ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದರು.


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.19: ಜನಾರ್ಧನ ನಡೆ ಅಭಿವೃದ್ದಿ ಕಡೆ ಎನ್ನುವ ಸಂದೇಶದೊಂದಿಗೆ ಇಂದು ಬೆಳಿಗ್ಗೆ ನಗರದ ಪ್ರಶಾಂತನಗರದಿಂದ ಆರಂಭವಾದ ಪ್ರಚಾರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಅಂಗಡಿ ಸಂಗಣ್ಣಕ್ಯಾಂಪ್, ಇಸ್ಲಾಂಪುರ ನಗರದಕ್ಕೆ ಭೇಟಿ ನೀಡಿ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿ ಮಾಲಾರ್ಪಣೆ ಮಾಡಿದರು. ನಂತರ ಸೇವಾಲಾಲ್ ಸರ್ಕಲ್, ಬನ್ನಿಗಿಡ ಕ್ಯಾಂಪ್ ಹಾಗೂ ಪಕ್ಷದ ಕಾರ್ಯಾಲಯದಲ್ಲಿ ಪಕ್ಷ ಸೇರ್ಪಡೆ ನಡೆಯಿತು.
ಪ್ರಚಾರದಲ್ಲಿ ಜನರ್ಧನ ರೆಡ್ಡಿ ಮಾತನಾಡಿ, ಸ್ಥಳೀಯ ಕುಂದು ಕೊರತೆಗಳನ್ನು ಸ್ವತಃ ಅರಿತು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಪರಿಹರಿಸಲಾಗುವುದು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಹಲವಾರು ಯೋಜನೆಗಳ ಜನರಿಗೆ ತಲುಪಸಲು ಪ್ರಣಾಳಿಕೆ ತಯಾರಿಸಿದ್ದು, ಪ್ರಮುಖವಾಗಿ ಮಹಿಳೆಯರಿಗೆ ಸ್ವಾಲಯಂಬಿ ಜೀವನ ನಡೆಸಲು ಸ್ತ್ರೀ ಶಕ್ತಿ  ಸಂಘದ ಮೂಲಕ ಬಡ್ಡಿ ರಹಿತ ಸಾಲ ಯೋಜನೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ, ಬಸವೇಶ್ವರ ಆರೋಗ್ಯ ಶ್ರೀ ಯೋಜನೆ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ತಗಲುವ ಖರ್ಚು 1 ಸಾವಿರದಿಂದ- 20 ಲಕ್ಷ ರೂಗಳ ವರೆಗೂ ಉಚಿತವಾಗಿ ನೀಡುವ ಭರವಸೆ ನೀಡಿದರು. ಗ್ರಾಮೀಣ ಭಾಗದಲ್ಲಿ ಅವಶ್ಯವಾಗಿ ಬೇಕಾಗಿರುವ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಪಕ್ಷದ ಉದ್ದೇಶವಾಗಿದೆ. ನಮ್ಮ ಪಕ್ಷದಿಂದ ಜನರಿಗೆ ಅನುಕೂಲವಾದ ಯೋಜನೆಗಳನ್ನೇ ಪ್ರಣಾಳಿಕಯೆಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಸೌಲಭ್ಯ ಒದಗಿಸಲಾಗುವುದು ಎಂದರು. ಈ ವೇಳೆ ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮೀಅರುಣಾ, ಪಕ್ಷದ ಜಿಲ್ಲಾಧ್ಯಕ್ಷ ಮನೋಹರಸ್ವಾಮಿ ಹೇರೂರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸುರೇಶ, ಗ್ರಾಮೀಣ ಘಟಕದ ಅಧ್ಯಕ್ಷ ದುರುಗಪ್ಪ ಆಗೋಲಿ, ನಗರ ಘಟಕ ಅಧ್ಯಕ್ಷ ವೀರೇಶ  ಬಲ್ಕುಂದಿ, ವಿರೇಶ ಸುಳೇಕಲ್, ಚನ್ನವೀರನಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.