
ಕೋಲಾರ,ಮಾ.೫- ಲಕ್ಷಾಂತರ ರೂಪಾಯಿ ಶುಲ್ಕ ಪಡೆದು ಪ್ಯಾಷನ್‌ಗಾಗಿ ಶಾಲೆಗಳನ್ನು ನಡೆಸುವ ಆಂಗ್ಲ ಮಾಧ್ಯಮದ ಶಾಲೆಗಳ ಜೊತೆಜೊತೆಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಶಿಕ್ಷಣ ಸಂಸ್ಥೆಯು ಸ್ಪರ್ಧೆ ಮಾಡಿ ಯಾವುದೇ ಶುಲ್ಕ ಸಹ ಪಡೆಯದೆ ಮುಗ್ದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ೯೮% ರಿಂದ ೧೦೦%ರಷ್ಟು ಫಲಿತಾಂಶ ಪಡೆಯುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಒ ಎಸ್.ಯುಕೇಶ್‌ಕುಮಾg ಅಭಿಪ್ರಾಯ ಪಟ್ಟರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಶಿಕ್ಷಣ ಸಂಸ್ಥೆಗಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶ್ರೀ ಸಿದ್ದಾರ್ಥ ಮತ್ತು ಗೌತಮ ಬುದ್ಧಧಾಮ ಬಾಲಕರ ವಿದ್ಯಾರ್ಥಿ ನಿಲಯಗಳ ೩೬ ನೇ ಶಾಲಾ ವಾರ್ಷಿಕೋತ್ಸವ ಸಮಾರೋಪ ಸಮಾರಂಭವನ್ನು ಉಧ್ಘಾಟಿಸಿ ಅವರು ಮಾತನಾಡಿದರು,
ಗ್ರಾಮೀಣ ಪ್ರದೇಶದ ಜನತೆ ಅತಿ ಬಡತನದಿಂದ ಬಳಲುತ್ತಿರುವ ಮಕ್ಕಳು ನೂರಕ್ಕೆ ನೂರು ಪಾಲು ಈ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಕಂಡು ಬಂದಿದ್ದು,. ಇಲ್ಲಿನ ಶಿಕ್ಷಕ ವೃಂದ ಪ್ರತಿ ಗ್ರಾಮದ ಮನೆ ಮನೆಗಳಿಗೂ ಭೇಟಿ ನೀಡಿ ಅಂತಹ ಮುಗ್ದ ಮಕ್ಕಳನ್ನು ಕರೆ ತಂದು ಕಲ್ಲು ಬಂಡೆಗಳಾಗಿದ್ದ ಆ ತುಂಡುಗಳನ್ನು ಶಿಲೆಗಳನ್ನಾಗಿ ಸೃಷ್ಠಿಸ ಬೇಕು, ಪ್ಯಾಷನ್‌ಗಾಗಿ ಶಾಲೆಗಳನ್ನು ನಡೆಸುವ ಆಂಗ್ಲ ಮಾಧ್ಯಮದ ಶಾಲೆಗಳ ಜೊತೆಜೊತೆಗೆ
ಸ್ಪರ್ಧೆ ಮಾಡಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ೯೮% ರಿಂದ ೧೦೦%ರಷ್ಟು ಫಲಿತಾಂಶವನ್ನು ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ರ್‍ಯಾಂಕ್‌ಗಳನ್ನು ಸಹ ಪಡೆಯುತ್ತಿದ್ದಾರೆ. ಈ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಧನೆಯನ್ನು ಮಾಡುತ್ತಿರುವ ಡಾ.ಎಂ.ಚಂದ್ರಶೇಖರ್ ಮತ್ತು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ ಸರ್ಕಾರಿ ಅಧಿಕಾರಿಯಾಗಿ ಅಭಿನಂದನೆ ಸಲ್ಲಿಸುತ್ತೆನೆಂದು ಪ್ರಶಂಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಯುಕೇಶ್‌ಕುಮಾರ್ ಅವರು ಕಾನೂನಿನ ಚೌಕಟ್ಟಿನೊಳಗೆ ಒಂದು ಕ್ಷಣವು ಬಿಡುವಿಲ್ಲದೆ ಜಿಲ್ಲೆಯ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವುದು ಅವರಲ್ಲಿನ ಜನಪರ ಕಾಳಜಿಗೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಬವಣೆಯಿಂದ ಬಳಲುತ್ತಿದ್ದ ಬಡ ವಿದ್ಯಾರ್ಥಿಗಳ ಮೇಲೆ ಕರುಣೆತೋರಿ ಅವರ ಸಿಇಒ ಜಿ.ಪಂ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿ ಬಾಯಾರಿಕೆಯನ್ನು ತೀರಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಕಾರ್ಯಕ್ರಮಸದಲ್ಲಿ ಪ್ರೋಬೆಷನರಿ ಐಎಎಸ್‌ಅಧಿಕಾರಿ ವಿನಾಯಕ್, ಬಿಸಿಎಂ.ಇಲಾಖೆಯ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣೆಕರ್, ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುಕನ್ಯ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ರಾಧಮ್ಮ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ಕಾರ್ಯಾಧ್ಯಕ್ಷ ವೆಂಕಟೇಶಪ್ಪ ಪಿ.ಎಂ, ಪ್ರಧಾನ ಕಾರ್ಯದರ್ಶಿ ವೆಂಕಟಪತಿ, ಉಪಾಧ್ಯಕ್ಷರಾದ ಚಲಪತಿ, ಎ.ಮುನಿರೆಡ್ಡಿ ಮತ್ತು ನಿರ್ದೇಶಕ ವೆಂಕಟೇಶಪ್ಪ ಹಾಜರಿದ್ದರು.
ಮುಖ್ಯೋಪಾಧ್ಯಾಯರಾದ ಎಸ್.ಲಕ್ಷ್ಮೀನಾರಾಯಣರೆಡ್ಡಿ ಸ್ವಾಗತಿಸಿ, ಎಂ.ಪಾಪಣ್ಣ ನಿರೂಪಿಸಿ, ವಂದಿಸಿದರು.