ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಬದ್ಧ: ಪ್ರಿಯಾಂಕ್ ಖರ್ಗೆ

ಚಿತ್ತಾಪೂರ: ನ.17:ಗ್ರಾಮೀಣ ಭಾಗಗಳ ಅಭಿವೃದ್ದಿ ನಾನು ಬದ್ಧತೆನಾಗಿದ್ದೆನೆ ಹಾಗೂ ಇನ್ನೂ ಅಭಿವೃದ್ದಿ ಕೆಲಸ ಮಾಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲ್ಲೂಕಿನ ಹೊಸೂರ ಗ್ರಾಮದಲ್ಲಿ ಒಟ್ಟು ರೂ 68.05 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೋಣೆ ( ರೂ 52 ಲಕ್ಷ), ಮಾದಿಗ ಸಮಾಜದ ಏರಿಯಾದಲ್ಲಿ ಸಾಂಸ್ಕøತಿಕ ಭವನ ( ರೂ 6.05 ಲಕ್ಷ) ಹಾಗೂ ಕೋಲಿ ಸಮಾಜದ ಹತ್ತಿರ ಸಾಂಸ್ಕ್ರತಿಕ ಭವನ ( ರೂ 10 ಲಕ್ಷ) ಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ನಾನು ಸಚಿವನಾಗಿದ್ದಾಗ ರೂ 80 ಕೋಟಿ ಕಲಬುರಗಿಗೆ ಕೊಟ್ಟಿದ್ದೇನೆ, ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾಗಬೇಕಿದ್ದ ರೂ. 200 ಕೋಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಳೆದ ಬಾರಿ ಮೊದಲ ಹಂತದಲ್ಲಿ ಹೊಸೂರ ಗ್ರಾಮಕ್ಕೆ ರೂ 60 ಲಕ್ಷ ವೆಚ್ವದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ ರೂ 60 ಲಕ್ಷ. ಹೀಗೆ ಒಟ್ಟು ರೂ 1ಕೋಟಿಗೂ ಅಧಿಕ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ವಿವೇಕ ಯೋಜನೆಯಡಿಯಲ್ಲಿ ನೂತನ ಶಾಲೆಗಳನ್ನು ಕಟ್ಟಿಸಿ ಅವುಗಳಿಗೆ ಕೇಸರಿ ಬಣ್ಣ ಬಳಿಯುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರದ ಆಧ್ಯತೆಯ ಬಗ್ಗೆ ತಕರಾರಿದೆ. ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಬೇಕಿತ್ತು. ಅದನ್ನ ಬದಿಗಿಟ್ಟು ಧ್ಯಾನ ಮಾಡಿಸುವುದು ಪೆÇೀಷಕರಿಂದ ನೂರು ರೂಪಾಯಿ ಕಲೆಕ್ಟ್ ಮಾಡಲಾಗುತ್ತಿದೆ ಇದು ಸರಿಯಲ್ಲ. ನಮ್ಮ ಆದ್ಯತೆ ಶಾಲೆಯ ಶಿಕ್ಷಣ ಮೂಲ ಸೌಕರ್ಯವಾಗಿರಬೇಕೆ ಹೊರತು ಬಣ್ಣದಲ್ಲಲ್ಲ ಎಂದು ಟೀಕಿಸಿದರು.

ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಅವುಗಳನ್ನು ತುಂಬುವ ಆಸಕ್ತಿ ಇಲ್ಲ. ಆದರೆ ಕೆಪಿಟಿಸಿಎಲ್, ಪಿಎಸೈ, ಪಂಚಾಯತ ರಾಜ್ ನೇಮಕಾತಿ ನಡೆಸಿದ್ದರು ಆದರೆ ಅಲ್ಲಿ ಹಣದ ಅವ್ಯವಹಾರ ನಡೆದು ಇಂದು ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲದ ವ್ಯಕ್ತಿಗಳು ಇತ್ತೀಚಿಗೆ ರಾಜಕಾರಣಕ್ಕೆ ಬರುತ್ತಿದ್ದಾರೆ. ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಠಿಸುತ್ತಿರುವವರನ್ನ ದೂರವಿಡಬೇಕು. ಅಭಿವೃದ್ದಿ ಪರವಿರುವ ಹಾಗೂ ಜನಪರ ಕಾಳಜಿ ಹೊಂದಿರುವವರನ್ನು ಗುರುತಿಸಬೇಕು. ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಗ್ರಾಪಂ ಅಧ್ಯಕ್ಷರಾದ ಮಹಿಪಾಲ ಮೂಲಿಮನಿ ಮಾತನಾಡಿ, ಗ್ರಾಮದಿಂದ ದಿಗ್ಗಾಂವ ಮುಖ್ಯ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಎಲ್ಲ ಸಮೂದಾಯದವರಿಗೆ ಸ್ಮಶಾನ ಭೂಮಿ ಒದಗಿಸಬೇಕು. ಸಾಮೂಹಿಕ ವಿವಾಹ ಮಾಡಲು ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಮುಸ್ಲಿಂರ ಖಬರಸ್ಥಾನಕ್ಕೆ ಕಂಪೌಂಡ್ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ಮಾಜಿ ಜಿಪಂ ಸದಸ್ಯ ಶಿವರುದ್ರ ಬೀಣಿ, ಬಸವರಾಜ್ ಚಿಮ್ಮನ್ನಳ್ಳಿ ಸೇರಿದಂತೆ ಇತರರು ಇದ್ದರು.