ಗ್ರಾಮೀಣ ಪ್ರದೇಶಕ್ಕೆ, ಸಮಾಜಕ್ಕೆ ವಿಜ್ಞಾನದ ಕೊಡುಗೆ ಅಪಾರ :ಡಾ.ಗಿರೀಶ್


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.07: ಬಿಸಿಲಿನ ತಾಪಮಾನ, ಮಳೆ, ಅವಮಾನ ವೈಪರಿತ್ಯ ಇತ್ಯಾದಿ ವಿಷಯಗಳನ್ನು ತಿಳಿಸಿಕೊಡುತ್ತ ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ರೈತರ ಮಿತ್ರನಾಗಿ ಮಹತ್ವವನ್ನು ಪಡೆದುಕೊಂಡಿದೆ ಹಾಗೆ ಸಮಾಜಕ್ಕೆ ಕೂಡಾ ವಿಜ್ಞಾನದ ಕೊಡುಗೆ ಅಪಾರ ಎಂದು ಇಸ್ರೋದ ಖ್ಯಾತ ವಿಜ್ಞಾನಿ ಮತ್ತು ಇಸ್ರೋ ಉಪ ನಿರ್ದೇಶಕರು ಡಾಕ್ಟರ್ ವಿ ಗಿರೀಶ್ ಹೇಳಿದರು.
ತಾಲೂಕಿನ ನಿಂಬಳಗೆರೆ ಸರ್ಕಾರಿ ಪ್ರೌಢಶಾಲೆಯ ಸ್ವಾಭಿಮಾನಿ ಶಾಲಾ ಪ್ರಶಸ್ತಿ ಸಂಭ್ರಮ, ವಿಜ್ಞಾನ ದಿನಾಚರಣೆ ಮತ್ತು ಎ ಟಿ ಏಲ್ ಕಮ್ಯುನಿಟಿ ಡೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಊರಿನ ಮುಖಂಡರಿಗೂ ಶಾಲೆಯ ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಗದೀಶ್ ಕ್ಷೇತ್ರ ಸಮನ್ವಯಾಧಿಕಾರಿ, ಕೆಜಿ ಆಂಜನೇಯ ಸಹಾಯ ನಿರ್ದೇಶಕರು ಅಕ್ಷರ ದಾಸೋಹ, ಗ್ರಾಮ ಪಂಚಾಯತಿ ಅಧ್ಯಕ್ಷರು ಬುಡ್ರಿ ಗಂಗಮ್ಮ ಮಹಾಂತೇಶ್, ಶಾಲಾ ಭುದಾನಿಗಳು ಕೊಟ್ರೇಶಪ್ಪ, ಜಿಎಂಸಿ ಟ್ರಸ್ಟ್ ಗುರುಸಿದ್ಧ ಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು, ಸ್ವಾಮಿ ವಿವೇಕಾನಂದ ಟ್ರಸ್ಟ್ ನಿಂಬಳಗೆರೆ, ಊರಿನ ಮುಖಂಡರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಫಕೀರಪ್ಪ ವಹಿಸಿದ್ದರು
ವಿಜ್ಞಾನ ಶಿಕ್ಷಕರಾದ ಪತ್ರೇಶ್ ಸ್ವಾಗತಿಸಿದರು.