ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಪರ ಮತದಾರರು

ಹಗರಿಬೊಮ್ಮನಹಳ್ಳಿ:ಜ.02 ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪರ ಗ್ರಾಮೀಣ ಮತದಾರರು ಇದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ 29 ಗ್ರಾ.ಪಂ.ಗಳಿದ್ದು ನಡೆದಿರುವ 26 ಗ್ರಾ.ಪಂ.ಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 305 ಸದಸ್ಯರು ಆಯ್ಕೆಯಾಗಿದ್ದಾರೆ. 19 ಪಂಚಾಯತಿಗಳ ಅಧಿಕಾರ ಬಿಜೆಪಿ ಪಕ್ಷದ ಪಾಲಾಗಿದೆ ಎಂದು ಮಾಜಿ ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ಬೆಂಬಲಿತ ನೂತನ ಪಂಚಾಯತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಪಂಚಾಯತಿ ಸದಸ್ಯರಿಗೆ ಸಂಸದ ಮತ್ತು ಶಾಸಕರಿಗಿಂತಲೂ ಹೆಚ್ಚು ಅಧಿಕಾರ ಇದೆ. ಪಂಚಾಯತಿ ಸದಸ್ಯರು ಗ್ರಾಮಸಭೆಯಲ್ಲಿ ಅನುಮೋದಿಸಿದ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತಿರಸ್ಕರಿಸುವ ಅಧಿಕಾರ ಶಾಸಕರಿಗೂ ಇಲ್ಲ ನಿಮ್ಮ ನಿಮ್ಮ ವ್ಯಾಪ್ತಿಯ ಪಂಚಾಯತಿಗಳಲ್ಲಿ ವಸತಿ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿ ನೀವು ತಯಾರಿಸಿದರೆ, ನಾನು ವಸತಿ ಸಚಿವ ಸೋಮಣ್ಣನವರ ಗಮನ ಸೆಳೆದು ಮನೆಗಳ ನಿರ್ಮಾಣಕ್ಕೆ ಶ್ರಮಿಸುತ್ತೆನೆ. ಯೋಜನೆಯು ಸಮಾಜದ ಕಟ್ಟ ಕಡೆಯ ನಿರ್ಗತಿಕನಿಗೂ ತಲುಪಬೇಕು.ಇಡೀ ಜಿಲ್ಲೆಯಲ್ಲಿಯೇ ನಮ್ಮ ಕ್ಷೇತ್ರದ ಅತೀ ಹೆಚ್ಚು ಪಂಚಾಯತಿಗಳಲ್ಲಿ ಅಧಿಕಾರ ಬಿಜೆಪಿಗೆ ಲಭಿಸಿದೆ. ಈ ಹಿನ್ನಲೆಯಲ್ಲಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ, ವಸತಿ ಯೋಜನೆ ಸಚಿವ ಸೋಮಣ್ಣ ಮತ್ತು ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
ಸಮಾರಂಭದಲ್ಲಿ 200 ಕ್ಕೂ ಹೆಚ್ಚು ನೂತನ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು.ಮಂಡಲಾಧ್ಯಕ್ಷ ವೀರೇಶ ಸ್ವಾಮಿ, ಮುಖಂಡರಾದ ಪಿ.ಸೂರ್ಯಬಾಬು,ಶೇಖರಪ್ಪ ರಾರಾಳ್, ಬಾದಾಮಿ ಮೃತ್ಯುಂಜಯ, ಉಮಾ ಬಸವರಾಜ್, ಜ್ಯೊತಿರಾಜ್, ಮೂರ್ತೆಪ್ಪ, ಕಿನ್ನಾಳ್ ಸುಭಾಸ್ ಹಾ ಎಸ್.ಟಿ. ಮೋರ್ಚಾಧ್ಯಾಕ್ಷ ಗರಗ ಪ್ರಕಾಶ್, ಭದ್ರವಾಡಿ ಚಂದ್ರಶೇಖರ್, ಆಡೂರು ಶಿವಕುಮಾರ್, ಸೌಭಾಗ್ಯ, ವೆಂಕಟೇಶ್, ಶ್ರೀಶೈಲ, ಸಿದ್ದರಾಜು, ವಿ.ಬಡಿಗೇರ್ ಬಣಕಾರ್ ಗೊಣೆಪ್ಪ ಮಂಡಲ ಕಾರ್ಯದರ್ಶಿ ಬ್ಯಾಟಿ ನಾಗರಾಜ್,ನಗರ ಘಟಕದ ಅಧ್ಯಕ್ಷ ಜಿ.ಎಂ.ಜಗದೀಶ್,ರಾಜು ಪಾಟೀಲ್,ಇತರರಿದ್ದರು. ಪಿ.ರಾಜಲಿಂಗಪ್ಪ ನಿರ್ವಹಿಸಿದರು.