ರಾಯಚೂರು,ಏ.೨೮- ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರನ್ನು ಭವ್ಯ ಸ್ವಾಗತ ಮಾಡುತ್ತಿದ್ದಾರೆ. ಬೃಹತ್ ಮೆರವಣಿಗೆ ಮೂಲಕ ಜೆಸಿಬಿಗಳಿಂದ ಹೂ ಮಳೆ ಸುರಿಸುತ್ತಾ ಜಯ ಘೋಷದೊಂದಿಗೆ ಸ್ವಾಗತಿಸುತ್ತಿದ್ದಾರೆ.
ಮಟಮಾರಿ, ಕುರ್ಡಿ ಗ್ರಾಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ತಿಪ್ಪರಾಜು ಅವರು ಶಾಸಕರಾದರೆ ಮಾತ್ರ ನಮ್ಮ ಕ್ಷೇತ್ರ ಅಭಿವೃದ್ದಿಯಾಗುವುದು. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಮುಖಂಡರು ಹೇಳಿದರು.
ಕುರ್ಡಿ ಗ್ರಾಮದಲ್ಲಿ ರೋಡ್ ಶೋ:
ಜನರು ಕುರ್ಡಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ರೋಡ್ ಶೋ ಮೂಲಕ ಮನೆ ಮನೆಗೆ ತೆರಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬೇಸತ್ತು ಶಣ್ಮುಕಪ್ಪ ಗ್ರಾಮ ಪಂ ಮಾಜಿ ಸದಸ್ಯ, ಅಂಜನೇಯ್ಯ ಗ್ರಾ.ಪಂ. ಮಾಜಿ ಸದಸ್ಯ, ಅಭ್ರಂ, ಸಾಯಿಬಣ್ಣ, ತಾಯಣ್ಣ, ಸಿದ್ದಪ್ಪ, ಪ್ರಭು, ಶ್ರೀಕಾಂತ ಸಾಹುಕಾರ, ರಾಜಕುಮಾರ ಮಾಜಿ ಗ್ರಾ.ಪಂ. ಸದಸ್ಯರು, ಮಲ್ಲಿಕಾರ್ಜುನ ಮಾಜಿ ಗ್ರಾ.ಪಂ. ಸದಸ್ಯರು, ಅಂಬರೇಶ ಬೋವಿ, ಈರಪ್ಪ ನಾಯಕ, ಹುಚ್ಚಪ್ಪ ಮಾಜಿ ಗ್ರಾಮ ಪಂ ಸದಸ್ಯರು, ತಾಯಣ್ಣ, ಬಡೇಸಾಬ್, ಅಬ್ದುಲ್ ಅಹ್ಮದ್, ಹನುಮಂತ ಬೋವಿ, ರವಿ, ಹನುಮಂತ, ಕೆಂಡರಾಯ, ಶಿವಲಿಂಗಪ್ಪ, ಈರಣ್ಣ ಕಸ್ತೂರಿ, ಹುಲಿಗಪ್ಪ, ದೇಸಾಯಿ ಹನುಮಂತ, ಶಾಂತಪ್ಪ ಜಗದೀಶ, ಮಲ್ಲೇಶ, ಉಚ್ಚಪ್ಪ ಮಾಜಿ ಗ್ರಾ.ಪಂ.ಸ, ಆದ್ಯಪ್ಪ ಬೋವಿ, ಪವನ ಕುಮಾರ, ರಮೇಶ ಬೋವಿ, ಬುಜ್ಜಿ ಬೋವಿ, ಈರಣ್ಣ, ಶಿಲ ಕುಮಾರ ಕುರ್ಡಿಕರ್, ದೇವರಾಜ ಗೊರವರು, ನಾಗರಾಜ ಬೋವಿ, ಚಿನ್ನಿ ಪುಂಡೆಪಲ್ಲಿ, ತಾಯಪ್ಪ ಮಾರ್ಲ, ಗೇರಿಸ್ಬಾಮಿ, ಯೇಸು, ರಾಮಣ್ಣ, ಪ್ರಸಾದ, ದಾವಿದ್, ಅಯ್ಯಪ್ಪ, ಪರಶಪ್ಪ, ರಾಮು, ವಿಜಯ, ನಾಗೇಶ ದೇಸಾಯಿ, ಜಾನ್ ಮಂಚರ್ಲಾ, ಆಟೋ ಭಾಸ್ಕರ್, ಮಿಟ್ಟಿ ಗುಂಡಪ್ಪ, ಲಕ್ಷ್ಮಣ, ರಾಜಪ್ಪ, ಗೌರಿ ಶಂಕರ, ಹನುಮಂತರಾಯ, ಗೋವಿಂದ, ಸಂಗಮೇಶ, ರಾಮಯ್ಯ ಕಪಗಲ್, ಹುಲಿಗೆಪ್ಪ,ಮರಿಯಪ್ಪ, ಕಪಗಲ್ ಈರಣ್ಣ, ಬಸವರಾಜ ಮಜ್ಜಿಗೆ, ಅಮರೇಶ ಉಪ್ಪಾರ, ವಿರೇಶ, ನೀಲಪ್ಪ ಮಾಸ್ಟರ್, ಈರಪ್ಪ, ಪೊಸ್ಟ ಯಲ್ಲಪ್ಪ, ಅರುಣ ಗಾದೆ, ಮೂಕಪ್ಪ, ಪರಮೇಶ, ಮಲ್ಲೇಶ, ರೆಡ್ಡಿ, ಬಸವರಾಜ, ಶಂಕ್ರಪ್ಪ, ವಿರುಪಾಕ್ಷಿ, ತಿಕ್ಕಯ್ಯ, ಬೀರ, ತಾಯಪ್ಪ, ಮಹಾದೇವ, ಲಿಂಗಪ್ಪ, ಗುಡಿಸಲು ಶರಣ, ಜಂಬಣ್ಣ, ಸೇರಿದಂತೆ ೩೦೦ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಮಟಮಾರಿ ಗ್ರಾಮದಲ್ಲಿಯೂ ಮತಯಾಚನೆ ಮಾಡಿದರು ಅಲ್ಲಿಯೂ ತಿಪ್ಪರಾಜು ಹವಲ್ದಾರ ಪರ ಅಲೆ ಎದ್ದಿದ್ದು ಕಾಂಗ್ರೆಸ್, ಜೆಡಿಎಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಭಾರತೀಯ ಜನತಾ ಪಕ್ಷಕ್ಕೆ ರಾಜಪ್ಪ, ವಿಲಿಯಂ, ಯೇಸು, ವಿಜಯ, ಸುರೇಂದ್ರ, ಯೇಸುರಾಜ, ಚಿನ್ನಿ ಮಲ್ಲಯ್ಯ, ಚಿನ್ನಿ ಬಾಲೂಗೂಡು, ಚಂದ್ರಲುಕಪ್ಪ, ಡ್ಯಾನಿಯಲ್, ಸುರೇಶ, ದೇವೆಂದ್ರಪ್ಪ, ರಾಜು, ಮುನ್ನ, ಶ್ಯಾಮಸುಂದರ, ಪ್ರದೀಪ್, ವೀನೋದ್, ಗಾಬ್ರಿಲ್, ಅಬ್ರಹಾಂ, ದಿನದಯಾಳ್, ಮಾರ್ಕರಾಜ, ಮೈಕಲ್, ಸುದೀರ್, ಮುತ್ತು, ಸತೀಶ ಕುಮಾರ, ಅಜಯ, ತರುಣ ಸಾಗರ, ಅರವಿಂದ, ರಾಜರತ್ನ, ರಾಹುಲ್ ಸೇರಿದಂತೆ ೧೫೦ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಊರಿನ ಹಿರಿಯರು, ಪಕ್ಷದ ಮುಖಂಡರು. ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ಮಟಮಾರಿ ಗ್ರಾಮದಲ್ಲಿ ನೂರಾರು ಮುಖಂಡರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು. ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಅವರನ್ನು ಗ್ರಾಮದ ಮುಖಂಡರು ಮೆರವಣಿಗೆ ಮೂಲಕ ಸ್ವಾಗತಿಸಿದರು. ತಿಪ್ಪರಾಜು ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.