ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಮುಖ್ಯ

ಸಂಡೂರು :ನ:19 ಸದೃಡ ಕಾಯವನ್ನು ಬೆಳಿಸಿಕೊಂಡು ಆರೋಗ್ಯವಂತರಾಗಬೇಕಾದರೆ, ಕ್ರೀಡೆಗಳು ಸಹಕಾರಿ. ಇಂದು ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೇ ಪಟ್ಟಣಗಳಲ್ಲಿಯೂ ಕ್ರೀಡೆಗಳು ಮಾಯವಾಗುತ್ತಿದ್ದು, ಕಳಪೆ ಮಟ್ಟಕ್ಕಿಳಿದಿವೆ. ಮಹಾಮಾರಿ ಕರೋನಾ ಕೋವಿಡ್-19 ರೋಗವು ರೋಗದ ಹಾವಳಿ ಹೆಚ್ಚಾಗುತ್ತಿದ್ದು, ಯಾವ ಕಾರ್ಯಕ್ರಮಗಳಾಗಲೀ ಕ್ರೀಡೆಗಳಾಗಲೀ ನಡೆಯದೇ ಇರುವುದು ಪ್ರಮುಖ ಕಾರಣವಾಗಿದ್ದು, ಉತ್ತಮ ದೈನಂದಿನ ಚಟುವಟಿಕೆಗಳನ್ನ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕಾಗಿದೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ಮಾತನ್ನ ನಾವು ನೆನಪಿಸಿಕೊಂಡು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬೇಕಾಗಿದೆ. ಆರೋಗ್ಯವನ್ನ ಕಾಪಾಡಿಕೊಂಡರೆ ಮಾತ್ರ ನಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಎಂದು ಚೌಳೇಶ್ವರ ಸ್ಪೋಟ್ರ್ಸ್ ಕ್ಲಬ್ಬಿನ ಅಧ್ಯಕ್ಷ ಮಂಜುನಾಥರವರು ತಿಳಿಸಿದರು.
ಅವರು ತಾಲೂಕಿನ ಚೋರನೂರು ಹೋಬಳಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಚೋಳೇಶ್ವರ ಸ್ಪಟ್ರ್ಸ್ ಕ್ಲಬನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುಕ್ತ ಹೊನಲು ಬೆಳಕಿನ ಕೊಕೊ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಸೋಲೆ ಗೆಲುವಿನ ಮೆಟ್ಟಿಲು ಕ್ರೀಡಾಪಟುಗಳು ಸೋಲು ಗೆಲವನ್ನ ಸಮಾನವಾಗಿ ಸ್ವೀಕರಿಸಿಲು ಮನವಿ ಮಾಡಿದರು. 14 ತಂಡಗಳು ಕೋಕೋ ಕ್ರೀಡೆಯಲ್ಲಿ ಭಾಗವಹಿಸಿದ್ದು, ಉತ್ತಮ ಕ್ರೀಡೆಯನ್ನ ಪ್ರದರ್ಶಿಸಿ ಪ್ರೇಕ್ಷಕರನ್ನ ಕ್ರೀಡಪಟುಗಳು ರಂಜಿಸಿದರು. ಈ ಕ್ರೀಡಕೂಟದಲ್ಲಿ ದೈಹಿಕ ಶಿಕ್ಷಕರಾದ ಕೊಟ್ರೇಶ ಗುಣಮಿ, ಜಗದೀಶ ಬೇವಿನಕಟ್ಟಿ ಹನುಮಂತಪ್ಪ ಪ್ರಶಾಂತ ನೂರ್ ಅಹಮದ್ ನಿರ್ಣಾಯಕರಾಗಿ ಪಂದ್ಯಾವಳಿಯನ್ನ ಯಶಸ್ವಿಯಾಗಿ ನಡೆಸಿಕೊಟ್ಟರು.