ಗ್ರಾಮೀಣ ಕ್ರೀಡೆಗಳ ಉಳಿಸಿ, ಬೆಳೆಸಿ: ನುರೋದ್ದೀನ್ ಸಲಹೆ

ಹುಮನಾಬಾದ್:ನ.7: ಆಧುನಿಕ ಯುಗದಲ್ಲಿ ಯುವ ಸಮುದಾಯ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದರ ಜತೆಗೆ ಗ್ರಾಮೀಣ ಭಾಗದ ಕುಸ್ತಿ ಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಸ್ತಾನ ನುರೋದ್ದೀನ್ ಅವರು ಸಲಹೆ ನೀಡಿದರು.
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಹಜರತ ಸೈಯದ ಅಮಿರೋದ್ದಿನ್ ಸಾಹೇಬ ದರ್ಗಾದ ಉರುಸ್ಸ ಎ ಶರೀಫ್ ಅಂಗವಾಗಿ ಶುಕ್ರವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಕುಸ್ತಿ ಪಟುಗಳಿಗೆ ಟ್ರೋಫಿ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಮಹಾಮಾರಿ ಕೊರೊನಾ ನಿಯಂತ್ರಿಸಲು, ಮಾಸ್ಕ್, ಅಂತರ ಕಾಯ್ದುಕೊಳ್ಳವುದು, ಏಷ್ಟು ಮುಖ್ಯವೂ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಕ ಆಹಾರ ಸೇವನೆ ಮತ್ತು ಕ್ರೀಡೆಗಳು ಕುಡ ಅಷ್ಟೆ ಮಹತ್ವದ್ದಾಗಿದೆ, ಎಂದರು.
ಹಿಂದೆ ನಮ್ಮ ಪುರ್ವಜರು ಹೆಚ್ಚಾಗಿ ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಇಂದು ಆಧುನಿಕ ಯುಗದಲ್ಲಿ ಮನುಷ್ಯ ಹಲವು ರೀತಿಯ ರೋಗಗಳಿಗೆ ಒಳಗಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ. ಎಂದು ಹೇಳಿದರು.
ಇದೇ ವೇಳೆ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದು ಬೆಳಮಗಿಗೆ ನರಸಿಂಹ ರೆಡ್ಡಿ ಅವರಿಂದ 11 ತೊಲ ಬೆಳ್ಳಿ ಖಡಗ ಮತ್ತು ಪ್ರಕಾಶ ಠಾಕುರ ಕಡೆಯಿಂದ 5 ಸಾವಿರ ನಗದು ಹಣ ನೀಡಿದರು. ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಸ್ತಾನ ನುರೋದ್ದೀನ್ ಅವರು ವಿಜೇತರಾದ ಕುಸ್ತಿ ಪಟುಗಳಿಗೆ ಟ್ರೋಫ್ ಮತ್ತು ಮೆಡಲ್ ವಿತರಿಸಿದ ಅವರು ಬಂಧಂತಹ ಭಕ್ತಿರಿಗೆ ಅನ್ನದಾಸೋಹ ಏರ್ಪಡಿಸಿದರು.
ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರದೀಪ ಭುರೆಗೆ 2500 ಮತ್ತು ತೃತೀತ ಸ್ಥಾನ ಪಡೆದ ಸಚಿನ ಮೂಳೆ ಅವರಿಗೆ ದರ್ಗಾ ಸಮಿತಿಯಿಂದ 2000 ನಗದು ಹಣ ನೀಡಿ ಸನ್ಮಾನಿಸಲಾಯಿತು.
ಹಜರತ ಸೈಯದ ಅಮಿರೋದ್ದಿನ್ ಸಾಹೇಬ ದರ್ಗಾದ ಸಮಿತಿ ಅಧ್ಯಕ್ಷ ಮೈನೋದ್ದೀನ್ ಪಟೇಲ್ ಮನ್ನಳ್ಳಿ, ಉಪಾಧ್ಯಕ್ಷ ನವಾಜ ಶರೀಪ್, ಕಾರ್ಯದರ್ಶಿ ಸದ್ದಾಮ ಪಟೇಲ್, ಮಹೇಶ ಅಂಮಗೊಂಡ, ಪತ್ರಿಕಾ ವಿತರಕ ಅಕ್ಬರ್ ಮಂಗಲಗಿ, ಕ್ರೀಷ್ಣಾ ರೆಡ್ಡಿ, ಮಹೋನ ರೆಡ್ಡಿ, ಇರ್ಫಾನ್ ಪಟೇಲ್. ಶಿವಕುಮಾರ ಮನ್ನಾಎಖೇಳಿ, ಖುದ್ದೂಸ್, ಸೇರಿದಂತೆ ದರ್ಗಾ ಸಮಿತಿ ಸದಸ್ಯರು ಇದ್ದರು.