೇ ಅಡೆತಡೆಗಳಿಲ್ಲದೆ ಅಚ್ಚ ಹಸಿರಿನ ಪ್ರಕೃತಿಯ ಸೌಂಧರ್ಯದ ನಡೆವೆ ಶಾಲೆ ಸ್ಥಾಪನೆಗೊಂಡಿರುವುದು ಸಂತಸದ ವಿಷಯ, ಈ ಶಾಲೆಗೆ ಮಕ್ಕಳನ್ನು ಸೇರಿಸುವುದರಿಂದ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಲಿದೆ, ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದಿ ನಿಮ್ಮ ಪೋಷಕರಿಗೆ ಮತ್ತು ಓದಿದಂತಹ ಶಾಲೆಗೆ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಎಸ್. ಸುಕನ್ಯ ರವರು ಮಾತನಾಡಿ, ಈ ಶಾಲೆಯ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಶಾಲೆಗೆ ಮತ್ತು ಪೋಷಕರಿಗೆ ಉತ್ತಮವಾದ ಹೆಸರನ್ನು ತಂದಿದ್ದಾರೆ. ಪಠ್ಯ ಚಟುವಟಿಕೆಗಳನ್ನು ಒಳಗೊಂಡಂತೆ ಈ ರೀತಿಯಾದಂತಹ ವೇದಿಕೆಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವುದರಿಂದ ತಮ್ಮಲ್ಲಿರುವ ಪ್ರತಿಭೆಗಳಿಗೊಂದು ಬೆಲೆ ಸಿಕ್ಕಿ ಉನ್ನತ ಮಟ್ಟಕ್ಕೆ ಬೆಳೆಯಲು ದಾರಿದೀಪವಾಗಲಿದೆ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸಿ ಮುಂದಿನ ದಿನಗಳಲ್ಲಿ ಶಾಲೆಗೆ ಹೆಸರು ತಂದು ಕೊಡಲು ಸಹಕರಿಸಬೇಕೆಂದು ತಿಳಿಸಿದರು.
ಇದೇ ಸಂಧರ್ಭಧಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮತ್ತು ಆದರ್ಶ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶಶಿಕಲಾ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸಬೇಕಾದರೆ ಇಂತಹ ವೇದಿಕೆಗಳು ಅತಿ ಮುಖ್ಯ, ಪಾಠದ ಜೊತೆಜೊತೆಗೆ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಜ್ಙಾನಾರ್ಜನೆ ಉತ್ತಮಗೊಳ್ಳುವುದರ ಜೊತೆಗೆ ದೈಹಿಕ ಸಾಮರ್ಥ್ಯವೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲೆಯ ಸಂಸ್ಥಾಪಕ ಮುಖ್ಯಸ್ಥರಾದ ಮಂಜುನಾಥ್, ಮುಖ್ಯ ಶಿಕ್ಷಕಿಯಾದ ಪ್ರಸನ್ನ ಕುಮಾರಿ, ಶಿಕ್ಷಕಿಯರಾದ ನಿವೇಧ, ಭಾನುಪ್ರಿಯಾ, ಸುಷ್ಮಾ, ಎಲಿಜಭೆತ್ ಚಾಕೋ, ಕಲೈವಾಣಿ, ಸಂಗೀತ, ಸಿಂಧೂ, ಲಕ್ಷ್ಮೀ, ಶೃತಿ, ಗೌರಮ್ಮ, ಶಿಲ್ಪ, ಮುರಳಿ, ಸಿ. ರಮೇಶ್ ಮತ್ತು ಸಾವಿರಾರು ಸಂಖ್ಯೆಯಲ್ಲಿ ಪೋಷಕರು ಹಾಜರಿದ್ದರು.