ಗ್ರಾಮೀಣ ಕ್ಷೇತ್ರದ ಮುಖಂಡರ ಸಭೆ
 ಗೆಲುವಿಗಾಗಿ ಎಲ್ಲರ ಶ್ರಮ ಅಗತ್ಯ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಮತ್ತೆ ನಾನು ಈ ಬಾರಿ‌ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವೆ. ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ನಿನ್ನೆ ಶಬರಿ ಯಾತ್ರಗೆ ತೆರಳುವ ಮುನ್ನ. ನಗರದ ರಾಕ್ ಗಾರ್ಡನ್ ಹೊಟೆಲ್ ಸಭಾಂಗಣದಲ್ಲಿ ಕ್ಷೇತ್ರದ ಪ್ರತಿ ಹಳ್ಳಿಗಳಿದ ಮುಖಂಡರನ್ನು ಕರೆಸಿ ನಡೆಸಿದ ಚುನಾವಣಾ ಸಿದ್ದತೆ ಸಭೆಯಲ್ಲಿ ಮಾತನಾಡುತ್ತಿದ್ದರು. 
ಗ್ರಾಮೀಣ ಕ್ಷೇತ್ರ ನನ್ನ ರಾಜಕೀಯ ಜೀವನದ ಮಹತ್ವದ ಕ್ಷೇತ್ರ. ಈ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧೆ ಮಾಡಿದಾಗಲೆಲ್ಲ ಬರ್ಜರಿ ಮತಗಳಿಂದ ಆಯ್ಕೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಉನ್ನತ ಮಟ್ಟದ ನಾಯಕನಾಗಿ ಬೆಳೆಯಲು ಕಾರಣವಾಗಿದೆ. ಆಗಿನ‌ ಪರಿಸ್ಥಿತಿ ಬೇರೆ. ಈಗಿನ ಪರಿಸ್ಥಿತಿ ಬೇರೆ. ಈಗ ನಮ್ಮ ಪ್ರತಿ ಸ್ಪರ್ಧಿಗಳು ಸಂಘಟಿತರಾಗಿರುವಂತೆ ನಾವೂ ಯಾವುದಕ್ಕೂ ಹೆದರದೆ ಜನಮರ ಮನ ಗೆದ್ದು ಚುನಾವಣೆ ಗೆಲ್ಲಬೇಕು. ಪ್ರತಿ ಪಕ್ಷಗಳು ತೋರುವ ಅಧಿಕಾರದ ಆಸೆ ಅಮಿಷಗಳಿಗೆ ಬಲಿಯಾಗುವುದು ಬೇಡ ಎಂದರು.
ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ, ಕೆ.ಎ.ರಾಮಲಿಂಗಪ್ಪ, ಗ್ರಾಮೀಣ  ಮಂಡಲ ಅಧ್ಯಕ್ಷ ಹೆಚ್.ಆರ್.ಮಲ್ಲಿಕಾರ್ಜುನಗೌಡ, ಒಬಳೇಶ ಮೊದಲಾದವರು ಇದ್ದರು.