ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ

 ಹರಿಹರ.ಡಿ.7 ; ತಾಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಬೆಳ್ಳೂಡಿ .ಬನ್ನಿಕೋಡ್  .ಹನಗವಾಡಿ  ಇತರೆ ಭಾಗಗಳಿಂದ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಂಚಾರ ಕಲ್ಪಿಸಿಕೊಡಬೇಕೆಂದು ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ಗೆ ಮನವಿಯನ್ನು ಸಲ್ಲಿಸಿದರು. ದಾವಣಗೆರೆ ಬಸ್ ಡಿಪೋದಿಂದ  ಹೊರಟು ಹರಿಹರ ತಾಲೂಕು ಯಕ್ಕೆಗೊಂದಿ ಬೆಳ್ಳೂಡಿ ಮಾರ್ಗ ಮುಖಾಂತರ ಹರಿಹರ ತಲಪುವ ಬಸ್ ಮಾರ್ಗ ಬದಲಾವಣೆ ಮಾಡುವ ಕುರಿತು ಸಂಬಂಧಿಸಿದ ಶಾಸಕರಿಗೂ ಅಧಿಕಾರಿಗಳಿಗೂ ಮನವಿಯನ್ನು ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ನಂದಿತಾವರೆ ಹಾಗೂ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು     ತಾಲೂಕು ಕುಣೆಬೆಳಕೆರೆ ಕಡ್ಲೆಗೊಂದಿ ಬನ್ನಿಕೋಡು ಬೆಳ್ಳೂಡಿ ಹನಗವಾಡಿ ಮಾರ್ಗದ ಮುಖಾಂತರ ಹರಿಹರಕ್ಕೆ ಬೆಳಗ್ಗೆ 10.30 ಸಮಯಕ್ಕೆ ಬಂದು ತಲುಪುವುದು ಸರಿಯಷ್ಟೇ ಆದರೆ ಸದರಿ ಮಾರ್ಗ ಮುಖಾಂತರವಾಗಿ ಹರಿಹರಕ್ಕೆ ಬೆಳಗ್ಗೆ 10.30 ಗಂಟೆಗೆ ತಲುಪುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ/ ಅರೆ ಸರ್ಕಾರಿ ನೌಕರರಿಗೆ ಗ್ರಾಮದಲ್ಲಿರುವ ಗ್ರಾಮಸ್ಥರಿಗೆ ಅನೇಕ ತೊಂದರೆಗಳು ಅನುಭವಿಸುತ್ತಾರೆ  ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥನಾ ಸಮಯದಲ್ಲಿ ಹಾಜರಾಗಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾರ್ಗದ ಬಸ್ಸನ್ನು ಪರಿಶೀಲನೆ ಮಾಡಿ ದಾವಣಗೆರೆಯಿಂದ ಕುಣೆಬೆಳಕೆರೆ ನಂದಿತಾವರೆ ಯಾಕೇಗೊಂದಿ ಗೇಟ್ ಬೆಳ್ಳೂಡಿ ಗೇಟ್ ಮಾರ್ಗದ ಮುಖಾಂತರ ಹರಿಹರಕ್ಕೆ 9.30 ಗಂಟೆಗೆ ಬಂದು ತಲುಪಿದಲ್ಲಿ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾರ್ಥನ ಸಮಯದಲ್ಲಿ ಹಾಜರಿರಲು ಹಾಗೂ ಸರ್ಕಾರಿ/ ಅರೆ ಸರ್ಕಾರಿ ನೌಕರರಿಗೆ ಗ್ರಾಮದ ಗ್ರಾಮಸ್ಥರಿಗೆ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ ಎಂದು ಸಂಘಟನೆ ಪದಾಧಿಕಾರಿಗಳು ವಿದ್ಯಾರ್ಥಿಗಳು ಒತ್ತಾಯಿಸಿದರು ಈ ವೇಳೆ ಕೆಎಸ್ ಆರ್ ಟಿಸಿ  ಡಿಪೋ ಮ್ಯಾನೇಜರ್ ಸಂದೀಪ್ ಮಾತನಾಡಿ ಈಗಾಗಲೇ ಗ್ರಾಮೀಣ ಪ್ರದೇಶದ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದೇವೆ ಈ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಮನೆಯನ್ನು ನೀಡಿದ್ದೀರಾ ಶಾಲೆ ಕಾಲೇಜ್ ಹೋಗುವಂಥ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಅನುಕೂಲವಾಗುವುದಕ್ಕೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡುತ್ತೇನೆಂದು ಭರವಸೆ ನೀಡಿದರು 
 ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರು ಎಸ್ ಗೋವಿಂದ ಉಪಾಧ್ಯಕ್ಷರು ಆನಂದ್ ಪ್ರಧಾನ ಕಾರ್ಯದರ್ಶಿ ಸುನಿಲ್ ಸಂಘಟನೆಯ ಸದಸ್ಯರು ಹಾಗೂ ವಿದ್ಯಾರ್ಥಿ ಘಟಕ ಬಸವರಾಜ್ ಜಿ ಎ ರೇವಣಸಿದ್ದ m n ಮಾಂತೇಶ್ ದರ್ಶನ್ ಕೆ ಎಂ ಸಿಂಧು ರಂಜಿತಾ ಕೆ ಕೆ ಚಿತ್ರ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರುAttachments area