ಗ್ರಾಮೀಣ ಜನತೆ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಒತ್ತು

ರಾಯಚೂರು,ನ.೨೨- ಸದಾ ಕೆಲಸ- ಕಾರ್ಯದಲ್ಲಿ ನಿರತರಾಗಿರುವ ಗ್ರಾಮೀಣ ಭಾಗದ ಜನತೆ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಗಾಣದಾಳ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎಂ. ಸುಧೀಂದ್ರ ಹೇಳಿದರು.
ಅವರು ಗಾಣದಾಳ್ ಕೆಜಿಬಿ ಶಾಖೆಯು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಹಯೋಗದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಯದ ಉಳಿತಾಯ, ಆರ್ಥಿಕ ವೆಚ್ಚ, ತಗ್ಗಿಸಲು ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಜಿ.ಬಿ ಬ್ಯಾಂಕಿನ ಅಧಿಕಾರಿಗಳಾದ ಮಂಜುನಾಥ್, ಕೆ.ಅಜಯ, ರವಿಶಂಕರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಿಲ್ಲೆಸೂಗುರು ಬ್ಯಾಂಕಿನ ವ್ಯವಸ್ಥಾಪಕ ಕುಬೇರ್, ಗ್ರಾಮದ ಮುಖಂಡರಾದ ದೂಳಯ್ಯ ನಾಯಕ, ಯು.ರಾಮಕೃಷ್ಣ, ಪಿ.ನಾರಾಯಣ, ಕರಿಯಪ್ಪ ನಾಯಕ್ , ಪಿ.ಧೂಳಯ್ಯ ಮುಂತಾದವರು ಉಪಸ್ಥಿತರಿದ್ದರು.