ಗ್ರಾಮೀಣ ಕ್ಷೇತ್ರದಲ್ಲಿ ದದ್ದಲ್ ಹವಾ

ರಾಯಚೂರು, ಮೇ.೦೧- ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸೂಗೂರು ಹಾಗೂ ಯದ್ಲಾಪೂರು ಗ್ರಾಮದಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಬಿರುಸಿನ ಪ್ರಚಾರ ಕೈಗೊಂಡರು.
ಗ್ರಾಮೀಣ ಜನರು ಬಸನಗೌಡ ದದ್ದಲ್ ಅವರಿಗೆ ಬೃಹತ್ ಹಾರ ಹಾಕುವುದರ ಮೂಲಕ ಸ್ವಾಗತಿಸಿದರು. ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಜನರು ಸ್ವಯಂಪ್ರೇರಿತವಾಗಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಬಸನಗೌಡ ದದ್ದಲ್ ಅವರಿಗೆ ಬೆಂಬಲ ಸೂಚಿಸಿದರು. ಪ್ರತಿಯೊಬ್ಬರ ಮುಖದಲ್ಲಿ ಕಾಂಗ್ರೆಸ್ ಜಯದ ಘೋಷಣೆ ವಿಶ್ವಾಸ ಎದ್ದು ಕಾಣುತ್ತಿತ್ತು, ಕಾಂಗ್ರೆಸ್ ಗ್ಯಾರಂಟಿ ಜನರ ಬದುಕು ಹಸನರಾಗುವುದು ಗ್ಯಾರಂಟಿ ಎಂಬುದು ದದ್ದಲ್ ಬಿರುಸಿನ ಪ್ರಚಾರ ಮೊಳಗಿತ್ತು.
ಕ್ಷೇತ್ರದಲ್ಲಿ ಬಸನಗೌಡ ದದ್ದಲ್ ಅವರು ಮನೆ ಮನೆಗೆ ಪ್ರಚಾರ ಕಾರ್ಯ ಕೈಗೊಳ್ಳುವುದರ ಮೂಲಕ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕನಾದ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಗೆ ಕಾರ್ಯ ಕೈಗೊಂಡಿದ್ದೇನೆ ಎಂದರು. ರಾಜ್ಯಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ಆರ್ ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ಘಟಕಗಳನ್ನು ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಬಗ್ಗೆ ಅಧಿವೇಶನದಲ್ಲಿ ನಿರಂತರವಾಗಿ ಧ್ವನಿಯೆತ್ತಿದೆ, ಸರ್ಕಾರದ ಮೇಲೆ ಒತ್ತಡ ಹೇರಿವುದರ ಮೂಲಕ ಶಾಖೋತ್ಪನ್ನ ಪುನರಾರಂಭಕ್ಕೆ ದ್ವನಿಯಾಗಿದ್ದೇನೆ ಎಂದರು. ನನ್ನ ಗ್ರಾಮೀಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಶೇ. ೮೦ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ೧೦ ಕೆಜಿ ಅಕ್ಕಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ, ಹಾಗೂ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು.
ನಿರೂದ್ಯೋಗ ಯುವಕ ಯುವತಿಯರಿಗೆ ಮಾಸಿಕ ಮೂರು ಸಾವಿರ ಸಹಾಯ ಧನ ನೀಡಲಾಗುವುದು ಅದಕ್ಕಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುತ್ತೇವೆ ಎಂದರು. ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಯೋಜನೆಗೆ ನಾನು ಸದಾ ಬದ್ದ ಈಗಾಗಲೇ ಕೆರೆ ತುಂಬಿಸುವ ಯೋಜನೆ ಕಾಮಗಾರಿ ನಡೆದಿದೆ ಬರುವಂತಹ ದಿನಗಳಲ್ಲಿ ಕ್ಷೇತ್ರವನ್ನು ಸಂಪೂರ್ಣ ನಿರಾವರಿ ಯೋಜನೆ ಜಾರಿಗೆ ತರಲು ಸಿದ್ದನಿದ್ದೇನೆ ಎಂದರು. ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ವಿಶ್ವಾಸದೊಂದಿಗೆ ೫ ವರ್ಷ ಕ್ಷೇತ್ರದ ದ್ವನಿಯಾಗಿ ಸೇವೆ ಸಲ್ಲಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.