ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.29: ಅಂದುಕೊಂಡಷ್ಟು ಮೆಜಾರಿಟಿ ಬಂದಿಲ್ಲ. ಆದರೇ ಗ್ರಾಮೀಣ ಭಾಗದ ಜನರಿಂದಲೇ ನನ್ನ ಗೆಲುವು ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಓಟು ಹಾಕಿದ್ದಾರೆ. ಜನರಿಗೆ ಕೊಟ್ಟ ಭರವಸೆ ಖಂಡಿತವಾಗಿ ಈಡೇರಿಸುತ್ತೆನೆ ಎಂದು ನೂತನ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಾಲಯದಲ್ಲಿ ಅಭಿನಂದನೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಾಸಕರ ಕಛೇರಿ ತೆರೆದು ಅವರ ವ್ಯಾಪ್ತಿಯ ಮುಖಂಡರ ನೇತೃತ್ವದಲ್ಲಿ ಯುವಕರಿಗೆ ಕೆಲಸ ಕೊಟ್ಟು ಅವರಿಂದ ಗ್ರಾಮದ ಸಮಸ್ಯೆಯನ್ನು ಪಡೆದು ಪರಿಹರಿಸಲು ಪ್ರಯತ್ನಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತೆನೆ. ಒಣ ಬೇಸಾಯಿ ಮಾಡುವ ಪ್ರದೇಶದಲ್ಲಿ ನೀರಾವರಿ ಭರವಸೆ ನೀಡಿದ್ದೇನೆ ಅದನ್ನು ಈಡೇರಿಸುತ್ತೇನೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ, ಚರಂಡಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಹಳ್ಳಿಯಲ್ಲಿ ನಿಮ್ಮೊಂದಿಗೆ ನಾನು ಎಂಬ ಕಾರ್ಯಕ್ರಮ ಅಯೋಜನೆ ಮಾಡಿ, ಅಧಿಕಾರಿಗಳು ಸ್ಥಳದಲ್ಲಿ ಬರಮಾಡಿಕೊಂಡು ತಮ್ಮ ಸಮಸ್ಯೆ ಪರಿಹರಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಗರದಲ್ಲಿರುವ ಸ್ಲಂ ಜನರ ಅಭಿವೃದ್ಧಿ ಗಾಗಿ ನನಗೆ ಓಟು ಹಾಕದವರಿಗೂ ಕೂಡ ಸೌಲಭ್ಯ ಒದಗಿಸುತ್ತೆನೆ. ನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ನಗರ ಗ್ರಾಮೀಣ ಜನರಿಗೆ ಮನೆ, ಜಾಗ ಒದಗಿಸುವ ಕೆಲಸ ಮಾಡುತ್ತೆನೆ. ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಹಾಗೂ ಅಯ್ಯೋಧ್ಯ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೆನೆ. ಮಹಿಳೆಯರಿಗೆ ಗಾರ್ಮೆಂಟ್ ಫ್ಯಾಕ್ಟರಿಯನ್ಜು ಐದಾರು ತಿಂಗಳಲ್ಲಿ ಆರಂಭ ಮಾಡಿ ಟ್ರೈನಿಂಗ್ ಸೆಂಟರ್ ತೆರೆಯುತ್ತೆನೆ. ಹಂಪಿ ಉತ್ಸವದಂತೆ ಆನೇಗೊಂದಿ ಉತ್ಸವ ವನ್ನು ಅದ್ದೂರಿಯಾಗಿ ಮಾಡುತ್ತೇನೆ. ನೀರುದ್ಯೋಗಿಗಳಿಗೆ ಶೀಘ್ರವಾಗಿ ವಿವಿಧ ಕಂಪನಿಯಲ್ಲಿ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ರಾಜ್ಯ ಯುವ ಘಟಕದ ಅಧ್ಯಕ್ಷ ಭೀಮಾಶಂಕರ, ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ನಗರ ಘಟಕ ಅಧ್ಯಕ್ಷ ವೀರೇಶ ಬಲ್ಕುಂದಿ, ಗ್ರಾಮೀಣ ಘಟಕ ಅಧ್ಯಕ್ಷ ದುರುಗಪ್ಪ ಆಗೋಲಿ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಸುರೇಶ, ಮುಖಂಡರಾದ ರಾಜೇಶ ಅಂಗಡಿ, ನಗರಸಭೆ ಸದಸ್ಯ ಉಸ್ಮಾನ್ ಬಿಚ್ಚಿಗತ್ತಿ, ಸೇರಿದಂತೆ ಅನೇಕರು ಇದ್ದರು.