ಗ್ರಾಮೀಣ ಪ್ರದೇಶಕ್ಕೂ ಕೊರೋನಾ ಸೊಂಕು

ಸಿರವಾರ.ಮೇ.೧೬-ಕೊರೋನಾ ವೈರಸ್ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದ್ದೂ ಅದನ್ನು ತಡೆಯುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಹಸೀಲ್ದಾರ್ ವಿಜಯೇಂದ್ರ ಹುಲಿನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಿಡಿಓ ಹಾಗೂ ವಿವಿಧ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷದ ಕೊರೋನಾಗೂ ಈ ವರ್ಷದ ಕೊರೋನಾ ವೈರಸ್ ಬಹಳ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ನಗರ ಪ್ರದೇಶಗಳಿಗೆ ಕೂಲಿ ಕೆಲಸ ಅರಸಿ ಹೊಗಿದ್ದ ಜನರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ಗ್ರಾಮೀಣ, ಹಳ್ಳಿಗಾಡಿಗೂ ವೈರಸ್ ಹರಡುತ್ತಿದೆ.
ಕೊರೋನಾ ಪಾಸಿಟಿವ್ ಬಂದವರಿಗೆ ಹೋಮ್ ಕ್ವಾರೇಂಟೈನ್ ಇರಲು ತಿಳಿಸಿ, ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರೆ ಇರುವುದರಿಂದ ಅವರ ಮನೆಗಳು ಸಹ ಚಿಕ್ಕವಾಗಿ ಇರುತ್ತವೆ. ಮನೆಯಲಿ ಇರಲು ತೊಂದರೆಯಾಗಬಹುದು ಆದರಿಂದ ತಾಲೂಕ ಆಡಳಿತದಿಂದ ತೆರೆದಿರುವ ಕೊವೀಡ್ ಸೆಂಟರ್ ಗಳಿಗೆ ಕಳಿಸಿ. ಈಗಾಗಲೇ ೩ ದಿನಗಳ ಕಾಲ ನಿಷೇದಾಜ್ಞೆ ವಿಧಿಸಲಾಗಿದೆ. ಯಾರೂ ಸಹ ಮನೆಯಿಂದ ಆಚೆ ಬಂದರೆ ಕ್ರಮಕೈಗೊಳಿ ಎಂದು ಪಿಎಸ್ ಐ ಅವರಿಗೆ ತಿಳಿಸಿದರು. ಆಸ್ಪತ್ರೆಗಳಲ್ಲಿ ಕೊವೀಡ್ ತಪಾಸಣೆ, ಕೊವೀಡ್ ಶೀಲ್ ಲಸಿಕೆಯನ್ನು ಹೆಚ್ಚು ತರಿಸಿಕೊಳುವಂತೆ ವೈದ್ಯರಿಗೆ ಹೇಳಿದ್ದರು. ಈ ಸಂದರ್ಭದಲ್ಲಿಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ,ತಾ.ಪಂ ಯೋಜನಾ ನಾಡ ತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಪಿಎಸ್ ಐ ಸುಜಾತನಾಯಕ,ಡಾ.ಪರಿಮಳಾಮೈತ್ರಿ, ತಾ.ಪಂ ಯೋಜನಾಧಿಕಾರಿ ಜಗ್ಗನಾಥ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಫವಿದಾಬಗಂ ಸೇರಿದಂತೆಇನ್ನಿತರರು ಇದ್ದರು.