
ಹುನಗುಂದ :ಸೆ.11: ಕಬಡ್ಡಿ ಮತ್ತು ಕುಸ್ತಿ ಆಟಗಳಿಗೆ ಚಟುವಟಿಕೆಗಳನ್ನು ವಿವರಿಸಿದರು. ಹೆಸರಾದ ಹುನಗುಂದ ನಾಡಿನೆಲ್ಲೆಡೆ ಖ್ಯಾತಿ ಪಡೆದಿದೆ. ಇಂಥ ಗ್ರಾಮೀಣ ಕ್ರೀಡೆಗಳು ಯುವಕರು ಹೆಚ್ಚು ಮನಸ್ಸು ಮಾಡಬೇಕು. ಆ ಮೂಲಕ ತಮ್ಮಆರೋಗ್ಯಕಾಯ್ದುಕೊಳ್ಳಬಹುದು ಮತ್ತು ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ನಗರದ ಶ್ರೀ ಉದಯ ಯುವಕ ಮಂಡಳಿ ಹಾಗೂ ಜಿಲ್ಲಾ ಅಮೋಚೂರ್ ಕಬಡ್ಡಿ ಅಸೋಸಿಯೇಷನ್ ಶ್ರೀ ಸಂಗಮೇಶ್ವರ ಜಾತ್ರೆಯ ನಿಮಿತ್ತ ಟಿಸಿಎಚ್ ಮೈದಾನದಲ್ಲಿ ಏರ್ಪಡಿಸಿದ ಎರಡು ದಿನಗಳ ಜಿಲ್ಲಾ ಮಟ್ಟದ ಪುರುಷರ ಚಾಂಪಿಯನ್‍ಶಿಪ್ ಟ್ರೋಫಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾದ ಹಿರಿಯ ಕ್ರೀಡಾಪಟು ಲಿಂಬಣ್ಣ ಮುಕ್ಕಣ್ಣವರ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಕ್ರೀಡಾಪಟು ಆಗಿ ತಮ್ಮ ಮನೆ ಮತ್ತು ಊರಿಗೆ ಹೆಸರು ತರಬೇಕು ಎನ್ನುತ್ತ ತಮ್ಮ ಕಾಲದ ಕ್ರೀಡಾ
ಶ್ರೀ ಸಂಗಮೇಶ್ವರ ಜೀರ್ಣೋದ್ಧಾರ ವ ಜಾತ್ರಾ ಕಮೀಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿ ನಿರ್ದೇಶಕ ರಾಮನಗೌಡ ಬೆಳ್ಳಿಹಾಳ, ವಿಎಂ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸಂಗಣ್ಣ ಗಂಜಿಹಾಳ, ತಾಪಂ ಇಒ ಮುರಲೀಧರ ದೇಶಪಾಂಡೆ, ಉದಯ ಯುವಕ ಮಂಡಳಿ ಅಧ್ಯಕ್ಷ ನಾಗಪ್ಪ ಆಲೂರ, ದಾನಿಗಳಾದ ವಿಶ್ವನಾಥ ಬ್ಯಾಳಿ, ನೀಲಪ್ಪ ತಪೇಲಿ, ಶಿವಾನಂದ ನಿರ್ವಾಲಿ, ಬಸವರಾಜ ಹೊಸೂರ, ನೀಲೇಶ ಮುಕ್ಕಣ್ಣವರ, ಸಮೀರ್ ದೇಶಪಾಂಡೆ, ಸುರೇಶ ಹಳಪೇಟಿ, ಪಿಎಸ್‍ಐ ಚೆನ್ನಯ್ಯ ದೇವೂರ, ಯುವ ಮುಖಂಡ ಮುತ್ತು ಲೋಕಾಪುರ, ಮಲ್ಲು ಅಂಟರತಾನಿ ಹಾಗೂ ಉದಯ ಯುವಕ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ರಾಜ್ಯ ಖಜಾಂಚಿ ಮಹಾಂತೇಶ ಮುಕ್ಕಣ್ಣವರ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ.ಕೊನೆಸಾಗರ ನಿರೂಪಿಸಿ ವಂದಿಸಿದರು.