ಗ್ರಾಮೀಣ ಜನರ; ಅಂಗವಿಕಲರಿಗೆ ಕೈಹಿಡಿದ ನರೇಗಾ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.04: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರ ಗುಳೆ ತಡೆಗೆ ಸಿರುಗುಪ್ಪ ತಾಲ್ಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿತ್ಯ ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ರಾಜ್ಯದಲ್ಲಿ ಪ್ರಸ್ತುತ ನರೇಗಾ ಯೋಜನೆಯಡಿ 462182214 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 5219583 ಕೂಲಿಕಾರರಿಗೆ ಕೆಲಸ ನೀಡಿ ಪ್ರಥಮ ಸ್ಥಾನದಲ್ಲಿದೆ. ಕೊಪ್ಪಳ 4943779 (ದ್ವಿತೀಯ ಸ್ಥಾನ), ರಾಯಚೂರ 4814865 (ತೃತೀಯ ಸ್ಥಾನ), ಬಳ್ಳಾರಿ 4340627 (ನಾಲ್ಕನೇ ಸ್ಥಾನ), ಉಳಿದ ಜಿಲ್ಲೆಯವರು ನಂತರದ ಸ್ಥಾನದಲ್ಲಿದ್ದಾರೆ.
2023-24ನೇ ಸಾಲಿನಲ್ಲಿ ತಾಲ್ಲೂಕಿನ 27 ಗ್ರಾ.ಪಂ ವ್ಯಾಪ್ತಿಯಲ್ಲಿ 43862 ಕಟುಂಬಗಳು ಮತ್ತು 119015 ಸದಸ್ಯರು ನೊಂದಣಿಯಾಗಿದ್ದು, 1222109 ಮಾನವ ದಿನಗಳಗುರಿಯನ್ನು ಸರ್ಕಾರ ನೀಡಿದ್ದು, 14858 ಸೃಜಿಸಿದ ಮಾನವ ದಿನಗಳಲ್ಲಿ 1226219 ರಷ್ಟು ಸಾಧಿಸಿದ್ದು, ಶೇ.100.34 ಗುರಿ ಸಾಧನೆಯಾಗಿದೆ.
ಕಾಮಗಾರಿಗಳು : ಕೆರೆಗಳ ಅಭಿವೃದ್ದಿ, ಕೊಳವೆಬಾವಿ ಮರುಪೂರ್ಣ ಘಟಕ, ಮಳೆ ನೀರು ಕೊಯ್ಲು, ನಾಲಾ ಹೂಳೆತ್ತುವುದು, ಬಹುಕಮಾನು ಚೆಕ್ಡ್ಯಾಂ, ಬೋಲ್ಡರ್ ಚೆಕ್ಸ್ ಬದು ನಿರ್ಮಾಣ ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ.
ಗುಳೆ ತಡೆಯುವಲ್ಲಿ ಯಶಸ್ವಿ : ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಊರಲ್ಲಿ ಕೆಲಸವಿಲ್ಲದ ಕಾರಣದಿಂದಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಕೂಲಿಕಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು. ಜೊತೆಗೆ 2023ರ ಏಪ್ರಿಲ್ 1ರಿಂದ ನರೇಗಾ ಕೂಲಿ ಮೊತ್ತವು 316ರೂ.ಗೆ ಹೆಚ್ಚಳದ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು 27 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಶೇ.30 ರಿಯಾಯತಿ ಸೌಲಭ್ಯವನ್ನು ಹಾಗೂ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಬಿಟ್ಟು ನರೇಗಾದಡಿ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ಜಿಲ್ಲೆಯಲ್ಲಿಯೇ ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಅನುಕೂಲವಾಗಿದೆ. ಇದರಿಂದ ಜನರ ಗುಳೆಯೂ ತಪ್ಪಿದೆ. 52.06% ಹೆಣ್ಣುಮಕ್ಕಳು ಭಾವಹಿಸುವಿಕೆಯಾಗಿದೆ, 1574 ನೊಂದಣಿಯಾದ ವಿಶೇಷಚೇತನರಲ್ಲಿ 1019 ಮಾನವ ದಿನಗಳ ಸೃಜಿಸಿದ್ದು, ಶೇ.64.74 ಪಾಲ್ಗೊಳುವಿಕೆಯಾಗಿದೆ, 11720 ಆರೋಗ್ಯ ಶಿಬಿರದಲ್ಲಿ ತಪಾಸಣೆ ನಡೆಸಲಾಗಿದೆ, ನರೇಗಾ ಕಾಮಗಾರಿಯ ಸ್ಥಳದಲ್ಲಿ ಕೂಲಿಕಾರರಿಗೆ ಹಲವಾರು ಕಾರ್ಯಕ್ರಮದ ಮೂಲಕ ತಿಳಿಸಿದರು.
ಮಡಗಿನ ಬಸಪ್ಪ.ಇ.ಒ ತಾ.ಪಂ.ಸಿರುಗುಪ್ಪ