ಗ್ರಾಮೀಣ ಜನ ಮತ್ತು ರೈತ ಸ್ನೇಹಿಯಾಗಿ ನಮ್ಮವಿಶ್ವವಿದ್ಯಾಲಯ ಕೆಲಸ ಮಾಡುತ್ತಿದೆ:ಪ್ರೊ.ಕೆ.ಸಿ.ವೀರಣ್ಣ

ಬೀದರ, ಜು.13: ರಾಜ್ಯಾದ್ಯಂತ ಪಶುವೈದ್ಯಕೀಯ, ಪಶು, ಹೈನು ಮತ್ತು ಮೀನುಗಾರಿಕೆ ವಿಜ್ಞಾನಗಳ ಕ್ಷೇತ್ರಗಳಲ್ಲಿ ಶಿಕ್ಷಣ-ಕಲಿಕೆ, ಸಂಶೋಧನೆ, ವಿಸ್ತರಣೆ ಹಾಗೂ ಗ್ರಾಮೀಣ ಆಧಾರಿತ ತಂತ್ರಜ್ಞಾನಗಳನ್ನು ವರ್ಗಾಯಿಸುವ ಧ್ಯೇಯದೊಂದಿಗೆ ಗ್ರಾಮೀಣ ಜನ ಮತ್ತು ರೈತ ಸ್ನೇಹಿಯಾಗಿ ನಮ್ಮ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದೆ ಎಂದು ಬೀದರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.

ಅವರು ಬುಧವಾರ ಬೀದರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಕಚೇರಿ ಸಭಾಂಗಣದಲ್ಲಿ ಕಳೆದ ಒಂದು ವರ್ಷದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಮುಖ ಪ್ರಗತಿ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಐದು ಪಶುವೈದ್ಯಕೀಯ ಮಹಾವಿದ್ಯಾಲಯಗಳು ಭಾರತೀಯ ಪಶುವೈದ್ಯಕೀಯ ಪರಿಷತ್ ನವದೆಹಲಿಯಿಂದ ಮಾನ್ಯತೆಯನ್ನು ಪಡೆದಿವೆ. ಹೊಸದಾಗಿ ಪ್ರಾರಂಭಿಸಿದ ಪಶುವೈದ್ಯಕೀಯ ಮಹಾವಿದ್ಯಾಲಯ ಗದಗನ್ನು ಸಹ ಭಾರತ ಸರ್ಕಾರವು ಮೇ 2023 ರಿಂದ ಶೆಡ್ಯೂಲ್ 1 ರಲ್ಲಿ ಪಟ್ಟಿ ಮಾಡಿದೆ ಹಾಗೂ ಅಥಣಿಯಲ್ಲಿ ಹೊಸದಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದು, 2022-23ನೇ ಸಾಲಿನಲ್ಲಿ 45 ಸಂಶೋಧನೆಗಳನ್ನು ಪೂರ್ಣಗೊಳಿಸಲಾಗಿದ್ದು, 72 ಸಂಶೋಧನಾ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಸತತ ಪ್ರಯತ್ನಗಳ ಹೊರತಾಗಿಯೂ ದೇವಣಿ ಹಸು ತಳಿಯ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ನಮ್ಮ ವಿಜ್ಞಾನಿಗಳು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ ಉತ್ಕøಷ್ಟ ದೇವಣಿ ಜಾನುವಾರುಗಳನ್ನು ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದ್ದಾರೆ ಎಂದರು.

ಲ್ಯಾಟರಲ್ ಫ್ಲೋ ಅಸ್ಸೆ ಮತ್ತು ಡೈರೆಕ್ಟ್ ಫ್ಲೋರೊಸೆಂಟ್ ಅಂಟಿಬಾಡಿ ಟೆಸ್ಟ್ ಮೂಲಕ ರೇಬೀಸ್ ರೋಗನಿರ್ಣಯಕ್ಕಾಗಿ ರೇಬೀಸ್ ರೋಗನಿರ್ಣಯ ಪ್ರಯೋಗಾಲಯವು ದೇಶದಲ್ಲಿ ಏಕೈಕ ಮಾನ್ಯತೆ ಪಡೆದ “ಔIಇ ಉಲ್ಲೇಖ ಪ್ರಯೋಗಾಲಯ” ಆಗಿದೆ. ರಾಪಿಡ್ ಪ್ಲೋರೊಸೆಂಟ್ ಫೋಕಸ್ಡ್ ಇನ್ಹಿಬಿಷನ್ ಟೆಸ್ಟ್ (ಆರ್‍ಎಫ್‍ಎಫ್‍ಐಟಿ) ಮೂಲಕ ಸಾಕು ಪ್ರಾಣಿಗಳನ್ನು ರೇಬೀಸ್‍ನಿಂದ ರಕ್ಷಿಸಬಹುದು ಎಂದು ಪ್ರಮಾಣೀಕರಿಸಲು ಇಡೀ ದೇಶದ ಏಕೈಕ ಪ್ರಮಾಣೀಕರಿಸುವ ಪ್ರಾಧಿಕಾರವಾಗಿದ್ದು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೆಂಗಳೂರು (Iಂಊ & ಗಿಃ) ವಿವಿಧ ರೀತಿಯ ಸ್ವತಂತ್ರ ಯೋಜನೆಗಳು ಹಾಗೂ ವಿವಿಧ ಸಂಸ್ಥೆಗಳೊಂದಿಗೆ ಸಂಕೀರ್ಣ (ನೆಟವರ್ಕ್) ವ್ಯವಸ್ಥೆಯಲ್ಲಿ ಯೋಜನೆಗಳನ್ನು ಪಡೆಯುತ್ತಿದೆ. ಒಂದು ಆರೋಗ್ಯ ಪರಿಕಲ್ಪನೆಯ ಅಡಿಯಲ್ಲಿ ಕ್ಷಯ ರೋಗ, ಅಂಥ್ರಾಕ್ಸ್, ರೇಬೀಸ್ ಮತ್ತು ಬ್ರೂಸೆಲ್ಲೋಸಿಸ್ ನಂತಹ ಪ್ರಮುಖ ಪ್ರಾಣಿಜನ್ಯ ರೋಗಗಳ ವಿರುದ್ಧ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಡೈರಿ ಉತ್ಪನ್ನಗಳ ತಯಾರಿಕೆಗಾಗಿ ನಾವು ಬೆಂಗಳೂರು ಮತ್ತು ಕಲಬುರಗಿಯ ಮಹಾಗಾಂವದಲ್ಲಿ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಟಾರ್ಟ್ ಅಪ ಇಂಕುಬೇಷನ್ ಸೆಂಟರನ್ನು ಪ್ರಾರಂಭಿಸುವ ಗುರಿ ಇದೆ ಹಾಗೂ ಓರೆಗಾನ್ ಸ್ಟೇಟ್ ವಿಶ್ವವಿದ್ಯಾಲಯ ಅಮೇರಿಕಾದೊಂದಿಗೆ ಒಡಬಂಡಿಕೆ ಮಾಡಿಕೊಂಡಿದ್ದು, ಅಲ್ಲಿರುವ ಆರು ವಿದ್ಯಾರ್ಥಿಗಳು ಇಂಟರ್ನಶಿಪ್ (ಕಲಿಕಾ ತರಬೇತಿ) ಗೋಸ್ಟರ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಆಗಮಿಸಿದ್ದು, ನಮ್ಮ ವಿದ್ಯಾರ್ಥಿಗಳು ಕೂಡ ಆ ವಿಶ್ವವಿದ್ಯಾಲಯಕ್ಕೆ ಕಲಿಕೆಗಾಗಿ ತೆರಳಲಿದ್ದಾರೆ. ಬೇರೆ ಇಲಾಖೆ ಹಾಗೂ ಸಂಸ್ಥೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗಲು ನಮ್ಮ ವಿಶ್ವವಿದ್ಯಾಲಯವು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ ಹಾಗೂ ಸಂಸ್ಥೆಗಳೊಂದಿಗೆ ಕಾರ್ಯಾಗಾರವನ್ನು ಆಯೋಜಿಸುತ್ತಿದೆ ಎಂದು ಹೇಳಿದರು.

ಎನ್‍ಐಆರ್‍ಏಫ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ 162 ವಿಶ್ವವಿದ್ಯಾಲಯಗಳ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ವಿಶ್ವವಿದ್ಯಾಲಯವು 37ನೇ ಶ್ರೇಣಿಯನ್ನು ಪಡೆದುಕೊಂಡಿದ್ದು, 50 ರಿಂದ 37ನೇ ರ್ಯಾಂಕ್‍ಗೆ ತನ್ನ ಸ್ಥಾನವನ್ನು ಸುಧಾರಿಸಿದೆ. ರೈತ ಸಮುದಾಯಕ್ಕೆ ಹಾಗೂ ಅಧಿಕಾರಿಗಳಿಗೆ ಸಹಕಾರಿಯಾಗಲೆಂದು 2022-23ನೇ ಸಾಲಿನಲ್ಲಿ 95 ಆಕಾಶವಾಣಿ ಹಾಗೂ 19 ದೂರದರ್ಶನ ಕಾರ್ಯಕ್ರಮಗಳನ್ನು ನೀಡಲಾಗಿದೆ. ಒಟ್ಟು 106 ಪಶು ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ 11670 ಪಶುಗಳಿಗೆ ಚಿಕಿತ್ಸೆ ನೀಡಿದೆ ಹಾಗೂ ಒಟ್ಟು 210 ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 1,17,155 ರೈತರಿಗೆ ಸೇವೆ ಹಾಗೂ 1,87,405 ರೋಗ ತಪಾಸಣೆ ಸೇವೆ ಒದಗಿಸಲಾಯಿತು ಮತ್ತು 12,944 ಸಲಹಾ ಸೇವೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ನಮ್ಮ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ತರಬೇತಿ, ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ಕೋರ್ಸುಗಳು ಪ್ರಾರಂಭಿಸುವ ಗುರಿ ಹೊಂದಲಾಗಿರುತ್ತದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯ ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪ್ರಗತಿಯನ್ನು ಸಾಧಿಸುವ ಮೂಲಕ ರೈತರ ಸಾಮಾಜಿಕ ಹಾಗೂ ಆರ್ಥಿಕ ಮಟ್ಟವನ್ನು ಸುಧಾರಿಸಲು ಸರ್ವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಶು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎನ್.ಎ.ಪಾಟೀಲ, ಪಶು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ, ಸ್ನಾತಕೋತ್ತರ ಶಿಕ್ಷಣ ಕೇಂದ್ರ ನಿರ್ದೇಶಕ ಡಾ.ದೀಪಕ ಕುಮಾರ, ಪಶು ವಿಶ್ವವಿದ್ಯಾಲಯದ ಡೀನ್ ಡಾ.ಅಶೋಕ ಪವಾರ ಸೇರಿದಂತೆ ಪಶು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.