ಗ್ರಾಮೀಣ ಡಾಕ್ ಸೇವೆಗೆ ೫ನೇ ಅರ್ಹತಾ ಪಟ್ಟಿ ಬಿಡುಗಡೆ

ನವದೆಹಲಿ,ನ.೨೮-ಭಾರತೀಯ ಅಂಚೆ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್ indiapostgdsonline.gov.in ನಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ ಐದನೇ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ಈಗಾಗಲೇ ನಾಲ್ಕು ಮೆರಿಟ್ ಪಟ್ಟಿಗಳನ್ನು ಬಿಡುಗಡೆ ಮಾಡಿದೆ.
ಇಂಡಿಯಾ ಪೋಸ್ಟ್ ೩ ನೇ ಮೆರಿಟ್ ಪಟ್ಟಿಯನ್ನು ದಿ. ೨೦ ಅಕ್ಟೋಬರ್ ೨೦೨೩ ರಂದು ಬಿಡುಗಡೆ ಮಾಡಲಾಗಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳು ಇನ್ನೂ ಮೂರು ಮತ್ತು ನಾಲ್ಕನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಮೊದಲ ಮೂರು ಮೆರಿಟ್ ಪಟ್ಟಿಗೆ ಬರಲು ಸಾಧ್ಯವಾಗದ ಅಭ್ಯರ್ಥಿಗಳು ೫ ನೇ ಭಾರತ ಪೋಸ್ಟ್ ಉಆS ಮೆರಿಟ್ ಪಟ್ಟಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮೆರಿಟ್ ಪಟ್ಟಿಯು ಡಾಕ್ಯುಮೆಂಟ್ ಪರಿಶೀಲನೆ ಸುತ್ತಿಗೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರನ್ನು ಒಳಗೊಂಡಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮೆರಿಟ್ ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯನ್ನು ಪರಿಶೀಲಿಸಬಹುದು. ನಿಗದಿತ ದಿನಾಂಕ ಮತ್ತು ಸಮಯದ ಪರಿಶೀಲನೆಗಾಗಿ ಅವರು ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಇಂಡಿಯಾ ಪೋಸ್ಟ್ ವೆಬ್‌ಸೈಟ್‌ನಲ್ಲಿ ಕಾಣಬಹುದು.