ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ

?????????????

ಕಿವಡೆಬೈಲ ರಸ್ತೆಯಲ್ಲಿ ಹಮ್ಮಿಕೊಂಡ ವ್ಯಯಕ್ತಿಕ ಓಟ ( ಒಬ್ಬನೇ ಓಡುವ ) ರೋಚಕತೆಯಿಂದ ಕೂಡಿತ್ತು.
ಮುಖ್ಯ ಅಥಿತಿ ಕಡಬಗಟ್ಟಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದಸಗೀರಸಾಬ ಹುಣಶಿಕಟ್ಟಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಇಂತಹ ಸ್ಪರ್ಧೆಗಳು ಅವಶ್ಯ . ಸ್ಪರ್ಧೆಗಳು ಗ್ರಾಮದ ಎಲ್ಲ ಜನರನ್ನು ಒಗ್ಗೂಡಿಸಿ ಭಾವೈಕ್ಯತೆ ಬಿಂಬಿಸಲಿ ಎಂದರು.
ಹಿರಿಯರಾದ ನಾಗೇಂದ್ರ ಕಮ್ಮಾರ ಮಾತನಾಡಿ, ಹಳ್ಳಿ ಪ್ರತಿಭೆಗಳು ಬೆಳಗಲು ಸಾಕಷ್ಟು ಸ್ಪರ್ಧೆಗಳು ನಡೆಯಬೇಕು. ಆಟೋಟಗಳಿಂದ ಮಾನಸಿಕವಾಗಿ ಸದೃಡಗಾಗಿರಲು ಸಾಧ್ಯ ಎಂದರು.
ಶಿವಾಜಿ ಶಿಂದೆ, ಮಲ್ಲನಗೌಡ ಪಾಟೀಲ, ರಾಮು ಕೋಲಕರ, ಹಸನ ಶಿಕಾರಿ, ವಿಷ್ಣು ಪಾಟೀಲ, ಸಂಜು ಕೋಲೇಕರ, ಜ್ಯೋತಿಬಾ ಕರ್ಜಗಿ, ನಾಮದೇವ ಪಾಟೀಲ, ಬಸವರಾಜ ಶಿಂಧೆ,ನಾರಾಯಣಗೌಡ ಪಾಟೀಲ, ಮಂಜುನಾಥ ಮಾದಪ್ಪನವರ, ಸದಾನಂದ ಪಾಟೀಲ, ಹರಿ ಬರಬೋಜಿ ಇದ್ದರು.
ಅಳತೆ ಮಾಪಕರಾಗಿ ಮೆರವಲಿ ದೊಡ್ಡಮನಿ, ಸಂತೋಷ ದಬಾಲಿ, ಹನಮಂತ ಕೋಲೆಕರ, ಸುರೇಶ ಶಿಂದೆ, ಹಾಗೂ ಸಿಟಿ ಸಂಚಾಲಕರಾಗಿ ಬಸವರಾಜ ಶಿಂದೆ, ರಮೇಶ ಬೆಕ್ವಾಡಕರ, ಸುಂದರೇಶ ಪಾಟೀಲ, ಸಚಿನ ಶಿಂದೆ ಕಾರ್ಯ ನಿರ್ವಹಿಸಿದರು.
ವಿಜೇತರು : ನಾಗರಾಜ ಕರಂಜಿಕರ ಸಾ: ಮಾಳವಾಡ- 1451.11 ಮೀಟರ್- (ಪ್ರಥಮ), ಪಿಶೇಲಿಂಗೇಶ್ವರ ಪ್ರಸನ್ನ ಸಾ: ಕಾಳಗಿನಕೊಪ್ಪ -1394.04 ಮೀಟರ್ -( ದ್ವಿತೀಯ) , ಮನಿಕಂಠ ಮಡಿವಾಳರ ಸಾ: ಶಿಗನಹಳ್ಳಿ- 1367.04 ಮೀಟರ್ (3 ನೇ ಸ್ಥಾನ) , ವಿನಾಯಕ ಅಗಸರ್ ಸಾ: ಮುಂಡಗೋಡ -1358 .10 ಮೀಟರ್ – (4 ನೇ ಸ್ಥಾನ), ಗ್ರಾಮದೇವಿ ಪ್ರಸನ್ನ ಸಾ: ಕಾಳಗಿಕೊಪ್ಪ -1352 .01 ಮೀಟರ್ -( 5 ನೇ ಸ್ಥಾನ) , ಹನಮಂತ ಡೇಪಿ ಸಾ; ಅರ್ಲವಾಡ- 1347 .11. ಮೀಟರ್ (6 ನೇ ಸ್ಥಾನ), ಅಜೋಬಾ ಪ್ರಸನ್ನ ಸಾ: ಮಂಗಳವಾಡ- 1343.01 ಮೀಟರ್ -( 7 ನೇ ಸ್ಥಾನ) , ಪೀಶೆಲಿಂಗ ಪ್ರಸನ್ನ ಸಾ: ಕಾಳಗಿಕೊಪ್ಪ 1339.02 ಮೀಟರ್ – (8 ನೇ ಸ್ಥಾನ), ಶ್ರೀ ಲಕ್ಷ್ಮಿ ಪ್ರಸನ್ನ ಸಾ; ಅಜಮನಹಾಳ – 1329 .08 ಮೀಟರ್- (9 ನೇ ಸ್ಥಾನ) , ಜ್ಯೋತಿಬಾ ಪ್ರಸನ್ನ ಸಾ: ಎನ್.ಎಸ್. ಕೊಪ್ಪ -1327.07 ಮೀಟರ್ – (10 ನೇ ಸ್ಥಾನ) , ಸೂರ್ಯ ನಾರಾಯಣ ಪ್ರಸನ್ನ ಸಾ: ಅರ್ಲವಾಡ- 1325.01 ಮೀಟರ್ -( 11 ನೇ ಸ್ಥಾನ) ಪಡೆದರು. ವಿಜೇತರಿಗೆ ಬಹುಮಾನ ನೀಡಲಾಯಿತು.