ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ಯುವಕರು ಸಭೆ

ರಾಯಚೂರು, ನ.೮- ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ನಗರದ ಹೊರವಲಯ ಯರಮರಸ್ ಕ್ಯಾಂಪ್ ಎಸ್.ಎಲ್ ಎನ್ ಇಂಜಿನಿಯರಿಂಗ್ ಕಾಲೇಜ್‌ನ ಆವರಣದಲ್ಲಿ ಯುವಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಧಿಕ್ಕಾರಿ ನಿಖಿಲ್ ಬಿ ಮಾತನಾಡುತ್ತಾ ದೇಶದ ಬೆನ್ನೆಲುಬಗಿ ದೇಶ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬ ಯುವಕರು ಶಿಕ್ಷಣವನ್ನು ಪಡೆಯುಬೇಕು ಎಂದ ಅವರು ಕಾನೂನು ಸುವ್ಯವಸ್ಥೆಯ ಬಗ್ಗೆ ಮತ್ತು ಸಂಚಾರದ ನಿಯಮಗಳ ಪಾಲನೆ ಬಗ್ಗೆ ಹಾಗೂ ಸೈಬರ್ ಅಪರಾಧಗಳ ಕುರಿತು ಯುವಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ದಂಡಪ್ಪ ಬಿರಾದರ ಮಾತನಾಡಿದರು. ಸ್ವಾಗತ ಭಾಷಣವನ್ನು ಎಸ್.ಎಲ್. ಕಾಲೇಜ್ ನ ಹೆಚ್.ಓ ಓಡಿ ಅಮರೇಶ ಪಾಟಿಲ್ ಮಾಡಿದರು.
ಜಿಲ್ಲಾ ಪೊಲೀಸ್ ಡಿ.ಎ.ಆರ್ ಘಟಕದಿಂದ ಆಯುಧಗಳ ಮತ್ತು ಸಂಚಾರಿ ನಾಮಫಲಕಗ ಸೈಬರ್ ಅಪರಾಧಗಳ ಹಾಗೂ ಶ್ವಾನದಳದ ಪ್ರದರ್ಶನವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರದೀಪ್, ಸಿಪಿಐ ಗಾಮೀಣ ವೃತ್ತ ವೈ ತಳಕೇರಿ, ಪಿ. ಎಸ್ ಐ ಟಿ.ಡಿ ಮಂಜುನಾಥ ನಿಸ್ಸಾರ್ ಅಹ್ಮದ್,
ರವಿರಾಜ್ ಹೆಚ್.ಸಿ, ನಾಗಪ್ಪ ಹೆಚ್.ಸಿ. ಬಲರಾಮ್ ಹೆಚ್.ಸಿ. ಶಿವುರುದ್ರಗೌಡ ಹೆಚ್.ಸಿ, ಪಾಂಡು ಸಿಪಿಸಿ, ಶಿವುಮೂರ್ತಿ ಪಿಸಿ, ನಾಗರಾಜ,
ಎಸ್.ಎಲ್ ಕಾಲೇಜನ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರು ಹಾಗೂ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಉಪಸ್ಥಿತರಿದ್ದರು.