ಗ್ರಾಮೀಣ ಪ್ರದೇಶಗಳ ಉತ್ಥಾನಕ್ಕೆ ಎನ್.ಎಸ್.ಎಸ್. ಮಾದರಿ:ಅಮೃತರಾವ ಚಿಮಕೋಡೆ

ಬೀದರ,ಜು 02: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಬೀದರ ಹಾಗೂ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ದತ್ತು ಪಡೆದ ನೇಮತಾಬಾದ ಗ್ರಾಮ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮತಾಬಾದ ನಲ್ಲಿ ಜುಲೈ 1,ರಿಂದ 7ರ ವರೆಗೆ ಹಮ್ಮಿಕೋಳ್ಳಲಾಗಿದೆ.
ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಸಸಿಗ ನೀರೆರೆಯುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಾತನಾಡುತ್ತ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಮಾದರಿಯ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಗೋರ್ವಧನ ರಾಠೋಡ ಅವರು ಮಾತನಾಡುತ್ತ ರಾಷ್ಟ್ರಪ್ರೇಮ ಪ್ರತಿಯೊಬ್ಬ ವಿದ್ಯಾರ್ಥಿಗಳ ಮನದಲ್ಲಿ ಮೂಡಬೇಕು ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಸರಕಾರವು ವಿಶೆಷವಾಗಿ ವಿಧ್ಯಾರ್ಥಿಗಳಿಗಾಗಿ ಹಲವು ಯೋಜನೆಗಳಲೋಂದಾದ ಎನ್.ಎಸ್.ಎಸ್ ಶಿಬರವು ಇದೆ, ಇದರ ಸದುಪಯೊಗ ಪಡೆದುಕೋಳ್ಳಬೇಕು ಎಂದರು.
ಶಾಲೇಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಜಗನ್ನಾಥ ದೋಡ್ಡಿ,ಶಾಲೇಯ ಮುಖ್ಯ ಗುರುಗಳಾದ ರಮೇಶ ಮಾಣಿಕ.ಮತ್ತು ಸಂಸ್ಥೆ ಅಧ್ಯಕ್ಷರ ಸುಪುತ್ರರಾದ ಅವಿನಾಶ ಚಿಮಕೋಡೆ ಯವರು ವೆದಿಕೆ ಮೆಲಿದ್ದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಅಧಿಕಾರಿಗಳಾದ ಡಾ. ಗೋವಿಂದ ಮೋತಿರಾಮ ಸ್ವಾಗತಿಸಿ ಪ್ರಸ್ತವೀಕ ಮಾತನಾಡಿದರು.
ಪ್ರಾರಂಭದಲ್ಲಿ ಕು.ಪಾರ್ವತಿ ಪ್ರಾರ್ಥನ ಗೀತೆ ಹಾಡಿದರೆ, ಕು.ಪಾರ್ವತಿ ಪಿ.ಸ್ವಾಗತ ಗೀತೆ ಹಾಡಿದರು.ಒಮಕಾರ ಮಾಶೆಟ್ಟಿ ನಿರೂಪಿಸದರೆ, ವೈಜಿನಾಥ ಗೌಡನಗುರು ವಂದಿಸಿದರು.
ಕಾಂiÀರ್iಕ್ರಮದಲ್ಲಿ ಶಾಲೇಯ ಮತ್ತು ಕಾಲೇಜಿನ ಸಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.