ಗ್ರಾಮೀಣ ಕ್ಷೇತ್ರ ಸಂಪೂರ್ಣ ನೀರಾವರಿ ನನ್ನ ಗುರಿ – ದದ್ದಲ್

ರಾಯಚೂರು, ಮೇ.೦೫- ಗ್ರಾಮೀಣ ಕ್ಷೇತ್ರ ಮಳೆಯಾಶ್ರಿತ ಪ್ರದೇಶವಾಗಿದ್ದು, ಈ ಭಾಗವನ್ನು ಸಂಪೂರ್ಣವಾಗಿ ನೀರಾವರಿ ಯೋಜನೆ
ಮಾಡುವುದೇ ನನ್ನ ಗುರಿಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಹೇಳಿದರು.
ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ದಿನದಿಂದಲೂ ನನ್ನ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಕೂಡ ಕೆಲಸ ಮಾಡಿದ್ದೇನೆ, ನಾನು ನಿಮ್ಮ ಸೇವಕನಾಗಿ ದುಡ್ಡಿಯುತ್ತಿದ್ದೇನೆ, ಮತ್ತೊಮ್ಮೆ ನನಗೆ ಮತ ನೀಡಿ, ಈ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಯೋಜನೆ ಜಾರಿಗೆ ಶ್ರಮಿಸುತ್ತೇನೆ.
ಐದು ವರ್ಷಕ್ಕೊಮ್ಮೆ ಬರುವ ವ್ಯಕ್ತಿಯಲ್ಲ ನಿರಂತರವಾಗಿ ನಿಮ್ಮೊಂದಿಗೆ ಇದ್ದು ಕ್ಷೇತ್ರದ ಪ್ರತಿಯೊಂದು ಅಗತ್ಯ ಸೌಲಭ್ಯಗಳನ್ನು ಗ್ರಾಮಕ್ಕೆ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಅಧಿವೇಶನದಲ್ಲಿ ಕ್ಷೇತ್ರದ ಜನರ ಧ್ವನಿಯಾಗಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಮುಂದೆ ಇಟ್ಟು ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಳೆದ ೫ ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ,
ಇಂದು ಅರಳಿಬೆಂಚಿ,ಆಶಾಪೂರು,ಜಾಲಿಬೆಂಚಿ, ಉಡಮಗಲ್ ಖಾನಾಪುರ, ಕಮಲಾಪುರ,ಅನ್ವರಾ,ಗೋನವಾರ,ಮಂಜರ್ಲಾ,ತುಂಟಾಪೂರು ಗ್ರಾಮಗಳಲ್ಲಿ
ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿರುಸಿನ ಪ್ರಚಾರ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಕೈ ಗೊಂಡು ಗ್ರಾಮೀಣ ಕ್ಷೇತ್ರದ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಜನರ ಸ್ವಯಂಪ್ರೇರಿತ ರಾಗಿ ವಿವಿಧ ಪಕ್ಷಗಳನ್ನು ತೊರೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುವುದರ ಮೂಲಕ ರಾಯಚೂರು ಗ್ರಾಮೀಣ ಮತ್ತೊಮ್ಮೆ ನನಗೆ ಆರ್ಶಿವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ.
ಈ ಭಾಗದ ನನ್ನ ರೈತ ಬಾಂಧವರು ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಏನ್ನುವ ಉದ್ದೇಶದಿಂದ ನಿರಂತರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದರ ಪರಿಣಾಮವಾಗಿ
ಇಂದು ಕೃಷ್ಣ ನದಿಯಿಂದ ಪೈಪ್ ಲೈನ್ ಮೂಲಕ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದೇನೆ, ಈ ಭಾಗದ ನೀರಾವರಿ ಯೋಜನೆ ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇನೆ.
ನನ್ನ ರೈತರ ಆದಾಯವನ್ನು ದ್ವಿಗುಣ ಗೊಳ್ಳಿಸಬೇಕು ಎಂದು ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದೇನೆ,
ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ನನ್ನ ೫ ವರ್ಷಗಳ ಆಡಳಿತದ ಅವಧಿಯಲ್ಲಿ ನನ್ನ ರೈತರಿಗೆ ನೀರಿನ ಆಭಾವವಾಗದಂತೆ ನಿರಂತರವಾಗಿ, ಪ್ರತಿ ಐಸಿಸಿಯ ಸಭೆಯಲ್ಲಿ ನನ್ನ ಕ್ಷೇತ್ರದ ಕೆಳಭಾಗದ ರೈತರಿಗೆ ನೀರು ಹಂಚಿಕೆ ಯಾಗುವವರೆಗೂ ನೀರು ನಿಲ್ಲಿಸಬಾರದು ಎಂದು ಧ್ವನಿ ಎತ್ತಿದರ ಪರಿಣಾಮ ಇಂದು ಸಕಾಲಕ್ಕೆ ನೀರು ಪೂರೈಯಾಗುವಂತೆ ಮಾಡಿದ್ದೇನೆ, ಸ್ವಲ್ಪ ಹೆಚ್ಚು ಕಡಿಮೆ ಯಾಗಾರಬಹುದು ಅಷ್ಟೇ ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆ ದೊಡ್ಡ ದೊಡ್ಡ ಯೋಜನೆಗಳನ್ನು ಜಾರಿಗೆ ತರುತ್ತೇನೆ.
ಇದರ ಜೊತೆಗೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ,
ಈ ಭಾಗಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರತಿಯೊಂದು ಗ್ರಾಮದಲ್ಲಿ ಶಾಲಾ ಕಟ್ಟಡಗಳು ಮತ್ತು ನಮ್ಮ ಭಾಗದ ಹೆಮ್ಮೆಯ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಆಗತ್ಯ ಅನುದಾನ ಜಾರಿಗೆ ಅಧಿವೇಶನದಲ್ಲಿ ನೀರಂತರವಾಗಿ ಧ್ವನಿಯೆತ್ತಿ ನಿಮ್ಮ ಸಹಕಾರದಿಂದ ಅನುದಾನ ತಂದಿದ್ದೇನೆ.
ಪ್ರತಿಯೊಬ್ಬ ಫೋಷಕರು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಒದಸಲು ಮುಂದಾಗಬೇಕು, ಗ್ರಾಮೀಣ ಪ್ರದೇಶದ ಶಿಕ್ಷಣದ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ೧೦ ಕೆಜಿ ಅಕ್ಕಿ ಕೊಡ್ತೀವಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು ೨೦೦೦ ಕೊಡ್ತೀವಿ ವರ್ಷಕ್ಕೆ ೨೪೦೦೦ ಕೊಡ್ತೀವಿ.೨೦೦ ಯೂನಿಟ್ ವಿದ್ಯುತ್ ಫ್ರೀ ಕೊಡ್ತೀವಿ.
ನಿರೂದ್ಯೋಗ ಯುವಕ ಯುವತಿಯರಿಗೆ ತಿಂಗಳಿಗೆ ಮೂರು ಸಾವಿರ ಕೊಡ್ತೀವಿ,
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗೌರವ ಧನ ಹೆಚ್ಚಳ ಸೇರಿದಂತೆ ಹಲವಾರು ಯೋಜನೆಗಳು ಅದಕ್ಕಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ.
ನೀಡಿದ್ದೇವೆ, ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುತ್ತೇವೆ.ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸಿ, ೫ ವರ್ಷಗಳ ಸೇವೆ ಸಲ್ಲಿಸಿದ್ದೇನೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವತ್ತೂ ದಕ್ಕೆ ತರೋದಿಲ್ಲ ನಿಮ್ಮ ಸೇವಕನಾಗಿ ಕ್ಷೇತ್ರದ ಜನರಿಗಾಗಿ ೨೪ ಗಂಟೆ ದುಡಿಯುತ್ತೇನೆ, ನನ್ನ ಕುಟುಂಬಕ್ಕೆ ಕೂಡ ನಾನು ಸಮಯ ಕೊಟ್ಟಿಲ್ಲ ನನ್ನ ಕುಟುಂಬ ಎಂದರೆ ರಾಯಚೂರು ಗ್ರಾಮೀಣ ಕ್ಷೇತ್ರದ ಜನರು ಆ ಕುಟುಂಬಕ್ಕಾಗಿ ಮನೆಯ ಮಗನಾಗಿ ದುಡಿಯುತ್ತೇನೆ.
ನಿಮ್ಮ ಆರ್ಶಿವಾದದಿಂದ ನಾನು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಕೂಡ ಎಲ್ಲಾ ಹಳ್ಳಿಗಳಲ್ಲೂ ಒಂದಲ್ಲ ಒಂದು ಕೆಲಸ ಮಾಡಿದ್ದಾನೆ ನಾವು ಅಧಿಕಾರಕ್ಕೆ ಬಂದಮೇಲೆ ರಾಯಚೂರು ಗ್ರಾಮೀಣ ಕ್ಷೇತ್ರ ಮಾದರಿ ಕ್ಷೇತ್ರವಾನ್ನು ಮಾಡುತ್ತೇನೆ.
ರಾಯಚೂರು ಗ್ರಾಮೀಣ ಪ್ರದೇಶ ಮಳೆ ಆಶ್ರಯಿತ ಒಣ ಭೂಮಿ ಆಗಿದ್ದು, ಈ ಕ್ಷೇತ್ರದ ನೀರಾವರಿಗಾಗಿ ಕೆರೆಗಳನ್ನು ತುಂಬಿಸುವ ಲಿಫ್ಟ ಇರಿಗೇಶನ್ ಮಾಡಲು ಅನುವು ಮಾಡಿಕೊಡುತ್ತೇವೆ.
ಮಾಜಿ ಶಾಸಕರೊಬ್ಬರು ನಾನು ತಂದೀನಿ ಅಂತ ಹೇಳಿಕೊಂಡು ತೀರುಗಾಡುತ್ತಿದ್ದಾರೆ, ಕ್ಷೇತ್ರದ ೫ ವರ್ಷದ ಆಡಳಿತದಲ್ಲಿ ಏನು ಕೆಲಸ ಮಾಡಿಲ್ಲ ಅವರು, ನನ್ನನ್ನು ಆಯ್ಕೆ ಮಾಡಿದ ದಿನದಿಂದಲೂ ರಾಯಚೂರು ಗ್ರಾಮೀಣ ಕ್ಷೇತ್ರದ ಜನರೇ ನನ್ನ ಕುಟುಂಬ ಎಂದು ತಿಳಿದು ಕ್ಷೇತ್ರದ ಮನೆ ಮಗನಾಗಿ ನಿರಂತರವಾಗಿ ನಿಮ್ಮ ಸೇವಕನಾಗಿ, ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇನೆ.
ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ ನಿರ್ಮಾಣವಾಗುತ್ತದೆ, ಮತ್ತು ಗುಂಜಳ್ಳಿ,ಗಧಾರ ಕೆರೆ ತುಂಬುವ ಯೋಜನೆ ಅನುಮೊದನೆಯಗಾಗಿ ನಬಾರ್ಡ ಯೋಜನೆಯಡಿ ಸಿದ್ಧವಾಗಿದೆ. ಇನ್ನೇನೂ ಕಾಮಗಾರಿ ಪ್ರಾರಂಭಯವಾಗಬೇಕು.
ಈಗಾಗಲೇ ಬಂಗಾರಪ್ಪ ಕರೆ ತುಂಬುವ ಯೋಜನೆಗೆ ಸರ್ಕಾರ ೨೦೦ ಕೋಟಿ ರೂಪಾಯಿ ಘೋಷಣೆಯಾಗಿದೆ, ಕಾಮಗಾರಿ ಕೂಡ ಪ್ರಾರಂಭವಾಗಿದೆ.
ಕಾಲುವೆ ನೀರಾವರಿ, ಕೆರೆ ತುಂಬಿಸುವ ಯೋಜನೆಗಳು, ಏತ ನೀರಾವರಿ ಇನ್ನೂ ಹಲವಾರುಯೋಜನೆ ಜಾರಿಗೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ,
ನನ್ನ ರೈತಬಾಂದವರಿಗೆ ಬೇಕಾದಂತಹ ನೀರಾವರಿ ಸೌಲಭ್ಯ ಕೊಡಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತೇನೆ.ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವುದು ನನ್ನ ಆಶಯವಾಗಿದೆ,
ಇಡೀ ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ಮುಖಂಡರುಗಳು, ಮತ್ತು ನನ್ನ ಕ್ಷೇತ್ರದ ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡೋದಿಲ್ಲ ನಿಮಗೆ ಋಣಿಯಾಗಿ ಸದಾ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸುತ್ತೇನೆ
ಬರುವಂತಹ ದಿನಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.