ಗ್ರಾಮೀಣ ಕ್ಷೇತ್ರ: ತಿಪ್ಪರಾಜು ಹವಾಲ್ದಾರ್ ನಾಮಪತ್ರ ಸಲ್ಲಿಕೆ

ಕ್ಷೇತ್ರದಲ್ಲಿ ನನ್ನ ಗೆಲುವು ದಾಖಲೆ- ತಿಪ್ಪರಾಜು
ರಾಯಚೂರು, ಏ.೧೫- ಮಾಜಿ ಶಾಸಕ ತಿಪ್ಪರಾಜು
ಹವಾಲ್ದಾರ್ ಅವರು ಇಂದು ಸಾಂಕೇತಿಕವಾಗಿ
ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಅವರಿಂದು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಕುಟುಂಬ ಸಮೇತ ನಂದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನಗರದ ತಹಸೀಲ್ದಾರ್ ಕಚೇರಿ ಆಗಮಿಸಿ ಚುನಾವಣಾಧಿಕಾರಿ ಶಶಿಕಾಂತ್ ಶಿವಪೂರೆ ನಾಮಪತ್ರ ಸಲ್ಲಿಸಿದರು.
ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ತಾಯಿ ಗೌರಮ್ಮ, ಅಮರಮ್ಮ ಸಂಚಾಲಕರು, ಶಂಕರಗೌಡ ಮಿರ್ಜಾಪೂರು, ಜಗದೀಶ ವಕೀಲರು ಬೆಂಬಲಿಗರು ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ತಿಪ್ಪರಾಜು ಹವಾಲ್ದಾರ್ ಅವರು ಇಂದು ಶನಿವಾರ ನಂದಿಶ್ವರ ದೇವಸ್ಥಾನ, ಮನೆ ಪಂಚಮುಖಿ ಅಂಜಿನಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಆಗಮಿಸಿ ಭಿ, ಫಾರಂ ಜೊತೆಗೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.೧೯ ರಂದು ರಾಜ್ಯ ಮುಖಂಡರು ಜಿಲ್ಲಾ ಮುಖಂಡರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಮುಖಂಡರು ಕಾರ್ಯಕರ್ತರ, ಅಪಾರ ಬೆಂಬಲಿಗಾರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು. ಸುದ್ದಿಗಾರರು ಕೇಳಿದ ಪ್ರೆಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುದ ಧೀಮಂತ ನಾಯಕ ನರೇಂದ್ರ ಅವರು ಎಂದರು.
ಈ ಭಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ದಾಖಲೆ ಸೃಷ್ಟಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸ್ವಯಂಪ್ರೇರಿತವಾಗಿ ಗ್ರಾಮೀಣ ಜನತೆ ಪ್ರಚಾರ ಕಾರ್ಯಕ್ಕೆ ಪ್ರತಿ ನಿತ್ಯ ೧೯ ಸಾವಿರ ದೇಣಿಗೆ ನೀಡುತ್ತಿದ್ದರೆ ಎಂದರು. ಕಳೆದ ಭಾರಿ ಗ್ರಾಮೀಣ ಶಾಸಕರಾದಾಗ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ರೈತರಿಗೆ ನಿತ್ಯ ೧೨ ತಾಸು ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ ಎಂದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೇ ಎಂದರು.