ಗ್ರಾಮೀಣ ಜಾನಪದ ಕಲೆ ಹಾಗೂ ಸಂಸ್ಕøತಿ ವಿಶ್ವಕ್ಕೆ ಮಾದರಿ: ಸೇಡಂ

ಚಿಟಗುಪ್ಪ:ಜು.16: ‘ದೇಶದ ಗ್ರಾಮೀಣ ಸಂಸ್ಕೃತಿ, ಆಚಾರ, ಜಾನಪದ ಕಲೆಗಳು ವಿಶ್ವಕ್ಕೆ ಮಾದರಿ’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ಇಲ್ಲಿಯ ನಾಂದೇಡಿ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು, ನಾಟಕ, ಬಯಲಾಟ, ದೊಡ್ಡಾಟ, ಯಕ್ಷಗಾನ ಪ್ರದರ್ಶನ ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆ ಸಂಗತಿ’ ಎಂದರು.

ಜಾನಪದ ಪರಿಷತ್ತ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರದ ಮುಖ್ಯ ಆಡಳಿತಾಧಿಕಾರಿ ದೀಪಕ್ ಪಾಟೀಲ ಮಾತನಾಡಿದರು.

ಪರಿಷತ್ತಿನ ಜಿಲ್ಲಾ ಸಂಚಾಲಕ ಡಾ.ರಾಜಕುಮಾರ ಹೆಬ್ಬಾಳೆ, ಜಿಲ್ಲಾ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಸಂಗಯ್ಯ ಕಲ್ಮಠ, ಶಿವಶಂಕರ ತರನ್ನಳ್ಳಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪಾ ಜಮಾದರ, ಬಿಜೆಪಿಯ ಮುಖಂಡ ಸೂರ್ಯಕಾಂತ ಮಠಪತಿ, ಜೆಡಿಎಸ್ ಮುಖಂಡ ಶಿವರಾಜ ಹುಲಿ, ಕಜಾಪ ಬೀದರ್ ಘಟಕದ ಅಧ್ಯಕ್ಷ ಎಸ್.ಬಿ ಕೊಚಬಾಳ, ಹುಮನಾಬಾದ್ ಘಟಕದ ಅಧ್ಯಕ್ಷ ಶರದಕುಮಾರ್ ನಾರಾಯಣಪೇಟಕರ್, ಹಾಸ್ಯ ಕಲಾವಿದ ನವಲಿಂಗ ಪಾಟೀಲ, ಜಿಲ್ಲಾ ಪ್ರಧಾನಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಪದಾಧಿಕಾರಿಗಳಾದ ಡಾ.ದಯಾನಂದ ಕಾರಬಾರಿ, ದಯಾನಂದ ಕಾಂಬ್ಳೆ, ವಿಜಯಕುಮಾರ್ ಚಿಟಗುಪ್ಪಾಕರ್, ಸವಿತಾ ಪಾಟೀಲ ಇದ್ದರು.

ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಸ್ವಾಗತಿಸಿದರು.