ವಾರ್ಡ್ ೧೭ ರಲ್ಲಿ ಟಾಸ್ಕ್ ಪೋರ್ಸ್ ಕಮಿಟಿ ಸಭೆ

ರಾಯಚೂರು.ಮೇ.೨೭-ಜಿಲ್ಲಾಧಿಕಾರಿಗಳು ಮತ್ತು ನಗರ ಶಾಸಕರದ ಡಾ. ಎಸ್ ಶಿವರಾಜ್ ಪಾಟೀಲ್ ಅವರ ಸೂಚನೆಯಂತೆ ನಗರದ ವಾರ್ಡ್ ನಂ ೧೭ ರಲ್ಲಿ ಕೋವಿಡ ೧೯ ಟಾಸ್ಕ್ ಪೋರ್ಸ್ ಕಮಿಟಿಯ ಮೊದಲನೆಯ ಸಭೆಯನ್ನು ಜವಾರ್ ನಗರದ ಸರಾಫ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಯಿತು, ಸ್ಥಳೀಯ ಸಂಸ್ಥೆ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ಈ ಕಾರ್ಯಪಡೆಯ ನಿಯಮಗಳು ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು, ನಗರಸಭೆ ಸದಸ್ಯರಾದ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಈ.ಶಶಿರಾಜ್ ಅವರು ಮಾತನಾಡಿ. ಕೊರೊನ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಪ್ರತಿಯೊಬ್ಬರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಕೊರೊನ ಶಂಕಿತರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು,ಪ್ರತಿಯೊಂದು ಓಣಿಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ಸ್ಯಾನಿಟೇಷನ್ ವ್ಯವಸ್ಥೆ ಮಾಡಬೇಕು,ಒಟ್ಟಾರೆಯಾಗಿ ನಾವೆಲ್ಲರೂ ಕೊರೊನ ಮಹಾಮಾರಿ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ಜಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪ್ರಿಯಾ, ನಗರಸಭೆಯ ಕಿರಿಯ ಅಭಿಯಂತರ ಶರಣಪ್ಪ ಇತಲಿ,ಮುಜಾಹಿದ್ನ, ನಗರಸಭೆ ಕರ ಪವಸೂಲಿಗಾರ ರವಿಕುಮಾರ್,ನೇತಾಜಿ ನಗರದ ಪೋಲಿಸ್ ಅಧಿಕಾರಿ ಶರಣಬಸಪ್ಪ, ನೈರ್ಮಲ್ಯ ನಿರೀಕ್ಷಕರು ನಾಗಪ್ಪ ,ಚೈತನ್ಯ ರೂರಲ್ ಡೆವಲಪ್ಮೆಂಟ್ ಸಮಿತಿಯ ಸದಸ್ಯರಾದ ಖಾಜಾ ಹುಸೇನ್, ದಫೇದಾರ್ ಉರುಕುಂದಪ್ಪ,ನರ್ಸ್ ಗಳಾದ ಶಾಯಿನ್ ಮತ್ತು ಮಂಜುಳಾ,ಆಶಾ ಕಾರ್ಯಕರ್ತರಾದ ಸರಸ್ವತಿ ಮತ್ತು ಶ್ರೀದೇವಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.