ಗ್ರಾಮೀಣ ಜನರ ಸ್ಪಂದನೆಗೆಜಿಲ್ಲಾಧಿಕಾರಿ ಹಳ್ಳಿ  ಕಡೆ ಕಾರ್ಯಕ್ರಮ ಸಹಾಯಕ


ಸಂಜೆವಾಣಿ ವಾರ್ತೆ
ಕುಕನೂರು, ಜ.22: ಮೂಲಭೂತ ಸೌಕರ್ಯವನ್ನು ಗ್ರಾಮೀಣ ಮಟ್ಟದಲ್ಲಿ ಸಮರ್ಪಕ  ನೀಡುವದಕ್ಕಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸಾಮಾನ್ಯ ಜನರಿಗೆ ಸಹಾಯಕ ವಾಗಿದೆ  ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಗೊರ್ಲೆಕೊಪ್ಪ ಗ್ರಾಮ ದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಮೂಲಭೂತ ಸೌಕರ್ಯ ಗಳನ್ನು ಮನೆ ಮನೆಗೆ ಮುಟ್ಟಿಸುವ ದಕ್ಕಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ ಇದರ ಸದ ಪಯೋಗ ಪಡೆದುಕೊಳ್ಳಲು ಮುಂದಾಗಬೇಕು ,ಗ್ರಾಮೀಣ ಯುವ ಜನತೆ ಯು ಮುಂದೆ ಬರಲು ಸಾಕಷ್ಟು ಯೋಜನೆಗಳು ಇವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಮುರಳೀಧರ ರಾವ್ ಕುಲಕರ್ಣಿ,  ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭುರಾಜ ಹಳ್ಳಿ, ಗ್ರಾಮದ ಏರಿಯಾ ಚೆನ್ನಪ್ಪ ಗೌಡ ಮಾಲಿಪಾಟೀಲ್ಕ, ಕರಿಬಸಯ್ಯ ಬಿನ್ನಾಳ,  ರವಿ ಲಮಾಣಿ,  ಗವಿ ಸಿದ್ದನಗೌಡ ಮುದ್ದಾಬಲ್ಲಿ, ದೇವರಾಜ್ ಮನ್ನಪುರ್, ಮಹೇಶ್ ಹಿರೇಮನಿ ಮುಂತಾದವರು ಹಾಜರಿದ್ದರು. ಇಟಗಿ ಗ್ರಾಮ ಪಂಚಾಯಿತಿ ಪಿಡಿಒ ಶರಣಪ್ಪ ಕೆಳಗಿನಮನಿ ಸ್ವಾಗತಿಸಿದರು ಸೇರಿದಂತೆ ಕಂದಾಯ ಇಲಾಖೆಯ ಶರಣಬಸಪ್ಪ ನಿರೂಪಿಸಿದರು.