ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆಯ ಅರಿವು ಅಗತ್ಯವಿದೆ

ಔರಾದ್:ಜೂ.19: ಗ್ರಾಮಿಣ ಭಾಗದ ಊರುಗಳಲ್ಲಿ ಜನರು ಕೋವಿಡ್ ಲಸಿಕೆ ಪಡೆಯುಲು ಭಯಪಡುತಿದ್ದು ಅಂತಹ ಕಡೆಗಳಲ್ಲಿ ಅರಿವು ಮೂಡಿಸುವ ಮೂಲಕ ಲಸಿಕೆ ಕೂಡಿಸುವುದು ಅಗತ್ಯವಿದೆ ಎಂದು ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ಜಲ ಜೀವನ ಮಿಷನ್ ತಂಡದ ನಾಯಕ ಡಾ. ನಂದಕುಮಾರ್ ತಾಂದಳೆ ನುಡಿದರು.

ತಾಲೂಕಿನ ವಡಗಾಂವ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಬೀದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಹಾಗೂ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ಜಲ ಜೀವನ ಮಿಷನ್ ಆಯೋಜನೆ ಹಾಗೂ ವಡಗಾಂವ ಗ್ರಾಪಂ ಸಹಯೋಗದಲ್ಲಿ ಕೋರೂನ ಜಾಗೃತಿ ಮತ್ತು ಲಸಿಕಾ ಅಭಿಯಾನದಲ್ಲಿ ಮಾತನಾಡಿ ಪ್ರತಿಯೊಬ್ಬರು ಲಸಿಕೆ ಪಡೆದು ಮತ್ತೂಬ್ಬರಿಗೆ ಲಸಿಕೆ ಪಡೆಯಲು ಪ್ರೇರೇಪಿಸಬೇಕು ಎಂದರು.

ಗ್ರಾಮದಲ್ಲಿ ಜಾಧಾ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಮಾಸ್ಕ ಸೈನಿಟೈಸರ ವಿತರಿಸಲಾಯಿತು.

ಪಿಡಿಒ ಅನಿಲ ಕುಮಾರ್ ಚಿಟ್ಟಾ ಮಾತನಾಡಿ, ಸಾಮಾನ್ಯವಾಗಿ ಓಡಾಡುವಾಗ ಪ್ರತಿಯೊಬ್ಬರು ಮಾಸ್ಕ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಮೂರನೇ ಅಲೆ ಬಾರದಂತೆ ಎಲ್ಲರೂ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿಶೂಲ ದೇವಿ, ಗ್ರಾಪಂ ಉಪಾಧ್ಯಕ್ಷ ಶಿವರಾಜ ಬಸಪ್ಪ, ವಡಗಾಂವ ವೈದ್ಯಾಧಿಕಾರಿ ಡಾ. ಸಿದ್ದಾರೆಡ್ಡಿ, ಲಾಲ್ ಬಹದ್ದೂರ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ವಿಶ್ವನಾಥ ಸ್ವಾಮಿ, ಪ್ರಕಾಶ್ ಡೋಳೆ, ವಿದ್ಯಾಸಾಗರ ಸೇರಿದಂತೆ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.