ಗ್ರಾಮೀಣ ಪ್ರದೇಶದಲ್ಲಿಂದು ಓಕಳಿ ಸಂಭ್ರಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.23: ನಗರ ಪ್ರದೇಶದಲ್ಲಿ ಹೋಲಿ ಹುಣ್ಣಿಮೆಯ ಮರುದಿನ‌ ಓಕಳಿ‌ ಆಚರಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಮರುದಿನ ಓಕಳಿ ಆಚರಿಸುವ ಪರಿಪಾಠ ಉತ್ತರ ಕರ್ನಾಟಕ ಭಾಗದಲ್ಲಿದೆ.
ಯುಗಾದಿ ಒಕುಳಿ ಸಂಭ್ರಮದಿಂದ ಮುದ್ದು ಮಕ್ಕಳು ಹಾಗೂ ಯುವಕರು, ಇಂದು ಬೆಳಿಗ್ಗೆಯಿಂದಲೇ ನೀರು, ಹಸಿರು, ಕೆಂಪು ಹಾಗೂ ಸಿಲ್ವರ್ ಬಣ್ಣಗಳನ್ನು ಹಿಡಿದು ಬೀದಿಗಳಲ್ಲಿ ತಮ್ಮ ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ಬಣ್ಣ ಹಚ್ಚಿ ಸಂಭ್ರಮಿಸುತ್ತಿರುವುದು ಬಿರಿ ಬಿಸಿಲುನಲ್ಲೂ ಕಂಗೊಳಿಸಿತು.
 ವಿವಿಧ ಬಗೆಯ ಬಣ್ಣಗಳನ್ನು ಹಚ್ಚಿ ಕುಣಿದು ಕುಪ್ಪಳಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಹಬ್ಬ ಎಂದ ಅತಿಶೋಕ್ತಿಯಲ್ಲ, ತಮ್ಮ ದಿನನಿತ್ಯ ಜೀವನದ ಜಂಜಾಟದಲ್ಲಿ ಪ್ರತಿದಿನ ಸ್ವಯಂ ಕೆಲಸಕಾರ್ಯಗಳಲ್ಲಿ ತಲ್ಲಿನವಾಗುತ್ತಿದ್ದ ಜನರು ಇಂದು ಎಲ್ಲಾ ಜಂಜಾಟಗಳನ್ನು ಬದಿಗಿಟ್ಟು ಬಣ್ಣದಲ್ಲಿ ಮಿಂದು ಏಳುವುದು ನೋಡುಗರ ಕಣ್ಮನ ಸೆಳೆಯಿತು.