ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಿದ ದಿವ್ಯ ಚೇತನ : ಯಶವಂತರಾಯಗೌಡ

ಇಂಡಿ:ಮೇ.16:ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತ ಅವರ ಬಾಳನ್ನು ಬೆಳಗಿಸಿ ಶಿಕ್ಷಣ ಕ್ರಾಂತಿ ಮಾಡಿದ ಸುಭಾಸ ಎಸ್. ಕಲ್ಲೂರ ಅವರು ಬಡವರು, ನಿರ್ಗತಿಕರು, ಅಲ್ಪಸಂಖ್ಯಾತರ ಮತ್ತು ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಿದ ದಿವ್ಯ ಚೇತನ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಗ್ರಾಮದಲ್ಲಿ ಬುಧವಾರ ನಡೆದ ವೃಷಭಲಿಂಗೇಶ್ವರ ವಿದ್ಯಾ ವರ್ಧಕ ಸಂಘದ ನಿದೇರ್ಶಕ ಸುಭಾಸ ಎಸ್. ಕಲ್ಲೂರ 3ನೇ ಪುಣ್ಯಸ್ಮರಣೆ ಮತ್ತು ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿ 1986 ರಲ್ಲಿ ವೃಷಭಲಿಂಗೇಶ್ವರ ವಿದ್ಯಾ ವರ್ಧಕ ಸಂಘದ ನಿದೇರ್ಶಕರಾಗಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅವರ ಶಿಕ್ಷಣ ಪ್ರೇಮ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಮಾದರಿಯಾಗಿದೆ. ಇಂತಾಹ ಮಹಾನ್ ವ್ಯಕ್ತಿಗಳ ಜೀವನಾದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ ಸುಭಾಸ ಎಸ್. ಕಲ್ಲೂರ ಅವರು ಜನರ ಕಣ್ಣಿನಿಂದ ಮರೆಯಾದರೂ, ಅವರು ಮಾಡಿರುವ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ, ಕೇವಲ ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲ, ರಾಜಕೀಯದಲ್ಲೂ ಕ್ರಾಂತಿ ಮಾಡಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ಸತತ ಪರಿಶ್ರಮದಿಂದ ಸಾಧನೆಗೈದು ಗ್ರಾಮೀಣ ಕ್ಷೇತ್ರದಲ್ಲಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು ಎಂದು ಬಣ್ಣಿಸಿದರು.
ಶಿರಶ್ಯಾಡ ಅಭಿನವ ಮುರುಘೇಂದ್ರ ಶ್ರೀಗಳು, ಹಿರೇರೂಗಿ ಮಾತೋಶ್ರೀ ಸುಗಲಾದೇವಿ ಅಮ್ಮನವರು, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ದೇವಾನಂದ ಚವ್ಹಾಣ, ಮಲ್ಲಿಕಾಜುನ ಲೋಣಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಜೆ.ಎಸ್.ಹತ್ತಳ್ಳಿ ಮಾತನಾಡಿದರು.
ಬಂಥನಾಳ ವೃಷಭಲಿಂಗೇಶ್ವರ ಶ್ರೀಗಳು, ವೀರಗೋಟ ಅಡವಿಲಿಂಗ ಮಹಾರಾಜರು, ಗೊಳಸಾರ ಅಭಿನವ ಪುಂಡಲಿಂಗ ಶ್ರೀಗಳು, ತಡವಲಾಗ ರಾಚೋಡೆಶ್ವರ ಶ್ರೀಗಳು, ಶಕುಂತಲಾ ಎಸ್ ಕಲ್ಲೂರ, ಅಪ್ಪಣ್ಣ ಎಸ್ ಕಲ್ಲೂರ, ಶೃತಿ ಅಪ್ಪಣ್ಣ ಕಲ್ಲೂರ, ಪ್ರಕಾಶ ಎಸ್ ಕಲ್ಲೂರ, ಜ್ಯೋತಿ ಶರಣು ಮ್ಯಾಳಗಿ, ಸೌಮ್ಯಾ ಸಿದರಾಯ ಡೊಳಿ, ಶಿಲ್ಪಾ ಸಿದ್ದನಗೌಡ ಶಿರಕನಹಳ್ಳಿ ಅಣ್ಣಾರಾಯಗೌಡ ಎಸ್. ಬಿರಾದಾರ ವಿಜಯಕುಮಾರ ಎಸ್ ಕಾಬಾ ಮತ್ತಿತರಿದ್ದರು.