ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಉಚಿತ ಪೀಟೋಪಕರಣಗಳು

ಪಿರಿಯಾಪಟ್ಟಣ:ಮಾ:18: ಬೆಂಗಳೂರಿನ ಬಿಎಸ್‍ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಪಿರಿಯಾಪಟ್ಟಣ ತಾಲೂಕಿನ ಆಯ್ದ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಉಚಿತ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು.
ಚೌತಿ ಶಾಲೆಯಲ್ಲಿ ಸಂಸ್ಥೆ ಯ ವತಿಯಿಂದ 24 ಡೆಸ್ಕ್ ಗಳು, 10 ಖುರ್ಚಿ ಗಳು, ಹಾಗೂ 4 ಟೇಬಲ್ ಗಳನ್ನು ಪಿರಿಯಾಪಟ್ಟಣ ಶಾಖೆ ಯು ವ್ಯವಸ್ಥಾಪಕರುಗಳಾದ ಶ್ರೀ ಹರೀಶ್ ರವರು ಮಾತನಾಡಿ ನಮ್ಮ್ ಸಂಸ್ಥೆ ಯು ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಪೆÇ್ರೀತ್ಸಾಹಿಸುತ್ತದೆ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸುಧಾರಣೆಗೆ ಸಂಸ್ಥೆಯ ವತಿಯಿಂದ ಈ ರೀತಿಯ ಅಳಿಲುಸೇವೆಯನ್ನು ಕೊಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ ಎಸ್ ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಮುಖ್ಯಸ್ಥ ಮಧು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಮಹೇಶ್ ಹಾಗೂ ಮುಖ್ಯ ಶಿಕ್ಷಕರಾದ ವೆಂಕಟೇಶ್ ಶಿಕ್ಷಕರಾದ ಮಲ್ಲಿಕಾರ್ಜುನ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಮಕ್ಕಳು ಹಾಜರಿದ್ದರು