ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಫೆ.27: ತಾಲ್ಲೂಕಿನ ದಿದ್ದಗಿ ತಾಂಡಾದಲ್ಲಿ 21 ನೇ ಬಾರಿಗೆ ಜಿಲ್ಲಾ ಮಟ್ಟದ ಲೆಜೆಂಡ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಶ್ರೀ ಸೇವಾಲಾಲ್ ಕ್ರಿಕೇಟ್ ಕಪ್,ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೇವಾ. ಹೆಚ್.ನಾಯ್ಕ್ ಈ ಚಿಕ್ಕ ಊರಿನಲ್ಲಿ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ, ಗ್ರಾಮೀಣ ಭಾಗದ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿ ಕಳಿಸಬೇಕು.ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವುದೇ ಮುಖ್ಯ ಎಂದು ಹೇಳಿದರು.
ಮಲ್ಲಾನಾಯ್ಕ್ ಅಧ್ಯಕ್ಷರು ಸೇವಾಲಾಲ್ ಕ್ರಿಕೆಟ್ ಸಂಘ ದಿದ್ದಗಿ ತಾಂಡ ಇವರು ಉದ್ಘಾಟನೆ ಮಾಡಿದರು
ಮುಖ್ಯ ಅಥಿತಿಗಳಾಗಿ ಚಂದ್ರಾನಾಯ್ಕ್, ದ್ವಾರಕೇಶ್ ನಾಯ್ಕ್, ಸಂಪತ್ ಕುಮಾರ್, ಮಲ್ಲೇಶ್ ನಾಯ್ಕ್ ಆರ್, ಪರಮೇಶ್ವರ್ ನಾಯ್ಕ್, ಪಿ.ಅಜ್ಜಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಚಟ್ನಳ್ಳಿ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ,ವಿಶಾಲಾಕ್ಷಮ್ಮ ಮಂಜುನಾಥ್ ಗ್ರಾ. ಪಂ. ಉಪಾಧ್ಯಕ್ಷರು, ಕುಮಾರ್ ನಾಯ್ಕ್, ರಮೇಶ್ ನಾಯ್ಕ್ ಊರಿನ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.