ಗ್ರಾಮೀಣ ಪ್ರತಿಭೆಗೆ ಅತ್ಯುನ್ನತ ಹುದ್ದೆ ಹೆಮ್ಮೆಯ ವಿಷಯ :ಮಲ್ಹಾರರಾವ ಗಾರಂಪಳ್ಳಿ

ಕಲಬುರಗಿ,ಜು.14:ಕಲಬುರಗಿ ಅಪರಿಚಿತ ಜಿಲ್ಲೆ ಎಂದುಕೊಂಡಿದ್ದೆ ಆದರೆ ಸಮಸ್ತ ನಾಗರಿಕರೆಲ್ಲರೂ ಕರೆಸಿ ಸನ್ಮಾನಿಸಿರುವುದು ನಮ್ಮ ಊರು, ನಮ್ಮವರಿದ್ದಾರೆ ಎಂಬ ಭಾವನೆಗಳ ಬೆಸುಗೆ ದೊರೆತಂತಾಗಿದೆ, ದೈವಸಂಕಲ್ಪದಿಂದ ಅಡಿಷನಲ್ ಅಡ್ವಕೇಟ್ ಜನರಲ್ ಜವಾಬ್ದಾರಿ ಸಿಕ್ಕಿರುವುದು ಸಂತಸ ಎಂದು ಸನ್ಮಾನ ಸ್ವೀಕರಿಸಿದ ಅಡಿಷನಲ್ ಅಡ್ವಕೇಟ್ ಜನರಲ್ ಶ್ರೀಮಲ್ಹಾರರಾವ ತಿಳಿಸಿದರು.

ನಗರದ ಸಂಗಮೇಶ್ವರ ಬಡಾವಣೆಯ ಶ್ರೀಸೂರ್ಯನಾರಾಯಣ ದೇವಸ್ಥಾನದ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಶ್ರೀಮತ್ ಕಣ್ವಮಠ, ಶ್ರೀಯಾಜ್ಞವಲ್ಕ್ಯ ಸಮಿತಿ ಹಾಗೂ ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಸಮಸ್ತ ಸಮಾಜಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಯ ಅಧ್ಯಕ್ಷರಾದ ಶ್ರೀಮಲ್ಹಾರರಾವ ಗಾರಂಪಳ್ಳಿ ಮಾತನಾಡಿ ಗ್ರಾಮೀಣ ಭಾಗದಿಂದ ಬಂದಿರುವಂತಹ ಶ್ರೀಮಲ್ಹಾರರಾವ ಅವರಿಗೆ ಅತ್ಯುನ್ನತ ಅಡ್ವಕೇಟ್ ಜನರಲ್ ಹುದ್ದೆ ದೊರೆತಿರುವುದು ಕಲಬುರಗಿಯ ವಿಪ್ರ ಬಾಂಧವರೇಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ ಶ್ರೀಸೂರ್ಯನಾರಾಯಣ, ಮಹರ್ಷಿ ಶ್ರೀಯಾಜ್ಞವಲ್ಕ್ಯ ಗುರುಗಳ ಅನುಗ್ರಹ, ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ ಸಾಧನೆ ಮಾಡುವುದಕ್ಕಿಂತ ಸಾಧನೆಯನ್ನು ಗುರುತಿಸುವುದು ಉತ್ತಮವಾದ ಕಾರ್ಯ, ಈಗಿನ ಕಾಲಮಾನದಲ್ಲಿ ಅವಕಾಶಗಳು ಸಿಗುವುದು ಬಹಳ ಅಪರೂಪ, ಅವಕಾಶಗಳು ತಾವಾಗಿಯೇ ಬರುವುದಿಲ್ಲ, ಅವಕಾಶವನ್ನು ಸೃಷ್ಟಿಸಬೇಕು, ಗ್ರಾಮಾಂತರ ಪ್ರತಿಭೆಯನ್ನು ಸನ್ಮಾನಿಸುವ, ಪ್ರೋತ್ಸಾಹ ತುಂಬಿರುವ ಕಾರ್ಯಕ್ರಮ ಇದು, ಶ್ರೀಮಲ್ಹಾರರಾವ ಅವರು ಇನ್ನೂ ಎತ್ತರದ ಮಟ್ಟಕ್ಕೆ ಬೆಳೆಯಲಿ, ಮೌಲ್ಯಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಲಿ ಎಂದು ಹರಸಿದರು.

ಶ್ರೀಮತ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಿಸಿಹೊಳೆಯ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವೃತದ ಆಮಂತ್ರಣ ಪತ್ರಿಕೆಯನ್ನು ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ವಿ. ಕಿಶನರಾವ್ ಕುಲಕರ್ಣಿ ಬಿಡುಗಡೆಗೊಳಿಸಿದರು.

ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ವಿ. ಕಿಶನರಾವ್ ಕುಲಕರ್ಣಿ ಮತ್ತು ಕಲಬುರಗಿ ವಿಭಾಗೀಯ ಕಣ್ವ ಪರಿಷತ್ತಿನ ಗೌರವಾಧ್ಯಕ್ಷರಾದ ಶಾಮಾಚಾರ್ಯ ಬೈಚಬಾಳ ಅವರು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಕಣ್ವ ಪರಿಷತ್ತಿನ ಸಂಚಾಲಕರಾಗಿ ನೇಮಕಗೊಂಡ ಶ್ರೀ ಭೀಮರಾವ್ ಕುಲಕರ್ಣಿ ಮತ್ತು ಶ್ರೀ ಭೀಮಸೇನರಾವ್ ಸಿಂಧಿಗೇರಿ ಅವರಿಗೆ ಆದೇಶಪತ್ರ ನೀಡಿ ಗೌರವಿಸಿದರು.

ಪರಿಷತ್ತಿನ ಕಲಬುರಗಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಸಂಗೀತಾ ವಕೀಲ್ ನಿರೂಪಿಸಿದರು, ರಾಜ್ಯ ಸಂಘಟನಾ ಕಾರ್ಯದರ್ಶಿ ವಿನುತ್ ಎಸ್ ಜೋಶಿ ಸ್ವಾಗತಿಸಿದರು, ಸುಪ್ರಸಿದ್ಧ ಗಾಯಕಿ ಶ್ರೀಮತಿ ಡಾ. ಸುನಂದ ಸಾಲವಾಡಗಿ ಪ್ರಾರ್ಥನಾ ಗೀತೆ ಹಾಡಿದರು, ಸಮಿತಿಯ ಕಾರ್ಯದರ್ಶಿಗಳಾದ ಹಾಗೂ ಪರಿಷತ್ತಿನ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಘವೇಂದ್ರ ವಕೀಲ್ ವಂದಿಸಿದರು.

ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಚಂದ್ರಕಾಂತ ಗಧಾರ್, ವಾಸುದೇವರಾವ್ ಸಿಂದಗೇರಿ, ವಕೀಲರಾದ ಲಕ್ಷ್ಮೀಕಾಂತ್ ಗಾರಂಪಳ್ಳಿ, ಶಾಮಾಚಾರ್ಯ ಜೋಶಿ ವನದುರ್ಗ, ಸತ್ಯನಾರಾಯಣ ಕುಲಕರ್ಣಿ, ನಾರಾಯಣರಾವ್ ಕುಲಕರ್ಣಿ, ಮಾರ್ಥಂಡ ಹೇಮನೂರ್, ಪ್ರಮೋದ್ ಕಾಮನಟಗಿ, ಅನುಪ ವಿ ಕುಲಕರ್ಣಿ, ಗಿರೀಶ್ ಮೋತಕಪಲ್ಲಿ, ಶ್ರೀನಿವಾಸ್ ಕುಲಕರ್ಣಿ, ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಅಂಬುಜಾ ಸಿಂದಗೇರಿ, ಪ್ರತಿಭಾ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ, ಪೂರ್ಣಿಮಾ ದೇವರು, ಗಾಯತ್ರಿ ಕುಲಕರ್ಣಿ, ರೋಹಿಣಿ ಕುಲಕರ್ಣಿ, ಸುಚಿತಾ ಕುಲಕರ್ಣಿ, ಲಕ್ಷ್ಮಿ ಕುಲಕರ್ಣಿ ಸೇರಿದಂತೆ ಯುವಕರು ಮಹಿಳೆಯರು ಉಪಸ್ಥಿತರಿದ್ದರು.