ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆ ಮುಖ್ಯ-ರಾಜಾವೆಂಕಟಪ್ಪ ನಾಯಕ

ಚೀಕಲಪರ್ವಿ,ಮದ್ಲಾಪುರನಲ್ಲಿ ಪಿಎಚ್‌ಸಿ ಆರೋಗ್ಯ ಕೇಂದ್ರಗಳ ಉಧ್ಘಾಟನೆ
ಮಾನ್ವಿ,ಜು.೨೪- ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕನಾಗಿ ೪ ವರ್ಷಗಳ ಅಧಿಕಾರವಧಿಯಲ್ಲಿ ಕ್ಷೇತ್ರದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆ ಉದ್ದೇಶದಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ ಎಂದು ಶಾಸಕ ರಾಜಾವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಚೀಕಲಪರ್ವಿ, ಮದ್ಲಾಪುರ ಗ್ರಾಮಗಳಲ್ಲಿ ತಲಾ ೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪಿಎಚ್‌ಸಿಒ ಉಪ ಆರೋಗ್ಯ ಕೇಂದ್ರ ಕಟ್ಟಡಗಳ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಆರೋಗ್ಯವೇ ಮಹಾಭಾಗ್ಯ ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಹೀಗಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳನ್ನು ನಿರ್ಮಿಸುವ ಚಿಂತನೆ ಹೊಂದಿದ್ದರಿಂದ ಚೀಕಲಪರ್ವಿ ಮತ್ತು ಮದ್ಲಾಪುರ ಗ್ರಾಮಗಳಲ್ಲಿ ತಲಾ ೬೦ ಲಕ್ಷ ವೆಚ್ಚದಲ್ಲಿ ಪಿಎಚ್‌ಸಿ ಕೇಂಧ್ರಗಳನ್ನು ನಿರ್ಮಾಣ ಮಾಡಿ ಅರ್ಪಿಸಲಾಗಿದೆ. ಆರೋಗ್ಯ ಕೇಂದ್ರಗಳ ನಿರ್ಮಾಣದಿಂದ ಜನರು ಸೂಕ್ತ ಚಿಕಿತ್ಸೆಯನ್ನು ಪಡಯಲು ಸಾಧ್ಯವಾಗುತ್ತದೆ, ಆರೋಗ್ಯ ಸಿಬ್ಬಂದಿಗಳು ಜನರಿಗೆ ಉತ್ತಮ ಚಿಕಿತ್ಸೆಯನ್ನು ನಿಡಬೇಕು ಎಂದು ರಾಜಾವೆಂಕಟಪ್ಪನಾಯಕ ತಿಳಿಸಿದರು.
ಮಾನ್ವಿ ಪಟ್ಟಣದಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶಾಸಕರ ಅನುದಾನದಡಿ ಆಂಬುಲೆನ್ಸ್‌ಗಳ ಸೌಲಭ್ಯ ಹಾಗೂ ಡಯಾಲಿಸಿಸ್ ಕೇಂದ್ರಕ್ಕೆ ದೇಣಿಗೆದಾರರಿಂದ ಆಮ್ಲಜನಕ ಉತ್ಪಾದಕ ಘಟಕ ಆಳವಡಿಕೆ, ಜನರೇಟರ್ ವ್ಯವಸ್ಥೆ, ಕಂಪೌಂಡ್ ನಿರ್ಮಾಣ, ಶುದ್ದಕುಡಿಯುವ ನೀರು, ಆರೋಗ್ಯ ಸಿಬ್ಬಂದಿಗಳ ನೇಮಕಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಮಾನ್ವಿ, ಸಿರವಾರ ತಾಲೂಕಿನಲ್ಲಿನ ಎಲ್ಲಾ ಪಿಎಚ್‌ಸಿ ಕೇಂದ್ರಗಳಿಗೆ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಜನರ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದಾಗಿ ಹೇಳಿದರು.
ಕ್ಷೇತ್ರದ ಜನತೆಗೆ ನೀಡಿದ ಭರವಸೆಯನುಸಾರ ರಸ್ತೆಗಳ ನಿರ್ಮಾಣ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ, ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ಕ್ರಮ ಹಾಗೂ ದೇವಸ್ಥಾನ, ಮಸೀದಿ, ಚರ್ಚುಗಳು ಸೇರಿದಂತೆ ಎಲ್ಲಾ ವರ್ಗದ ಜನರ ಬೇಡಿಕೆಯನುಸಾರ ಅನುದಾನ ನೀಡಿದ್ದೇನೆ. ಚೀಕಲಪರ್ವಿ ಪ್ರಸಿದ್ದಿ ಶ್ರೀರುದ್ರಮುನೀಶ್ವರ ಮಠಕ್ಕೆ ೫೦ ಲಕ್ಷ ಅನುದಾನ ಹಾಗೂ ಮದ್ಲಾಪುರ ಗ್ರಾಮದ ಒಳರಸ್ತೆ ನಿಮಾಣಕ್ಕೆ ೫೨ ಲಕ್ಷ ಅನುದಾನ, ೬೦ ಲಕ್ಷ ವೆಚ್ಚದಲ್ಲಿ ಸಿಸಿರಸ್ತೆಗಳ ನಿರ್ಮಾಣ ಹಾಗೂ ಈ ಭಾಗದ ಪ.ಜಾ.ಪ.ಪಂ.ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಲು ತಲಾ ೫೦ ಲಕ್ಷ ವೆಚ್ಚದಲ್ಲಿ ಏತ ನೀರಾವರಿ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದ ಶಾಸಕ ರಾಜಾವೆಂಕಟಪ್ಪನಾಯಕ ಅವರು ಇನ್ನುಳಿದ ಅವಧಿಯಲ್ಲಿ ಕ್ಷೇತ್ರದ ಜನರ ಆಶಯಗನುಗುಣವಾಗಿ ಕೆಲಸ ಕಾರ್ಯಗಳನ್ನು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಬದಲ್ಲಿ ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಠದ ಶ್ರೀಸದಾಶಿವ ಮಹಾಸ್ವಾಮಿ, ನಿರಂಜನ್ ದೇವರು ಮೈಸೂರು, ಶರಣಬಸವ ದೇವರು ಅರಹಳ್ಳಿ, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಜೆಡಿಎಸ್ ರಾಜ್ಯ ಸಂಘಟನಾಕಾರ್ಯದರ್ಶಿ ಸೈಯದ್ ಹುಸೇನ್ ಸಾಹೇಬ್, ನಗರ ಘಟಕ ಅಧ್ಯಕ್ಷ ಖಲೀಲ್ ಖುರೇಶಿ, ತಾಲೂಕ ವೈಧ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ, ಮುಖಂಡರಾದ ಗೋಪಾಲನಾಯಕ ಹರವಿ, ಕೆ.ವೆಂಕಟೇಶನಾಯಕ, ಶರಣಪ್ಪಗೌಡ ಮದ್ಲಾಪುರ, ಹನುಮಂತ ಭೋವಿ, ಆರ್.ಬಸವರಾಜಶೆಟ್ಟಿ, ಹಬೀಬ್ ನದಾಪ್, ಬುಡ್ಡಪ್ಪನಾಯಕ, ಯಲ್ಲಪ್ಪನಾಯಕ ವಕೀಲ, ಗ್ರಾ.ಪಂ.ಸದಸ್ಯರಾದ ಮರೇಗೌಡ ಬುದ್ದಿನ್ನಿ, ಚಂದ್ರಪ್ಪಗೌಡ, ಖಾಸಿಂ, ತಿಮ್ಮಣ್ಣಗೌಡ, ಬಸವ ಕಬ್ಬೇರ್, ರುದ್ರಗೌಡ, ಹುಸೇನಿನಾಯಕ, ರಂಗಪ್ಪನಾಯಕ, ರವಿ, ಕಾಶೀನಾಥ, ನಾಗಲಿಂಗ, ಲಕ್ಷ್ಮಣ್, ತಾಜುದ್ದೀನ್, ಹನುಮಂತ, ರಫಿ ಹಾಗೂ ಆರೋಗ್ಯಾಧಿಕಾರಿಗಳಾದ ಡಾ.ರಾಜೇಂದ್ರ, ಮಂಜುಳಾ, ಬಾಲಪ್ಪನಾಯಕ, ಶರಣಪ್ಪ, ವಿರೂಪಾಕ್ಷಯ್ಯಸ್ವಾಮಿ, ವೆಂಕಟೇಶ್ವರರಾವ್, ದೇವೇಗೌಡ ಉದ್ಬಾಳ್, ರಾಮಣ್ಣ ಭೋವಿ, ಮೌಲಪ್ಪ ಚೀಕಲಪರ್ವಿ, ಹನುಮಂತನಾಯಕ, ಹನುಮಪ್ಪನಾಯಕ ರಬ್ಬಣಕಲ್, ಹುಸೇನಪ್ಪ, ವಿಜಯನಾಯಕ ಕೊಟ್ನೆಕಲ್, ಪಿಡಬ್ಲ್ಯುಡಿ ಜೆಇ ಮಸ್ತಾನ್, ಗುತ್ತೇದಾರ ರಹೀಮ್‌ಪಾಷ ಸೇರಿದಂತೆ ಗ್ರಾ.ಪಂ.ಅಧ್ಯಕ್ಷೆ, ಉಪಾಧ್ಯಕ್ಷರು, ಸದಸ್ಯರು, ಅನೇಕ ಮುಖಂಡರು, ಗ್ರಾಮಸ್ಥರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.