ಗ್ರಾಮೀಣ ಕ್ರೀಡೆಗಳಿಂದ ಆರೋಗ್ಯ ವೃದ್ದಿ

ದೇವನಹಳ್ಳಿ, ಸೆ. ೨೩- ಯುವಕರು ಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಇದರಿಂದ ಆರೊಗ್ಯ ವಂತ ಜೀವನ ನಡೆಸಲು ಅನುಕೂಲವಾಗುತ್ತದೆ. ಎಂದು ವಿಶ್ವನಾಥ ಪುರ ಠಾಣೆಯ ಇನ್ಸ್ಪೆಕ್ಟರ್ ನಾಗಪ್ಪ ಅಂಬಿಗಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕು ವಿಶ್ವನಾಥಪುರ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ರೈತ ಮೊರ್ಚಾ ಗ್ರಾಮಾಂತ ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಟ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮೋದಿ ಕಪ್ ಕಬ್ಬಡಿ ಪಂದ್ಯಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಜನ್ಮ ದಿನಾಚರಣೆ ಸಂಬ್ರಮದಿಂದ ಆಚರಣೆ ಮಾಡಿ ದುಬಾರಿ ಹಣ ಖರ್ಚು ಮಾಡಿ ಆರೊಗ್ಯ ಕೆಡಿಸಿಕೊಳ್ಳುವ ಬದಲು, ಕ್ರೀಡಾ ಕೂಟ ಎರ್ಪಡಿಸಿದಲ್ಲಿ ಆರೊಗ್ಯ ವಂತರಾಗಿರುತ್ತಾರೆ ಎಂದರು
ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಜಿಲ್ಲಾಧ್ಯಕ್ಷರಾದ ಅಂಬರೀಶ್ ಗೌಡ ಅವರು ಮಾತನಾಡಿ ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಇದೇ ತಿಂಗಳು ೧೭ ರಿಂದ ಅಕ್ಟೋಬರ್ ೨ ರವರೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರುಗಳು ಸೇರಿ ಸೇವೆಗಾಗಿ ಸೇವಾ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ,ಅದರಂತೆಯೇ ಇಂದು ಈ ನರೇಂದ್ರ ಮೋದಿ ಕಪ್ ಎಂಬ ಹೆಸರಿನಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.ಇನ್ನೂ ಈ ಪಂದ್ಯದಲ್ಲಿ ೫ ತಂಡಗಳು ಭಾಗವಹಿಸಿದ್ದು ಬಿದಲೂರು ಮತ್ತು ಬೊಮ್ಮವಾರ ಗ್ರಾಮದ ಯುವಕರು ಅಂತಿಮ ಗಟ್ಟಕ್ಕೆ ತಲುಪಿ ಬಿದಲೂರು ಗ್ರಾಮದವರು ಜಯವನ್ನು ಗಳಿಸಿದ್ದರು ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚ ಜಿಲ್ಲಾಧ್ಯಕ್ಷರಾದ ಹೆಚ್ ಎಂ ರವಿಕುಮಾರ್ ಅವರು ಮಾತನಾಡಿ,ಈ ತಿಂಗಳಿನಲ್ಲಿ ದೇಶದ ಅನೇಕ ಮಹನೀಯರುಗಳ ಹುಟ್ಟುಗಳು ಇರುವುದರಿಂದ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನೆನಪುಗಳಿಗೆ ಬಿಜೆಪಿ ಕಾರ್ಯಕರ್ತರು ಮುಖಂಡರುಗಳು ಸೇರಿ ೧೫ ದಿನಗಳ ಕಾಲ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಕಬಡ್ಡಿ ಒಂದು ಗ್ರಾಮೀಣ ಭಾಗದ ಕ್ರೀಡೆಯಾಗಿದ್ದು ಅದನ್ನು ಎಲ್ಲರಿಗೂ ಅಚ್ಚು ಮೇಚ್ಚಿನಕ್ರೀಡೆ ಆಗಿದೆ, ಆದ್ದರಿಂದ ನಾವು ಈ ಕ್ರೀಡೆಯನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದರು. ಇದಲ್ಲದೆ ಇನ್ನೂ ಅನೇಕ ಕಡೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದ್ದಾರೆ ಎಂದು ತಿಳಿಸಿದರು.