ಗ್ರಾಮೀಣ ಬಡವರ ಬದುಕಿಗೆ ಆಸರೆಯಾದ ಮನ್ರೇಗಾ

ನವದೆಹಲಿ, ಏ. ೨: ಕೇಂದ್ರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ – ಮನ್ರೇಗಾ ಈಗ ದುಡಿಯುವ ವರ್ಗ, ಅದರಲ್ಲೂ ಕೋಟ್ಯಂತರ ಗ್ರಾಮೀಣ ಜನರ ಉದ್ಯೋಗದ ಅಸರೆಯಾಗಿದೆ.
ದೇಶಾದ್ಯಂತ ವ್ಯಾಪಿಸಿರುವ ಮಹಾಮಾರಿ ಕೊರೊನಾ, ಬಹುಜನರ ಜೀವನವನ್ನೇ ಕಿತ್ತುಕೊಂಡಿದೆ. ಕಳೆದ ವರ್ಷ ಕೋವಿಡ್‌ನಿಂದ ಇಡೀ ದೇಶವೇ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಕೋಟ್ಯಂತರ ಜನರು ಕೆಲಸ ಕಳೆದುಕೊಂಡು ನಗರ, ಪಟ್ಟಣಗಳಲ್ಲಿ ಕೆಲಸ ಮಾಡುತ್ತಿದ್ದವರು ಮತ್ತೆ ತಮ್ಮ ಸ್ವಗ್ರಾಮಗಳತ್ತ ಮುಖ ಮಾಡಿದರು.
ದುಡಿಯುವ ವರ್ಗಕ್ಕೆ ಅದರಲ್ಲೂ ಗ್ರಾಮೀಣಿಗರ ಕೈಗೆ ಕೆಲಸ ನೀಡಲು ಕೇಂದ್ರ ಸರ್ಕಾರ ಮುಂದಾಗಿ ರೂಪಿಸಿದ ಈ ಮನ್ರೇಗಾ ಯೋಜನೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಬದುಕಿಗೆ ಆಸರೆಯಾಗಿದೆ.
ಬರೋಬ್ಬರಿ ೧೧.೧೭ ಕೋಟಿ ಮಂದಿಗೆ ಪ್ರಯೋಜನ

ಕಳೆದ ೨೦೦೬-೦೭ರಲ್ಲಿ ಆರಂಭವಾದ ನಂತರ ಈ ಯೋಜನೆಯಲ್ಲಿ ೧೧ ಕೋಟಿ ಜನರು ಬದುಕು ಕಂಡು ಕೊಂಡಿದ್ದಾರೆ. ಏಪ್ರಿಲ್ ೧ರಂದು ಲಭ್ಯವಾದ ಅಂಕಿ ಅಂಶಗಳ ಪ್ರಕಾರ ೨೦೨೦-೨೧ರಲ್ಲಿ ೧೧.೧೭ ಕೋಟಿ ಮಂದಿ ಈ ಯೋಜನೆ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಈ ಯೋಜನೆಯ ಪ್ರಯೋಜನ ಪಡೆದ ಒಟ್ಟು ಜನರ ಸಂಖ್ಯೆ ೨೦೧೩-೧೪ ಮತ್ತು ೨೦೧೯-೨೦ರ ಅವಧಿಯಲ್ಲಿ ೬.೨೧ ರಿಂದ ೭.೮೮ ಕೋಟಿ ಇತ್ತು. ಆದರೆ, ಕೋವಿಡ್ ನಿಂದ ಕೆಲಸ ಕಳೆದುಕೊಂಡ ವಲಸಿಗರು , ೩ ಕೋಟಿಗೂ ಅಧಿಕ ಜನರು ಮನ್ರೇಗಾ ಯೋಜನೆಗೆ ಮೊರೆ ಹೋಗಿದ್ದಾರೆ.
ಅಂಕಿ-ಸಂಖ್ಯೆಗಳ ಪ್ರಕಾರ, ೨೦೨೦-೨೧-೨೧ನೇ ಸಾಲಿನಲ್ಲಿ ೭.೫೪ ಕೋಟಿ ಗ್ರಾಮೀಣ ಕುಟುಂಬಗಳು ನರೇಗಾ ಯೋಜನೆಯಡಿ ಕೆಲಸ ಮಾಡಿದ್ದು, ೨೦೧೯-೨೦ರಲ್ಲಿ ೫.೪೮ ಕೋಟಿ ಗಿಂತ ಶೇ.೩೭.೫೯ರಷ್ಟು ಹೆಚ್ಚಾಗಿದೆ. ೨೦೧೦-೧೧ರಲ್ಲಿ ೫.೫ ಕೋಟಿ ದಾಖಲೆಯಾಗಿತ್ತು.
ವರ್ಷದಲ್ಲಿ ೧೦೦ ದಿನ ಕೆಲಸ
ಮನ್ರೇಗಾ ಯೋಜನೆಯಡಿಯಲ್ಲಿ, ವಯಸ್ಕರು ಕೌಶಲ್ಯರಹಿತ ದೈಹಿಕ ಕೆಲಸಮಾಡಲು, ಮುಖ್ಯವಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ, ಒಂದು ಆರ್ಥಿಕ ವರ್ಷದಲ್ಲಿ ಏಪ್ರಿಲ್ ೧ರಿಂದ ಮಾರ್ಚ್ ೩೧ವರೆಗೆ ಕನಿಷ್ಠ ೧೦೦ ದಿನಗಳ ವೇತನದ ಜೊತೆಗೆ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ.
೨೦೦೬-೦೭ರಲ್ಲಿ ದೇಶದ ೨೦೦ ಅತ್ಯಂತ ಹಿಂದುಳಿದ ಗ್ರಾಮೀಣ ಜಿಲ್ಲೆಗಳಲ್ಲಿ ಆರಂಭವಾದ ಈ ಯೋಜನೆಯನ್ನು ೨೦೦೭-೦೮ರಲ್ಲಿ ೧೩೦ ಜಿಲ್ಲೆಗಳಿಗೆ ವಿಸ್ತರಿಸಲಾಯಿತು, ೨೦೦೮-೦೯ರಿಂದ ಇಡೀ ದೇಶಕ್ಕೆ ವಿಸ್ತರಿಸಲಾಯಿತು. ೨೦೨೦-೨೧ರಲ್ಲಿ ೧೦೦ ದಿನಗಳ ಉದ್ಯೋಗ ಪೂರೈಸಿದ ಕುಟುಂಬಗಳ ಸಂಖ್ಯೆ ೬೮.೫೮ ಲಕ್ಷಕ್ಕೆ ತಲುಪಿದ್ದು, ೨೦೧೯-೨೦ರಲ್ಲಿ ೪೦.೬೦ ಲಕ್ಷಕ್ಕೆ ಏರಿಕೆಯಾಗಿದ್ದು, ಶೇ.೬೮.೯೧ರಷ್ಟು ಹೆಚ್ಚಳ ಕಂಡಿದೆ.
೬೨ ಸಾವಿರ ಕೋಟಿ ರೂಪಾಯಿ ಮೀಸಲು
೨೦೧೯-೨೦ರಲ್ಲಿ ೪೮.೪ ದಿನಗಳಿಗೆ ಏರಿಕೆಯಾಗಿ, ೨೦೨೦-೨೧ರಲ್ಲಿ ೫೧.೫೧ ದಿನಗಳಿಗೆ ಏರಿಕೆಯಾಗಿದೆ. ೨೦೨೦-೨೧ರಲ್ಲಿ ೩೮೫.೮೯ ಕೋಟಿ ವ್ಯಕ್ತಿ ದಿನಗಳನ್ನು ಸೃಜಿಸಿದ್ದರೆ, ೨೦೧೯-೨೦ರಲ್ಲಿ ೨೬೫.೩೫ ಕೋಟಿ ಗಿಂತ ಶೇ ೪೫.೪೩ರಷ್ಟು ಹೆಚ್ಚಾಗಿದೆ.
ಕೋವಿಡ್ ವರ್ಷ- ೨೦೨೦-೨೧ರಲ್ಲಿ ಮನ್ರೇಗಾ ವೆಚ್ಚವು ಹೊಸ ಗರಿಷ್ಠ ಮಟ್ಟ ತಲುಪಿದೆ. ೨೦೨೦-೨೧ರಲ್ಲಿ ಒಟ್ಟು ವೆಚ್ಚ ೧೧೦,೮೦೨.೦೫ ಕೋಟಿ ರೂಪಾಯಿ, ಅಂದರೆ ೨೦೧೯-೨೦ರಲ್ಲಿ ೬೮,೨೬೫.೯೭ ಕೋಟಿ ರೂಪಾಯಿಗಿಂತ ಶೇ.೬೨.೩೧ ರಷ್ಟು ಹೆಚ್ಚಾಗಿದೆ.
ಕೇಂದ್ರ ಸರ್ಕಾರ ಕೂಡ ಮನ್ರೇಗಾ ಯೋಜನೆಗೆ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ೨೦೨೦-೨೧ರ ಬಜೆಟ್‌ನಲ್ಲಿ ೬೧,೫೦೦ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದು, ಈಗ ಹೆಚ್ಚುವರಿಯಾಗಿ ಗೆ ೪೦,೦೦೦ ಕೋಟಿ ರೂ.ಗಳನ್ನು ಘೋಷಿಸಿದೆ.